Connect with us

ದಿನದ ಸುದ್ದಿ

ವಡಗೇರಾ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ ಕರವೇ ಪ್ರತಿಭಟನೆ

Published

on

 • ವರದಿ : ನಿಂಗಣ್ಣ

ಸುದ್ದಿದಿನ,ವಡಗೇರಾ : ವಡಗೇರಾ ನೂತನ ತಾಲೂಕು ಕೇಂದ್ರವಾಗಿ ಎರಡು ವರ್ಷ ಕಳೆದರೂ ಅಭಿವೃದ್ಧಿಮರೀಚಿಕೆಯಾಗಿದೆ. ತಹಶೀಲ್ದಾರ್ ಕಾರ್ಯಲಯ ಬಿಟ್ಟು ಇನ್ನುಳಿದ ಇಲಾಖೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಇಂದು ಕರವೇ ಜಿಲ್ಲಾ ಘಟಕ ಸೋಮವಾರ ಪ್ರತಿಭಟನೆ ನಡೆಸಿತು.

ವಡಗೇರಾ ಬಂದ್ ಹಿನ್ನಲೆ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮತ್ತು ಅಂಗಡಿ ಮುಂಗಟ್ಟುಗಳು ಮತ್ತುಮುಚ್ಚಲಾಗಿತ್ತು. ಸ್ಥಳೀಯ ವ್ಯಾಪಾರಿಗಳು ಭಾರಿ ಗಾತ್ರದ ಖಾಸಗಿ ವಾಹನಗಳನ್ನು ರಸ್ತೆಗೆ ಇಳಿಯದಂತೆ ರಸ್ತೆ ತಡೆದು ಕ.ರ.ವೇ ವತಿಯಿಂದ ಬೃಹತ್ ಪತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಸರ್ಕಾರಿ ಸಮುದಾಯ ಆಸ್ಪತ್ರೆಯಿಂದ ವಾಲ್ಮೀಕಿ ಚೌಕದವರೆಗೋ ರಾಜ್ಯ ಸರ್ಕಾರ ದ ವಿರುದ್ಧ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಘೋಷಣೆ ಕೋಗುತ್ತಾ
ವಾಲ್ಮೀಕಿ ಚೌಕದಲ್ಲಿ ಧರಣಿ ಕೂತು
ವಡಗೇರಾ ತಾಲೂಕಿನ ಜನರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ದಿನ ನಿತ್ಯದ ಕೆಲಸಕ್ಕಾಗಿ ವಡಗೇರಾ ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಬಡ ಕಾರ್ಮಿಕರು, ವಿದ್ಯಾರ್ಥಿಗಳು,ಮಹಿಳೆಯರು, ವೃದ್ಧರು,ಅಂಗವಿಕಲರು, ಒಂದು ಸಣ್ಣ ಕೆಲಸಕ್ಕಾಗಿ ಹಳೆ ತಾಲೂಕಾದ ಶಹಾಪುರ ಪಟ್ಟಣಕ್ಕೆ ಹೋಗಬೇಕಾದ ದುಃಸ್ಥಿತಿ ಬಂದಿದೆ ಎಂದು ವಾಸ್ತವ ತೆರೆದಿಟ್ಟರು.

ವಡಗೇರಾ ತಾಲೂಕ ಹಿಂದುಳಿದ ಸಾಮಾನ್ಯ ಬಡ ಜನರ ತಾಲೂಕು ಆಗಿದ್ದು ತಮ್ಮ ಕೆಲಸ ಕಾರ್ಯಗಳು ಬಿಟ್ಟು ಹೋಗುವುದರಿಂದ ಒಂದು ದಿನ ವ್ಯರ್ಥವಾಗುತ್ತದೆ ಇದಕ್ಕೆ ನೇರ ಕಾರಣ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರು ಎಂದು ಆರೋಪಿಸಿದರು.

ಜನಪ್ರತಿನಿಧಿಗಳು ಜಿಲ್ಲಾಡಳಿತದ ನಿಷ್ಕಾಳಜಿ ತನ ದಿವ್ಯ ನಿರ್ಲಕ್ಷತನ ತೋರಿಸುತ್ತದೆ ಹಿಂದುಳಿದ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮತ್ತು ತಕ್ಷಣದಿಂದಲೇ ಎಲ್ಲ ಇಲಾಖೆಗಳು ಪ್ರಾರಂಭಮಾಡಿ ಈ ಭಾಗದ ಎಲ್ಲಾ ವರ್ಗದ ಜನರಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತೆ ಅನುಕೂಲ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಟಿ. ನಾರಾಯಣಗೌಡ ಬಣ ಪ್ರತಿಭಟನೆ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತು.

ಬೇಡಿಕೆಗಳು ಈ ರೀತಿಯಾಗಿವೆ

 1. ವಡಗೇರಾ ತಾಲ್ಲೂಕು ಎಲ್ಲಾ ಸರ್ಕಾರ ಕಚೇರಿಗಳು ಪೂರ್ಣಪ್ರಮಾಣದಲ್ಲಿ ಪ್ರಾರಂಭವಾಗಬೇಕು.
 2. ಉಪಖಜಾನೆ ಮತ್ತು ಮುದ್ರಾಂಕ ಹಾಗೂ ನೋಂದಣಿ ಇಲಾಖೆ ಪ್ರಾರಂಭಿಸಬೇಕು.
 3. ತಾಲೂಕಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ತಾಲೂಕು ನ್ಯಾಯಾಲಯ ಸ್ಥಾಪಿಸಬೇಕು.
 4. ತಾಲೂಕು ಕೇಂದ್ರದಿಂದ ಹೋಗುವ ಎಲ್ಲಾ ಗ್ರಾಮಗಳಿಗೆ ರಸ್ತೆ ಸುಧಾರಣೆ ಮಾಡಬೇಕು.
 5. ಈ ಭಾಗದ ರೈತರಿಗೆ ಪದವಿಪೂರ್ವ ಕಾಲೇಜು ಮಹಾವಿದ್ಯಾಲಯ ಡಿಪ್ಲೋಮ್ ಡಿ.ಇ.ಡಿ. ಬಿ.ಇ.ಡಿ ಕಾಲೇಜು ಸ್ಥಾಪನೆ ಮಾಡಬೇಕು.
 6. ಮೆಟ್ರಿಕ್ ಪೂರ್ವ ಮೆಟ್ರಿಕ್ ನಂತರ ವಸತಿ ನಿಲಯವನ್ನು ಮಂಜೂರು ಮಾಡಬೇಕು.
 7. ವಡಗೇರಾ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಬೇಕು.
 8. ತಾಲೂಕು ಕೇಂದ್ರದಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದ್ದು ಅದನ್ನು ತಾಲೂಕ ಆಸ್ಪತ್ರೆಯಾಗಿ ಮಾಡಬೇಕು.
 9. ಕದ್ರಾಪುರ ವಡಗೇರಾ ಕೃಷ್ಣ ಬ್ಯಾರೇಜ್ ನಿಂದ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
 10. ಕೃಷ್ಣ ಭಾಗ್ಯ ಜಲ ನಿಗಮದಿಂದ
  ಕೈಗೆತ್ತಿಕೊಂಡಿರುವ ಕೊನೆಯ ಭಾಗದ ಕಾಲುವೆ ಕಾಮಗಾರಿಗಳು ಹಾಗೂ ನವೀಕರಣ ಕಾಮಗಾರಿಗಳು ಸಮರ್ಪಕವಾಗಿ ಮಾಡಿ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿ ಅನುಕೂಲ ಮಾಡಿಕೊಡಬೇಕು.

ಭೀಮ ನಾಯಕ್ ಕ.ರ.ವೇ ಜಿಲ್ಲಾಧ್ಯಕ್ಷರು ಯಾದಗಿರಿ ಅಫರ ಜಿಲ್ಲಾಧಿಕಾರಿಗಳಿಗೆ ಹಾಗೂ ವಡಗೇರಾ ತಹಶೀಲ್ದಾರ್ ಸಂತೋಷಿ ರಾಣಿ ಹಾಗೂ ವಡಗೇರಾ ಪಿ.ಎಸ್.ಐ.ಸಿದ್ದಾರಾಯ ಬೂಳರ್ಗಿ ಅವರಿಗೆ ಮನವಿ ಪತ್ರ ನೀಡುವ ಮುಖಾಂತರ ಪ್ರತಿಭಟನೆಯನ್ನು
ಮುಟುಕುಗೊಳಿಸಿದರು.

ಈ ಸಂದರ್ಭದಲ್ಲಿ ಶಿವಕುಮಾರ್ ಕೊಂಕಲ್ ತಾಲೂಕ್ ಅಧ್ಯಕ್ಷರು ವಡಗೇರಾ, ಅಬ್ದುಲ್ ಚಿಗನೂರ್ ಜಿಲ್ಲಾ ಉಪಾಧ್ಯಕ್ಷರು,ಚೌಡಯ್ಯ ಬಾವೂರ ಜಿಲ್ಲಾ ಗೌರವಾಧ್ಯಕ್ಷ, ಹನುಮಂತರಾಯ ತೇಕರಾಳ ಜಿಲ್ಲಾ ಸಂಚಾಲಕರು, ಮಲ್ಲು ಕಲ್ಮನಿ ಹಾಲಗೇರ ತಾ.ಯು.ಘ.ಅಧ್ಯಕ್ಷರು, ಬಸವರೆಡ್ಡಿ ಅಭಿಶಾಳ್ ತಾ.ಪ್ರ.ಕಾರ್ಯದರ್ಶಿ, ಶಿವರಾಜ್ ಗೋನಲ್ ವಲಯ ಅಧ್ಯಕ್ಷರು ವಡಗೇರಾ,ದೇವರಾಜ್ ಕುರುಕುಂದಿ ತಾ.ಯು.ಘ.ಪ್ರ.ಕಾರ್ಯದರ್ಶಿ ಇತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಟ ಮನದೀಪ್‌ ರಾಯ್‌ ನಿಧನ

Published

on

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್‌ ರಾಯ್‌ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.

ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್‌ ರಾಯ್‌ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್‌ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Published

on

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವ್‌ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.

ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.

ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

Published

on

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.

ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.

ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980336243

Continue Reading

Trending