ದಿನದ ಸುದ್ದಿ
ಸಾಮಾಜಿಕ ಜಾಲತಾಣದಲ್ಲಿ ಬೆತ್ತಲಾದ ಖಾವಿದಾರಿ ‘ಕಾಳಿ ಸ್ವಾಮಿ’

ಹೌದು ಅರಸೀಕೆರೆಯಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿದ್ದ ಒಬ್ಬ ವ್ಯಕ್ತಿ ಈಗ ಸ್ವಾಮೀಜಿ ಅಂದಿನಿಂದ ಇಂದಿನವರೆಗೆ ಅವನ ಜೀವನ ಪಯಣ ಅಬ್ಬಬ್ಬಾ .. ಅಂದಿಗು ಮತ್ತು ಇಂದಿಗೂ ನಡುವೆ ಇದ್ಯಲ್ಲ ಅದು ಅದ್ಭುತ ಪ್ರತಿಯೊಂದರಲ್ಲೂ ತನ್ನ ಬೇಳೆ ಬೇಯಿಸಿಕೊಳ್ಳಲು ಹೋಗಿ ಕೈ ಸುಟ್ಟುಕೊಳ್ಳುವ ಖತರ್ನಾಕ್ ಕಳ್ಳ ಸ್ವಾಮೀಜಿ. ಕಾಳಿ ಕಾಳಿ ಅಂದುಕೊಂಡು ಜನರನ್ನ ಬೋಳಿ ಮಾಡುವ ಐನಾತಿ.
ಜಾತಿಯಲ್ಲಿ ಸುಳ್ಳು ಹೇಳಿದ್ದ ಮಹಾನುಭಾವ ತನ್ನ ತಂದೆ ತಾಯಿಯ ಐಡೆಂಟಿಟಿಯನ್ನೇ ಬದಲಿಸಿದ್ದವ , ನಿಂತ್ಯಾನಂದನ ಕರ್ಮಕಾಂಡ ಬಯಲು ಮಾಡುತ್ತಿನಂತ ಹೇಳಿ ಅವನ ಬಳಿ 10 ಕೋಟಿ ರೂಪಾಯಿ ಒಂದು ಫಾರ್ಚೂನರ್ ಕಾರ್ ನ ಬೇಡಿಕೆ ಇಟ್ಟಿದ್ದ , ಇದರಲ್ಲಿ ಸಿಕ್ಕಿ ಹಾಕಿಕೊಂಡ ಮಹಾನುಭಾವ ಮಾಧ್ಯಮವೊಂದರಲ್ಲಿ ತನ್ನ ಪೇಟವನ್ನ ತೆಗೆದಿಟ್ಟು ಕ್ಷಮಾಪಣೆ ಪತ್ರ ಬೇರೆ ಬರೆದು ಕೊಟ್ಟಿದ್ದನ್ನ ಜನ ಇನ್ನೂ ಮರೆತಿಲ್ಲ ಈಗ ಗೊತ್ತಾಗಿರಬೇಕು ಅವನು ಯಾರು ಅಂತ ಅವನೇ ರೀ ಶ್ರಿ ರಿಷಿಕುಮಾರ.(ಸ್ವಾಮೀಜಿ ಅನ್ನಲು ಮನಸೊಪ್ಪದು)
ಈತ ಸಾಮಾಜಿಕವಾಗಿ ಜನರಿಗೆ ಏನು ಉಪಯೋಗ ಮಾಡಿದ್ದಾನೋ ಅದು ಭಗವಂತನಿಗೆ ಗೊತ್ತು ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಂಡ ಕುಡಿದ ಕೋತಿ ತರ ಆಡುತ್ತಿದ್ದಾನೆ , ಅಡಲಿ ಬೇಡ ಅನ್ನಲ್ಲ ಅದು ಅವನ ಅಭಿವ್ಯಕ್ತಿ ಸ್ವಾತಂತ್ರ್ಯ ಅಂದುಕೊಂಡರೂ ಖಾವಿ ತೊಟ್ಟು ತನ್ನನ್ನ ತಾನು ಸ್ವಾಮೀಜಿ ಅಂತ ಕರೆಸಿಕೊಳ್ಳುವವರು ಮಾಡುವಂತ ಕೆಲಸವಂತೂ ಅಲ್ಲವೇ ಅಲ್ಲ.
ಒಂದು ಬಾಯಿಗೆ ಬಟ್ಟೆ ಕಟ್ಟಿಕೊಳ್ಳಬೇಕು ಇಲ್ಲವೇ ತೊಟ್ಟಿರುವ ಖಾವಿ ಬಟ್ಟೆ ಬಿಚ್ಚಬೇಕು ಯಾಕಂದ್ರೆ ನಮ್ಮ ದೇಶದಲ್ಲಿ ಇಂದಿಗೂ ಜನ ನಂಬಿಕೆ ಇಟ್ಟಿರುವುದು ಖಾವಿ ಮೇಲೆ , ಖಾವಿ ತೊಟ್ಟವರು ಸಮಾಜಕ್ಕೆ ಶಾಂತಿ ಮಂತ್ರ ಹೇಳಿಕೊಡಬೇಕು, ಸಮಾಜದಲ್ಲಿ ಸಾಮರಸ್ಯ ಬೆಳೆಯುವಂತಹ ಕೆಲಸಗಳನ್ನ ಮಾಡಬೇಕು ಆದರೆ ಈತ ಬಾಯಿ ತೆರೆದರೆ ಕೋಮು ಸೃಷ್ಟಿಸುವಂತಹ ಅನ್ಯಧರ್ಮದ ಬಗ್ಗೆ ಕೇವಲವಾಗಿ ಮಾತನಾಡೋದು, ಹೆಣ್ಣು ಮಕ್ಕಳ ಬಗ್ಗೆ ಅಸಹ್ಯ ಹುಟ್ಟಿಸುವಂತಹ ಮಾತುಗಳು ಅಲ್ಲದೆ ಅದನ್ನ ಪ್ರಶ್ನೆ ಮಾಡೋರಿಗೆ ಬೋಳಿ ಮಗನೆ, ಶಾಟ ಎಂಬಿತ್ಯಾದಿ ಸೆನ್ಸಾರ್ ಪದ ಬಳಕೆ ಮಾಡುತ್ತಾ ಖಾವಿ ಬಟ್ಟೆಗೆ ಇರುವ ಗೌರವವನ್ನು ಹಾಳು ಮಾಡುತ್ತಿದ್ದಾನೆ.
ಇಂತವರಿಗೆ ಖಾವಿ ಒಂದು ರಕ್ಷಾ ಕವಚ ಅಷ್ಟೇ , ಧರ್ಮವನ್ನ ರಕ್ಷಿಸುತ್ತಿನಿ ಅಂತ ಹೇಳುವ ಇವರುಗಳು ಇಂತಹ ಕೃತ್ಯಗಳಿಂದ ಧರ್ಮವನ್ನ ಹಾಳು ಮಾಡುತ್ತಿದ್ದಾರೆ ವಿನಃ ಇವರುಗಳಿಂದ ಧರ್ಮಕ್ಕೆ ಒಂದಿಷ್ಟು ಉಪಯೋಗ ಇಲ್ಲ , ಧರ್ಮದ ಹೆಸರಿನಲ್ಲಿ ಇವರನ್ನ ಇವರು ರಕ್ಷಿಸಿಕೊಳ್ಳುತ್ತಿದ್ದಾರೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.
ಇಂತಹವರು ಸಮಾಜಕ್ಕೆ ಕಂಟಕ ಮತ್ತು ಇದೆ ರೀತಿ ಮುಂದುವರಿದಲ್ಲಿ ಖಾವಿ ತೊಟ್ಟ ನಿಜವಾದ ಸ್ವಾಮೀಜಿಗಳಿಗೆ ಕೂಡ ಮರ್ಯಾದೆ ಗೌರವ ಸಿಗದ ರೀತಿ ಆಗುವುದರಲ್ಲಿ ಸಂಶಯವೇ ಇಲ್ಲ ಈ ಹಿಂದೆ ಒಮ್ಮೆ ಒಂದಷ್ಟು ಜನ ಮಹಿಳೆಯರು ಸೇರಿ ಈತನನ್ನು ಥಳಿಸಿದ್ದು ಕೂಡ ಯಾರು ಮರೆತಿಲ್ಲ ಆದರೆ ಪಾಪ ಆತ ಮರೆತಿರಬೇಕು.
ಇಂತಹವರಿಂದ ಧರ್ಮಕ್ಕೆ ಸಮಾಜಕ್ಕೆ ನಾಲ್ಕು ಪೈಸದ ಪ್ರಯೋಜನ ಇಲ್ಲ ಜನ ಇಂತವರನ್ನು ನಂಬಿ ಮೋಸ ಹೋಗುವುದು ಬೇಡ ಮತ್ತು ಖಾವಿಗೆ ಅದರದ್ದೇ ಆದ ಮಹತ್ವ ಇದೆ ಅದು ಇಂತಹವರಿಂದ ಹಾಳಾಗುವುದು ಬೇಡ ಎಂಬ ಸಣ್ಣ ಕಳಕಳಿ ಅಷ್ಟೇ … ಆತನ ಸಾಮಾಜಿಕ ಜಾಲತಾಣದ ಪೋಸ್ಟ್ಗಳು ಕಾಮೆಂಟ್ಗಳು ನೋಡಿದರೆ ಈತ ಸ್ವಾಮೀಜಿ ನ ಅಂತ ಎಲ್ಲರೂ ಒಂದು ಸಲ ತಮ್ಮನ್ನ ತಾವು ಪ್ರಶ್ನಿಸಿಕೊಳ್ಳದೆ ಇರಲಾರರು !!
ನಿಜವಾದ ಹಿಂದೂಗಳು , ಧರ್ಮ ಮತ್ತು ಖಾವಿ ಮೇಲೆ ನಂಬಿಕೆ ಗೌರವ ಇರುವವರು ಖಂಡಿತವಾಗಿಯೂ ಆತನ ಉದ್ದಟತನವನ್ನ ಖಂಡಿಸಿದೆ ಇರಲಾರರು. ಒಟ್ಟಾರೆ ಖಾವಿಯಿಂದ ಸಮಾಜದಲ್ಲಿ ತನ್ನನ್ನು ತಾನು ಮುಚ್ಚಿಟ್ಟುಕೊಂಡಿದ್ದ ಶ್ರಿ ರಿಷಿಕುಮಾರ ಸಾಮಾಜಿಕ ಜಾಲತಾಣದಲ್ಲಿ ಬೆತ್ತಲಾದ !!!
—ಬಿಂದು ಗೌಡ ಕೆಪಿಸಿಸಿ
ಸಾಮಾಜಿಕ ಜಾಲತಾಣ ರಾಜ್ಯ ಕಾರ್ಯದರ್ಶಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
