Connect with us

ದಿನದ ಸುದ್ದಿ

ಕೊರೋನ ಸೋಂಕಿನ ಪ್ರಭಾವ | ಭಾರತದಲ್ಲಿ 3 ನೇ ಹಂತದ ಮುನ್ನೆಚ್ಚರಿಕೆ ಕ್ರಮಗಳು : ತಪ್ಪದೇ ಓದಿ

Published

on

 • ಕರೋನ ಸೋಂಕಿನ ಪ್ರಭಾವವನ್ನು ತಡೆಗಟ್ಟಲು, ಭಾರತದಲ್ಲಿ 3 ನೇ ಹಂತದ ಮುನ್ನೆಚ್ಚರಿಕೆ ಕ್ರಮಗಳು ಈ ಕೆಳಗಿನಂತಿವೆ, ತಪ್ಪದೇ ಓದಿ.

 1. ನಾವು ತೆಗೆದುಕೊಳ್ಳುವ ಹಾಲಿನ ಪಾಕೆಟ್ ಗಳನ್ನು ಮನೆಗೆ ತಂದ ಕೂಡಲೇ ನೀರಿನಲ್ಲಿ ತೊಳೆದು ಸಂಗ್ರಹಿಸುವುದು ಮತ್ತು ಕೈಗಳನ್ನು ತೊಳೆದುಕೊಳ್ಳುವುದು.
 2. ಮನೆಗೆ ಪತ್ರಿಕೆಗಳನ್ನು ಪಡೆಯುವುದನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸುವುದು.
 3. ಕೊರಿಯರ್ ಮೂಲಕ ಪಡೆಯುವ ವಸ್ತುಗಳನ್ನು , ಒಂದು ನಿರ್ದಿಷ್ಟ ಸ್ಥಳದಲ್ಲಿ ಇಡಲು ಕೊರಿಯರ್ ನೀಡುವ ವ್ಯಕ್ತಿ ಗೆ ಸೂಚಿಸಿ, 24 ಗಂಟೆಗಳ ನಂತರ ತೆರೆಯುವುದು.
 4. ಮನೆ ಕೆಲಸದವರಿಗೆ ವೇತನ ಸಹಿತ ರಜೆ ನೀಡಿ ನಮ್ಮ ಕೆಲಸ ನಾವೇ ಮಾಡಿ ಕೊಳ್ಳುವುದು ಸೂಕ್ತ.
 5. ಅನಿವಾರ್ಯ ಸಂದರ್ಭದಲ್ಲಿ, ಮನೆ ಕೆಲಸದವರ ಸೇವೆ, ಅವಶ್ಯ ವಿದ್ದಲ್ಲಿ, ಅವರಿಗೆ ಸ್ವಚ್ಛತೆ ಮತ್ತು ಕರೋನ ಹರಡುವಿಕೆ ಬಗೆಗೆ ಮಾಹಿತಿ ನೀಡುವುದು. ಮುಖ್ಯ ಬಾಗಿಲನ್ನು ಮುಟ್ಟದೆ , ಕಾಲಿಂಗ್ ಬೆಲ್ ಉಪಯೋಗಿಸಲು ಸೂಚಿಸುವುದು. ಅವರಿಗೆ ಪ್ರತಿನಿತ್ಯ ಮಾಸ್ಕ್ ನೀಡಿ, ಕಾಯ೯ನಿವ೯ಹಿಸಲು ಸೂಚಿಸುವುದು, ಮತ್ತು ಬಂದ ಕೂಡಲೇ ಮತ್ತು ಆಗಾಗ್ಗೆ ಕೈತೊಳೆದುಕೊಳ್ಳಲು ಸೂಚಿಸುವುದು. ಮನೆಯ ಇತರೆ ವಸ್ತುಗಳನ್ನು ಮುಟ್ಟದಂತೆ ಸೂಚಿಸಿ, ಅವರು ಸ್ಪಶಿ೯ಸಿರುವ ಕಾಲಿಂಗ್ ಬೆಲ್ ಸ್ವಿಚ್ ಮತ್ತು ಕೈತೊಳೆಯದೇ ಮುಟ್ಟಿ ರುವ ಇತರ ಭಾಗಗಳನ್ನು ಸ್ವಚ್ಛ ಗೊಳಿಸಲು ಸೂಚಿಸುವುದು.
 6. ನಾವು ಮನೆಗೆ ತಂದ ನಂತರ ಎಲ್ಲಾ ಹಣ್ಣುಗಳು ಮತ್ತು ತರಕಾರಿಗಳನ್ನು ಕೂಡಲೇ ತೊಳೆದು ಸಂಗ್ರಹಿಸುವುದು.
 7. ಮನೆ ಬಿಟ್ಟು ಹೊರಗಿನ ಎಲ್ಲಾ ಪ್ರಯಾಣ ವನ್ನು ತಾತ್ಕಾಲಿಕ ವಾಗಿ ಮುಂದೂಡುವುದು. ಅನಿವಾರ್ಯ ಪ್ರಯಾಣ ದಲ್ಲಿ ಸಾರ್ವಜನಿಕ ಸಾರಿಗೆಯನ್ನು ಸಾಧ್ಯವಾದಷ್ಟು ಉಪಯೋಗಿಸಬಾರದು. ಸ್ವಂತ ವಾಹನ ಅಥವಾ ಓಲಾ ಮತ್ತು ಉಬರ್ ಅನ್ನು ಸಹ ಬಳಸಬಹುದು.
 8. ಜಿಮ್‌ಗಳು, ಈಜುಕೊಳ ಮತ್ತು ಇತರ ವ್ಯಾಯಾಮ ಅಭ್ಯಾಸ ಗಳನ್ನು ತಾತ್ಕಾಲಿಕ ವಾಗಿ ನಿಲ್ಲಿಸುವುದು.
 9. ಬೋಧನೆಗಳು, ನೃತ್ಯ / ಸಂಗೀತ ತರಗತಿಗಳು ಇತ್ಯಾದಿಗಳನ್ನು ತಾತ್ಕಾಲಿಕ ವಾಗಿ ನಿಲ್ಲಿಸುವುದು.
 10. ಕಚೇರಿ ಕೆಲಸಗಳನ್ನು ಮನೆಯಲ್ಲಿ ಮಾಡುವುದು ಅಥವಾ ರಜೆ ಪಡೆದು ಮನೆ ಯಲ್ಲಿರುವುದು.
 11. ವಾಡಿಕೆಯ ವಾಕಿಂಗ್ ವ್ಯಾಯಾಮಕ್ಕೆ ಹೋಗುವುದನ್ನು ನಿಲ್ಲಿಸಿ ಮನೆಯಲ್ಲೇ ಮಾಡಿ ಕೊಳ್ಳುವುದು.
 12. ಒಟ್ಟಿನಲ್ಲಿ ಹೇಳುವುದಾದರೆ ಅನವಶ್ಯಕವಾಗಿ ಮನೆಯಿಂದ ಹೊರಗೆ ಬಾರದೆ ಇರುವುದು ಸೂಕ್ತ.
 13. ನಾನು ಸದೃಢವಾಗಿ ದ್ದೇನೆ, ಆರೋಗ್ಯ ವಾಗಿದ್ದೇನೆ, ನಮ್ಮ ಊರಿನಲ್ಲಿ ಕರೋನ ಸೋಂಕಿತರು ಇಲ್ಲ, ಮನೆ ಇಂದ ಸ್ವಲ್ಪ ಸಮಯ ಹೊರಗೆ ಹೋಗಿ ಬಂದರೆ ಏನೂ ಆಗುವುದಿಲ್ಲ , ಎಂಬ ನಿಲ೯ಕ್ಷ ಮನೋಭಾವ, ಉಡಾಫೆ ಸಲ್ಲದು.
 14. ಮನೆಯಲ್ಲಿನ ಎಲ್ಲಾ ಸಭೆ ಸಮಾರಂಭಗಳನ್ನು ಮುಂದೂಡುವುದು ಸೂಕ್ತ.ಹಾಗೂ ಸ್ನೇಹಿತರು ಗಳು ಮತ್ತು ಸಂಭಂದಿಕರು ಗಳ ಸಮಾರಂಭಗಳಿಗೆ, ಇತರ ಸಂಸ್ಥೆ ಗಳ ಸಭೆಗಳಿಗೆ ಭಾಗವಹಿಸದೇ ಇರುವುದು, ನಮ್ಮ ಕುಟುಂಬದವರಿಗೆ ಮತ್ತು ಇತರೆ ಯವರಿಗೆ ಕರೋನ ಹರಡುವುದನ್ನು ತಡೆಗಟ್ಟಲು ಅನಿವಾರ್ಯ ಎಂದು ಭಾವಿಸುವುದು.
 15. ಕರೋನ ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೂಚಿಸುವ ಎಲ್ಲಾ ರೀತಿಯ ಮಾರ್ಗಸೂಚಿಗಳನ್ನು ಪಾಲಿಸಿ ಸಹಕರಿಸುವುದು, ಎಲ್ಲಾ ಸಭ್ಯ ಗೌರವಾನ್ವಿತ ನಾಗರೀಕರ ಕತ೯ವ್ಯವಾಗಿರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಟ ಮನದೀಪ್‌ ರಾಯ್‌ ನಿಧನ

Published

on

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್‌ ರಾಯ್‌ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.

ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್‌ ರಾಯ್‌ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್‌ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Published

on

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವ್‌ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.

ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.

ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

Published

on

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.

ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.

ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980336243

Continue Reading

Trending