ದಿನದ ಸುದ್ದಿ
ಅಸಲಿಗೆ ಭಾರತಕ್ಕೆ ಕೊರೋನಾ ಎಂಟ್ರಿ ಆಗಿದ್ದು ಹೇಗೆ..!?

- ಬಿಂದು ಶ್ರೀ ಗೌಡ
COVID ಅನ್ನುವ ಮಾರಿ December ತಿಂಗಳಲ್ಲಿ ಚೈನಾ ದೇಶದಲ್ಲಿ ಕಾಣಿಸಿಕೊಂಡಾಗ ಎಚ್ಚೆತ್ತುಕೊಳ್ಳದ ನಮ್ಮ ಭಾರತ ಹಲವಾರು ಸಾವಿರಾರು ಜನ ಸೇರುವ ಕಾರ್ಯಕ್ರಮಗಳನ್ನು ಮಾಡಿದೆ ಮಾಡ್ತಾ ಇತ್ತು ಅದರ ಸಂಪೂರ್ಣ ಮಾಹಿತಿ ಮತ್ತು ಪಟ್ಟಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು ಕೂಡ. covid ಅನ್ನು ಗಂಭೀರವಾಗಿ ಪರಿಗಣಿಸದೆ ಟ್ರಂಪ್ ಕಾರ್ಯಕ್ರಮದ ಜೊತೆ ಜೊತೆಗೆ ಫ್ಲೈಟ್ ನಲ್ಲಿ ಬಂದಂತ ವಿದೇಶಿಗರು ಸೇರಿದಂತೆ ನಮ್ಮದೇ ದೇಶದ ಪ್ರಜೆಗಳು ಅಲ್ಲಿಂದ ಇಲ್ಲಿಗೆ ಬರುವಾಗ ಸರಿಯಾದ ತಪಾಸಣೆ ಮಾಡದೇ ಅವರನ್ನು ಸರ್ಕಾರಿ ಕ್ವಾರಂಟೇನ್ ಮಾಡದೇ ಮನೆಗೆ ಕಳುಹಿಸಿ ಮತ್ತೊಂದು ತಪ್ಪು ಮಾಡಿಬಿಟ್ಟರು.
ಇಷ್ಟೆಲ್ಲಾ ಆಗುವ ಹೊತ್ತಿಗೆ ಮಾರ್ಚ್ ತಿಂಗಳು ಬಂದೆ ಬಿಟ್ಟಿತ್ತು December ಇಂದ ಫೆಬ್ರವರಿ ತನಕ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರ ವಿರೋಧ ಪಕ್ಷದ ನಾಯಕ ಶ್ರಿ ರಾಹುಲ್ ಗಾಂಧಿ ಅವರು ಈ ಬಗ್ಗೆ ಎಚ್ಚರಿಸಿದರು ಕ್ಯಾರೇ ಅನ್ನದ ಕೇಂದ್ರ ಸರ್ಕಾರ ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಕುತ್ತಿಗೆಗೆ ಬಂದಾಗ ತತ್ ಕ್ಷಣಕ್ಕೆ ಅಂದರೆ ನಾಲಕ್ಕೆ ನಾಲ್ಕು ಘಂಟೆಗೆ ದೇಶ ಲಾಕ್ ಡೌನ್ ಆಗುತ್ತದೆ ಎಂಬ ಬಾಂಬ್ ಸಿಡಿಸಿದ್ದು ನಿಜವಾಗಿಯೂ ಒಂದು ದೇಶದ ಪರಿಸ್ಥಿತಿ ಅರಿಯದೆ ಆರ್ಥಿಕ ಪರಿಸ್ಥಿತಿ ಅರಿಯದೆ ತೆಗೆದುಕೊಂಡ ಮೂರ್ಖ ನಿರ್ಧಾವಾಗಿದ್ದು ಸುಳ್ಳಲ್ಲ.
ಇನ್ನುಳಿದ ಹಾಗೆ ವಾರಕ್ಕೊಂದು ಟಾಸ್ಕ್ ಕೊಟ್ಟು ಹೋದ ದೇಶದ ಪ್ರಧಾನಿಯವರು ಇದರ ಮುಂದಿನ ಭಾಗ ಏನಾಗುತ್ತದೆ ಎಂಬ ಊಹೆಯೂ ಇಲ್ಲದೆ ಚಪ್ಪಾಳೆ ತಟ್ಟಿ ಅಂದರು ಅದನ್ನು ತಪ್ಪಾಗಿ ಅರ್ಥೈಸಿಕೊಂಡ ನಮ್ಮ ದೇಶದ ಕೆಲವು ಪ್ರಜ್ಜೆಗಳು ಮಹಾ ಯುದ್ದ ಗೆದ್ದವರಂತೆ ತಟ್ಟೆ ಲೋಟ ಜೊತೆ ಜಾಗಟೆ ಬಾರಿಸಿಕೊಂಡು ನೂರು ನೂರು ಜನ ಗುಂಪು ಕಟ್ಟಿ ಬೀದಿಗೆ ಬಂದದ್ದು ಇಡಿ ಪ್ರಪಂಚವೇ ಕೇಕೆ ಹಾಕುವಂತೆ ಇತ್ತು.
ಇಷ್ಟೆಲ್ಲಾ ಆಗುವುದರೊಳಗೆ covid ಅದಾಗಲೇ ದೇಶವ್ಯಾಪಿ ಹರಡಿತ್ತು ಅನ್ನುವ ಸತ್ಯ ಎಲ್ಲರಿಗೂ ತಿಳಿದಿದ್ದರೂ ಕೇಂದ್ರ ಸರ್ಕಾರ ಬೇಜವಾಬ್ದಾರಿ ತನವನ್ನ ಜನರು ವಿರೋಧಿಸಲು ಟೀಕಿಸಲು ಆರಂಭಿಸುತ್ತಿದ್ದಂತೆ ಕೆಲವೊಂದಷ್ಟು ಮಾಧ್ಯಮಗಳು (ಅರ್ಥ ಮಾಡಿಕೊಳ್ಳಿ ) ಪೇಯ್ಡ್ ಮೀಡಿಯಾಗಳು ಜನರ ಗಮನವನ್ನು ಬೇರೆಡೆ ಸೆಳೆಯಲು ಉಪಯೋಗಿಸಿದ ಅಸ್ತ್ರವೆ ತಬ್ಲಿಗ್ ಜಮಾತ್ ನ ಕಾರ್ಯಕ್ರಮ ಮಾಧ್ಯಮಗಳು ಹೇಗೆ ಬಿಂಬಿಸಿದವು ಎಂದರೆ covid ಚೈನಾ ಇಂದ ಬಂದದ್ದು ಎನ್ನುವುದನ್ನೇ ಭಾರತದ ಜನ ಮರೆಯುವಂತೆ ಮಾಡಿಬಿಟ್ಟರು.
ಈ ಸುದ್ದಿಯನ್ನು ಕೇಳಿದಂತೆ ಜನರು ಧರ್ಮವನ್ನು ಧರ್ಮದ ಜನರನ್ನು ದ್ವೇಷಿಸುವ ರೀತಿ ಮಾಡಿಬಿಟ್ಟಿತು. ಈ ರೀತಿ ಕೇಂದ್ರದ ಬೇಜವಾಬ್ದಾರಿ ತನ. ವೈಫಲ್ಯವನ್ನು ಪ್ರಶ್ನಿಸುವ ಧೈರ್ಯ ತೋರದ ಮಾಧ್ಯಮಗಳು ಒಂದು ಸಮುದಾಯವನ್ನು ಇದಕ್ಕೆ ಬಲಿ ಕೊಡಲು ಎತ್ನಿಸಿದ್ದು ಇಡಿ ಪತ್ರಿಕೋದ್ಯಮ ಮತ್ತು ಮಾಧ್ಯಮ ತಲೆ ತಗ್ಗಿಸುವಂತದ್ದು ಎಂದು ಹೇಳಲು ಯಾವುದೇ ಅಂಜಿಕೆಯೂ ಇಲ್ಲ.ಹಾಗೊಂದು ವೇಳೆ ಈ ಕಾರ್ಯಕ್ರಮದಿಂದ covid ಬಂದಿದ್ದೆ ಆದಲ್ಲಿ ಇದಕ್ಕೆ ಮುಂಚೆ ಆದಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದವರು ಹೊಣೆಯಾಗುವುದಿಲ್ಲವೆ ಎಂಬುದನ್ನು ಪ್ರಜ್ಞಾವಂತರು ಪ್ರಶ್ನಿಸಬೇಕಾಗುತ್ತದೆ.
December ನಲ್ಲಿ ಕಾಣಿಸಿಕೊಂಡ covid ಹೀಗಿದ್ದೂ ತಬ್ಲಿಗ್ ಜಮಾತ್ ಕಾರ್ಯಕ್ರಮ ನಡೆಸಲು ಅನುಮತಿ ಕೊಟ್ಟವರು ಯಾರು..? ಕೊಟ್ಟ ನಂತರ ತಪಾಸಣೆ ಮಾಡದೇ ಅವರನ್ನು ಒಳಗಡೆ ಬಿಟ್ಟುಕೊಂಡದ್ದು ಯಾರು ಮತ್ತು ಯಾಕೆ ಅನ್ನುವ ಹಲವಾರು ಪ್ರಶ್ನೆಗಳು ಇಂದಿಗೂ ಉತ್ತರಕ್ಕಾಗಿ ಕಾಯುತ್ತಿದೆ ಇಂತಹ ಪ್ರಶ್ನೆಗಳನ್ನು ಮಾಡಬೇಕಾದ ಮಾಧ್ಯಮದವರು ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಅವರ ಮೇಲೆ ದ್ವೇಷ ಹುಟ್ಟುವಂತ ಸುದ್ದಿ ಪ್ರಸಾರ ಮಾಡಿದ್ದು ಅಕ್ಷಮ್ಯ ಅಪರಾಧ.
ಇದೇ ರೀತಿ ಮಧ್ಯಪ್ರದೇಶದ IAS ಅಧಿಕಾರಿಣಿ ಪಲ್ಲವಿ ಜೈನ್ ಅವರು, ವಿದೇಶದಿಂದ ಮರಳಿದ್ದ ತಮ್ಮ ಮಗನಿಗೆ ಕೊರೋನಾ ಸೋಂಕು ಇರುವ ನಿಜವನ್ನು ಮುಚ್ಚಿಟ್ಟು ಆತ ಕ್ವಾರಂಟೈನ್ ಅನುಭವಿಸುವುದನ್ನು ತಪ್ಪಿಸಲು ಸುಳ್ಳು ಹೇಳಿ ಆತನನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಆತನಿಂದ ಇವರಿಗೂ ಸೋಂಕು ತಗುಲಿದರೂ ಸೆಲ್ಫ್ ಕ್ವಾರಂಟೈನ್ ಗೆ ಒಳಪಡದೆ ಒಂದು ಸಭೆ ನಡೆಸಿ ಆ ಸಭೆಯಲ್ಲಿ ನೆರೆದಿದ್ದ ಸುಮಾರು 100 ಜನ ಅಧಿಕಾರಿಗಳಿಗೆ ಸೋಂಕು ಹರಡಲು ಕಾರಣರಾಗಿದ್ದಾರೆ.ಈಗ ಅವರೆಲ್ಲರೂ ಕ್ವಾರಂಟೈನ್ ನಲ್ಲಿ ಇದ್ದಾರೆ. ಈ ವಿಷಯವನ್ನು ಯಾಕೆ ಮಾಧ್ಯಮ ಸುದ್ದಿ ಮಾಡಲಿಲ್ಲ , ಸುದ್ದಿ ಮಾಡಿದ್ರೂ ಇದಕ್ಕೆ ಯಾಕೆ ಧರ್ಮದ ಬಣ್ಣ ಬಳಿಯಲಿಲ್ಲ ಅನ್ನೋದನ್ನ ಯೋಚನೆ ಮಾಡಬೇಕಾಗುತ್ತದೆ.
- ನೆನಪಿರಲಿ ತಬ್ಲಿಗ್ ಜಮಾತ್ ವಿರುದ್ಧ ಸುಳ್ಳು ಸುದ್ದಿ ಮಾಡಿದ ಝೀ ನ್ಯೂಸ್ ಕ್ಷಮೆ ಯಾಚಿಸಿದೆ.
- ನೆನಪಿರಲಿ ತಬ್ಲಿಗ್ ಜಮಾತ್ ಕಾರ್ಯಕ್ರಮ ಹಾಜರಾಗಿದ್ದ 100 ಜನ ಕಾಶ್ಮೀರ್ ಪ್ರಜೆಗಳಲ್ಲಿ 100 ಕೂಡ ನೆಗಟಿವ್ report ಬಂದಿದೆ.
- ನೆನಪಿರಲಿ covid ಭಾರತಕ್ಕೆ ಬರಲು ಅನುವು ಮಾಡಿಕೊಟ್ಟಿದ್ದು ಕೇಂದ್ರ ಸರ್ಕಾರದ ಬೇಜಾವಾಬ್ದಾರಿ, ಅಸಡ್ಡೆ , ವಿಶೇಷ ವಿಮಾನಗಳ ಪ್ರಜೆಗಳು, ಏರ್ಪೋರ್ಟ್ ನಲ್ಲಿ ಸರಿಯಾದ ತಪಾಸಣೆ ಮಾಡದಿರುವುದು ಮತ್ತು ಕ್ವಾರಂಟೈನ್ ನಲ್ಲಿ ಇರಿಸಿಕೊಳ್ಳಬೇಕಾದವರನ್ನು ಕೇವಲ ಸೀಲ್ ಹೊಡೆದು ಮನೆಗೆ ಕಳುಹಿಸಿದ್ದು , ಸೀಲ್ ಹೊಡೆಸಿಕೊಂಡವರು ಮನೆಯಲ್ಲಿ ಕೂರದೆ ಬೀದಿ ಬೀದಿ ಸುತ್ತಿದ್ದು ಇದರಲ್ಲಿ ಹಿಂದೂ , ಮುಸ್ಲಿಂ , ಕ್ರೈಸ್ತ ಎಲ್ಲರೂ ಇದ್ದಾರೆ ಅನ್ನೋದನ್ನ ಮಾಧ್ಯಮ ಅರಿತುಕೊಳ್ಳಬೇಕು.
ಮತ್ತು ತಪ್ಪು ಯಾರೇ ಮಾಡಿದ್ರೂ ತಪ್ಪೇ ಅದನ್ನ ಕೇವಲ ಧರ್ಮಾಧಾರಿತವಾಗಿ ಬಿಂಬಿಸುವುದು , ಅಥವಾ ಒಬ್ಬರು ಇಬ್ಬರು ಮಾಡಿದ ತಪ್ಪಿಗೆ ಐಡಿ ಸಮುದಾಯವನ್ನು ದೂಷಿಸುವುದು ತಪ್ಪು.
ಕೊನೆಯದಾಗಿ covid ದೇಶಕ್ಕೆ ಕಾಲಿಡಲು ಮೊದಲ ಕಾರಣ ಕೇಂದ್ರ ಸರ್ಕಾರದ ಬೇಜವಾಬ್ದಾರಿ ಅನ್ನೋದಂತು ಸುಳ್ಳಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

-
ನಿತ್ಯ ಭವಿಷ್ಯ7 days ago
ಸೋಮವಾರ- ರಾಶಿ ಭವಿಷ್ಯ ಜನವರಿ-23,2023 : ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ
-
ದಿನದ ಸುದ್ದಿ5 days ago
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ
-
ದಿನದ ಸುದ್ದಿ22 hours ago
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ21 hours ago
ನಟ ಮನದೀಪ್ ರಾಯ್ ನಿಧನ