Connect with us

ದಿನದ ಸುದ್ದಿ

ಪಾದರಾಯನಪುರದ‌ ನಂತರವಾದರೂ..!

Published

on

  • ಹ.ರಾ.ಮಹಿಶ ಬೌದ್ಧ

ಹೇಗೂ ಸೀಲ್ ಡೌನ್ ಆಗಿರುವುದರಿಂದ ಹಗಲಾಗಲೀ‌ ರಾತ್ರಿಯಾಗಲಿ ಜನರೆಲ್ಲಾ ಮನೆಯಲ್ಲೇ ಇರುತ್ತಾರೆ ರಸ್ತೆರಸ್ತೆಯಲ್ಲಿಯೂ ಪೋಲಿಸ್ ಸರ್ಪಗಾವಲು ಇರುತ್ತದೆ. ಹಾಗಾಗಿ ಪಾದರಾಯನಪುರದ ನಂತರ ಮುಂದೇನಾದರೂ ಸೀಲ್ ಡೌನ್ ಆಗಿರುವ ಬೇರೆ ಏರಿಯಾಗಳಲ್ಲಿರುವ ಶಂಕಿತ ಸೋಂಕಿತರನ್ನು ಕ್ವಾರಂಟೇನ್ ಗೆ ಕರೆದುಕೊಂಡು ಹೋಗುವುದಿದ್ದರೆ ದಯಮಾಡಿ ಹಗಲಿನ ಸಮಯದಲ್ಲೇ ಹೋದರೆ ಒಳಿತು. ಹಾಗೂ ಹೋಗುವ ಮುನ್ನ ಅಲ್ಲಿನ ಜನರಿಗೆ ಅರ್ಥವಾಗುವಂತೆ ಜಾಗೃತಿ ಮೂಡುವಂತೆ ಇಡೀ ಬಡಾವಣೆಯ ಮನೆಯೊಳಗಿರುವ ಜನರಿಗೆ ಕೇಳಿಸುವಂತೆ ಅನೌನ್ಸ್ ಮೆಂಟ್ ಮಾಡಿಸಿ ನಂತರ ಹೋದರೆ ಒಳಿತು.

ಮೊದಲೇ ಈ ಕೊರೋನದಾಳಿಯಿಂದ ಕಂಗೆಟ್ಟು ಹೈರಾಣವಾಗಿರುವ ದೇಶದ ಜನಸಾಮಾನ್ಯರು ನಂತರ ಅನಿವಾರ್ಯವಾದ ಲಾಕ್ ಡೌನ್ ನಿಂದ ದಿಕ್ಕೆಟ್ಟು ಹೋಗಿ ನಂತರ ಧುತ್ತನೆರಗಿದ ಸೀಲ್ ಡೌನ್‌ನಿಂದ ಇನ್ನೂ ಮಾನಸಿಕವಾಗಿ ಜರ್ಜರಿತರಾಗಿದ್ದಾರೆ. ಅಲ್ಲದೆ ಕೊರೋನ ಬಗ್ಗೆ ಈ ಟಿವಿಯವರು 24/7 ಉತ್ಪಾದಿಸಿರುವ ಭಯವೂ ಸೇರಿಹೋಗಿ ಜೊತೆಗೆ ಕೂಲಿ‌ಕೆಲಸಗಳನ್ನು ಕಳೆದುಕೊಂಡು ತುತ್ತುಕೂಳಿಗೂ ತತ್ತರಿಸುತ್ತಾ ಜೀವನವೇ ರೋಸಿಹೋಗಿ ಜೊತೆಗೆ ಭಾರತದಂಥ ದೇಶದಲ್ಲಿ ಸಾಂಕ್ರಾಮಿಕ ರೋಗಕ್ಕೂ ಜಾತಿ ಧರ್ಮದ ಬಣ್ಣಬಳಿದು ಜನರನ್ನು ಮಾನಸಿಕವಾಗಿ ನೈತಿಕವಾಗಿ ಕುಗ್ಗಿಸುವ ಕಲೆಕಲಿತವರ ನಡುವೆ ಒಂಥರಾ ಪಾಪಪ್ರಜ್ಞೆಯಿಂದ ನರಳುತ್ತಿರುವ ಜನಸಾಮಾನ್ಯರು‌ ಪಾದರಾಯನಪುರದಲ್ಲಿರಲಿ ಬಸವನಗುಡಿಯಲ್ಲಿರಲಿ ಅಥವಾ ಇನ್ನೆಲ್ಲೋ ಇರಲಿ ಇಷ್ಟೆಲ್ಲಾ ಮಾನಸಿಕವಾಗಿ ತತ್ತರಿಸುತ್ತಾ ಭಯ ಮತ್ತು ಅಭದ್ರತೆಯಲ್ಲಿ ಕುಸಿದಿದ್ದಾರೆ.

ತಮ್ಮ ಕಣ್ಮುಂದೆ ತಮ್ಮಮನೆಯ ಸಣ್ಣಮಕ್ಕಳ ವಯಸ್ಸಾದ ತಂದೆತಾಯಿಗಳ‌‌ ದುಸ್ಥಿತಿಯನ್ನು ಕಂಡೂ ಅಸಹಾಯಕರಾಗಿ ತಮ್ಮಗಳ ಬದುಕಿನ ಬಗ್ಗೆಯೇ ಭರವಸೆ ಕಳೆದುಕೊಂಡು ಮೊದಲೇ ಭಯಾಂತಕದಲ್ಲಿರುವಾಗ ದಿಢೀರನೆ ರಾತ್ರಿಯ ವೇಳೆ ನಮ್ಮ ಪರವಾಗಿಯೇ ನಮಗಾಗಿಯೇ ನಮ್ಮ ಸಹಾಯಕ್ಕಾಗಿಯೇ ನಮ್ಮವರೇ ನಮ್ಮ ಪೋಲಿಸರೇ ವೈದ್ಯರೇ ಮನೆಗೆ ಹೋದರೂ ಜನಕ್ಕೆ ಅನುಮಾನದ ಜೊತೆಗೆ ಮತ್ತಷ್ಟು ಭಯ ಹೆಚ್ಚಾಗುತ್ತದೆ..! ದಿಕ್ಕುತೋಚದ ಜನಸಮೂಹ ಹುಚ್ಚಾಗುತ್ತದೆ..!

ವೈದ್ಯರಾಗಲಿ‌ ದಾದಿಯರಾಗಲಿ ಆಶಾಕಾರ್ಯಕರ್ತೆಯರಾಗಲಿ ಪೋಲಿಸರಾಗಲಿ ಸರ್ಕಾರವಾಗಲೀ ಇರುವುದು ನಮಗಾಗಿ ನಮ್ಮ ರಕ್ಷಣೆಗಾಗಿಯೇ ಹೊರತು‌ ಬೇರೆ ಉದ್ದೇಶಗಳಿಗಾಗಿ ಅಲ್ಲ ಎಂಬ ಸತ್ಯವನ್ನು ಜನರು ಅರ್ಥಮಾಡಿಕೊಳ್ಳಬೇಕು. ಆ ಸತ್ಯವನ್ನು ಜನಸಾಮಾನ್ಯರಿಗೆ ಅವರ ಮಟ್ಟಕ್ಕಿಳಿದು ಅರ್ಥ ಮಾಡಿಸಬೇಕಾದುದು ನಮ್ಮ ಕರ್ತವ್ಯವಾಗಬೇಕು. ಅವರಿಗೆ ನಂಬಿಕೆ ಬರುವಂತೆ ನಡೆದುಕೊಳ್ಳಬೇಕು. ಜನರೂ ಅದನ್ನು‌ ತಾಳ್ಮೆಯಿಂದ ಅರ್ಥ ಮಾಡಿಕೊಳ್ಳಬೇಕು..! ಮಾಧ್ಯಮದವರು ಮನುಷ್ಯರಂತೆ ವರ್ತಿಸಬೇಕು..!

ಪಾದರಾಯನಪುರದವರಾಗಲೀ ಪಾಂಡುರಂಗಪುರವಾಗಲಿ ನಾವೆಲ್ಲರೂ ಭಾರತೀಯರು ಮೊದಲಿಗೂ ಕೊನೆಗೂ… ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೋರೊನಾ ದೃಷ್ಟಿಯಲ್ಲಿ ನಾವೆಲ್ಲರೂ ಕೇವಲ ಮನುಷ್ಯರು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು..! ಇಂಥ ವಿಷಮಕಾಲದಲ್ಲಿ ಮನುಷ್ಯತ್ವ ಮತ್ತು ಸೌಹಾರ್ದತೆಯೊಂದೇ ನಮ್ಮೆಲ್ಲರನ್ನೂ ಉಳಿಸಬಲ್ಲದು‌‌ ಎಂಬುದನ್ನು ನಾವೆಲ್ಲರೂ ಮನಗಾಣಬೇಕು..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಟ ಮನದೀಪ್‌ ರಾಯ್‌ ನಿಧನ

Published

on

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್‌ ರಾಯ್‌ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.

ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್‌ ರಾಯ್‌ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್‌ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Published

on

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವ್‌ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.

ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.

ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

Published

on

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.

ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.

ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980336243

Continue Reading

Trending