Connect with us

ರಾಜಕೀಯ

‘ಸೋನಿಯಾ ಗಾಂಧಿ’ ಮನುಜಪಥದ ಅಪ್ರತಿಮ ರಾಯಭಾರಿ..!

Published

on

  • ಗ್ಲಾಡ್ಸನ್ ಅಲ್ಮೇಡಾ

ಪ್ಪತ್ತು ವರುಷಗಳಿಂದ ಆಕೆಯ ಮೇಲೆ ಸತತವಾಗಿ ದಾಳಿ ಮಾಡಿದರೂ, ಆಕೆಯ ಚಾರಿತ್ರ್ಯವಧೆ ಮಾಡಿದರೂ, ಆಕೆಯ ಮಕ್ಕಳು, ಮೊಮ್ಮಕ್ಕಳನ್ನೂ ಬಿಡದೇ ಹೀಯಾಳಿಸಿದರೂ, ಇಲ್ಲಿನ ರಾಜಕೀಯ, ಇಲ್ಲಿನ ಪಕ್ಷಗಳು ಇದ್ಯಾವದರೊಂದಿಗೆ ಸಂಬಂಧನೇ ಇರದ ಆಕೆಯ ಹೆತ್ತವರನ್ನೂ ಬಿಡದೆ ನಿಂದಿಸಿದರೂ ಆ ತಾಯಿ ಒಮ್ಮೆಯೂ ತಿರುಗಿ ಉತ್ತರಿಸಿದ್ದಿಲ್ಲ.

ಅದೆಷ್ಟು ಆರೋಪಗಳು, ಅದೆಷ್ಟು ನಿಂದನೆಗಳು, ಅದೆಷ್ಟು ಕುಹಕಗಳು, ಅದೆಷ್ಟು ಕ್ರೌರ್ಯ. ಊಹುಂ! ಏನು ಮಾಡಿದರೂ ಆಕೆಯನ್ನು ಧೃತಿಗೆಡಿಸಲು ಆಗಿಲ್ಲ. ಎಂಥೆಂಥಾ ಫೊಟೋಶಾಪ್‍ಗಳು, ವಿಡಿಯೋಗಳು. ಆಕೆಯನ್ನು ಅರೆನಗ್ನಳನ್ನಾಗಿ ಚಿತ್ರಿಸಿ, ಯಾರ ಯಾರ ತೊಡೆಮೇಲಿ ಕುಳ್ಳಿರಿಸಿ, ಹಾಸಿಗೆ ಮೇಲೆ ಹೀಗೆ ಆಕೆಯ ಚಾರಿತ್ರ್ಯವಧೆಗೆ ಸಂಸ್ಕೃತಿ ರಕ್ಷಕರು, ದೇಶಭಕ್ತರೆನ್ನುವವರು ಇಳಿದಿರುವ ಆಳ ಇದೆಯಲ್ವಾ, ಅದು ತಮ್ಮ ಸಮಕಾಲೀನ ಮಾತ್ರವಲ್ಲ ಗತಕಾಲದಲ್ಲೂ ಯಾರೂ ಇಳಿದಿರಲಿಕ್ಕಿಲ್ಲ. ಆಕೆಯನ್ನು ಬಾರ್ ಡ್ಯಾನ್ಸರ್, ಅಪವಿತ್ರೆ, ಸೂಳೆ, ಕೀಪ್, ಜೆರ್ಸಿ ದನ, ಆಕೆಯ ಮಕ್ಕಳ ಹೈಬ್ರಿಡ್ ಕರುಗಳು ಎಂದೆಲ್ಲಾ ಜರಿದರು. ಅಬ್ಬಾ! ಎಂಥೆಂಥಾ ಬೈಗುಳಗಳು, ಎಂಥಾ ಅವಮಾನ. ಆದರೂ ಆ ತಾಯಿಯದ್ದು ಮಾತ್ರ ದಿವ್ಯ ನಿರ್ಲಕ್ಷ್ಯ.

ಇಂಥ ಅವಮಾನ, ನಿಂದನೆ, ಚಾರಿತ್ರ್ಯವಧೆ, ಹೀಯಾಳಿಕೆಯನ್ನೆದುರಿಸಿ, ತನ್ನನ್ನು ಹೀಯಾಳಿಸುತ್ತಿರುವವರ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಅವರ ಕಣ್ಣೆದುರಿನಲ್ಲೇ, ಅವರನ್ನೇ ಮಣಿಸಿ, ತನ್ನ ಪಕ್ಷವನ್ನು ಸತತ ಎರಡು ಬಾರಿ ಅಧಿಕಾರಕ್ಕೆ ತರಲು, ಸತತ ಇಪ್ಪತ್ತು ವರುಷಗಳ ಕಾಲ ಪಕ್ಷವನ್ನು ನಡೆಸಲು ಧೃಢ ನಿಶ್ಚಲ, ಅಟಲ ಮನೋಭಾವ, ಧೀಮಂತಿಕೆ ಹಾಗೂ ಎದೆಗಾರಿಕೆ ಬೇಕು.

ಆಕೆಯ ವಿದೇಶಿ ಮೂಲ, ಆಕೆಯ ಗಂಡನ ಕುಟುಂಬ ಇವೆಲ್ಲದಕ್ಕಿಂತ ಆಕೆಯನ್ನು ಮೂದಲಿಸುವವರಿಗೆ ಚುಚ್ಚುತ್ತಿರುವುದು ಆಕೆ ಮಹಿಳೆ ಎನ್ನುವ ಸತ್ಯ. ಯಾವುದೋ ದೇಶದಿಂದ, ಮದುವೆಯಾಗಿ ಈ ದೇಶಕ್ಕೆ ಬಂದು, ಈ ದೇಶದ ಭಾಷೆ, ಸಂಸ್ಕೃತಿ, ಉಡುಗೆ-ತೊಡುಗೆ, ಆಹಾರ, ಜನಜೀವನ ಎಲ್ಲವನ್ನೂ ಅಪ್ಪಿ, ತನ್ನ ಕಣ್ಣ ಮುಂದೆಯೇ ತನ್ನ ಮೈದುನ, ಅತ್ತೆ, ಗಂಡ ಎಲ್ಲರನ್ನೂ ಏಳೆಂಟು ವರುಷಗಳೊಳಗೆ ಭೀಕರವಾಗಿ ಕಳೆದುಕೊಂಡರೂ, ಒಮ್ಮೆಯೂ ವಿಚಲಿತರಾಗದೇ, ಒಮ್ಮೆಯೂ ತನ್ನ ಬೊಗಸೆ ಕಣ್ಣುಗಳಲ್ಲಿ ಹರಿದು ಬಂದ ಕಣ್ಣೀರಿನ ಒಂದೇ ಒಂದು ಹನಿ ಸಾರ್ವಜನಿಕರಿಗೆ ತೋರ್ಪಡಿಸದೇ, ತನ್ನವರೆಂದು ಯಾರೂ ಇಲ್ಲದಿದ್ದರೂ ತನ್ನ ಮಕ್ಕಳನ್ನು ಸಾಕಿ, ಸಲಹಿ, ಅವರಿಗೆ ವಿದ್ಯೆ, ಸಂಸ್ಕಾರ ಕೊಟ್ಟು ಬೆಳೆಸಿದ ಪರಿಯಿದೆಯಲ್ವಾ ಅದು ಅನನ್ಯ.

ತನ್ನ ಮೈದುನನ ದೇಹದ ಒಂಚೂರೂ ನೋಡಲು ಸಿಗಲಿಲ್ಲ ಆಕೆಗೆ, ಎಂಟೆದೆಯ ಅತ್ತೆಯ ಎದೆಯನ್ನೇ ಸೀಳಿದ ಗುಂಡುಗಳು ಆಕೆಯ ಕಣ್ಣೆದುರಲ್ಲೇ ಇದ್ದವು, ಕೊನೆಗೆ ತನ್ನ ಗಂಡನ ದೇಹ ಕೂಡಾ ಸಿಕ್ಕಿದ್ದು ಛಿದ್ರ ಛಿದ್ರವಾಗಿ. ಎಂಥಾ ಧೈರ್ಯವಂತರನ್ನೂ ಶಾಶ್ವತವಾಗಿ ಕಂಗೆಡಿಸಬಹುದಾದ ಘಟನೆಗಳಿವು.

ಆದರೆ ಆಕೆಯನ್ನಲ್ಲ. ತನ್ನ ಮನೆಯ ನಾಲ್ಕು ಗೋಡೆಗಳೊಳಗೆ ಆಕೆ ಅದೆಷ್ಟು ಬಾರಿ ಗಳಗಳನೇ ಅತ್ತಿದ್ದಾರೋ, ಅದೆಷ್ಟು ಬಾರಿ ತನ್ನೊಡಲ ಕುಡಿಗಳನ್ನು ಎದೆಗಪ್ಪಿ ಕಣ್ಣೀರಲ್ಲೇ ಮಿಂದಿದ್ದಾರೋ, ಅದೆಷ್ಟು ಬಾರಿ ಕನ್ನಡಿಯಲ್ಲಿ ತನ್ನನ್ನೇ ತಾನು ನೋಡುತ್ತಾ, ಕಣ್ಣುಗಳನ್ನು ತೇವ ಮಾಡಿಕೊಂಡಿದ್ದಾರೋ. ಆದರೆ ಹೊರಜಗತ್ತಿಗೆ ಆಕೆ ತನ್ನ ಯಾವುದೇ ನೋವನ್ನು, ಯಾವುದೇ ಅಂಜಿಕೆಯನ್ನು, ಯಾವುದೇ ಅಭದ್ರತೆಯನ್ನು ಎಂದೂ ತೋರ್ಪಡಿಸಿಲ್ಲ.

ಆಕೆಯದ್ದು ಅಸಾಧಾರಣ ವ್ಯಕ್ತಿತ್ವ, ಅತಿಮಾನುಷ ಸಹನೆ, ಅದ್ಭುತ ಜೀವನೋಲ್ಲಾಸ. ತನ್ನ ಪಾಲಿಗೆ ಬಂದದೆಲ್ಲವನ್ನೂ ಸಮಚಿತ್ತದಿಂದ ಒಪ್ಪಿ, ತನ್ನ ಗಂಡನ ಕೊಲೆಗಾರರನ್ನೇ ಕ್ಷಮಿಸಿ, ಎಂದೂ, ಯಾರನ್ನೂ ತೆಗಳದೇ, ಯಾರನ್ನೂ ನೋಯಿಸದೇ, ಸಾರ್ವಜನಿಕ ಜೀವನದಲ್ಲಿರುವ ನಾಯಕರು ಹೇಗಿರಬೇಕೆಂಬ ಅಲ್ಟಿಮೇಟ್ ಉದಾಹರಣೆಯನ್ನು ನಮ್ಮ ಮುಂದೆ ಇಟ್ಟಿರುವ ಈ ಶತಮಾನದ ಶ್ರೇಷ್ಟ ಮಹಿಳೆ ಆಕೆ.

ಆಕೆಯ ಜಾಗದಲ್ಲಿ ಇನ್ಯಾರಿದ್ದರೂ ಯಾವತ್ತೋ ಮಂಡಿಯೂರಿ ಬಿಡುತ್ತಿದ್ದಾರೇನೋ, ಯಾವತ್ತೋ ಸೋಲೊಪ್ಪಿ ಈ ದೇಶ, ಈ ಜನಗಳು, ಈ ಸಮಾಜದ ಸಹವಾಸವೇ ಬೇಡವೆಂದು ತನ್ನ ತವರು ಸೇರುತ್ತಿದ್ದರೇನೋ? ಮೈದುನನ ಅಂತ್ಯಸಂಸ್ಕಾರ, ಅತ್ತೆಯ ಅಂತ್ಯ ಸಂಸ್ಕಾರ ಹಾಗೂ ತನ್ನ ಗಂಡನ ಅಂತ್ಯಸಂಸ್ಕಾರದ ಸಮಯದಲ್ಲಿ ಆಕೆ ನಡೆದುಕೊಂಡಿರುವ ರೀತಿ ಕಣ್ಣಮುಂದೆ ಶಾಶ್ವತವಾಗಿ ಉಳಿಯಲಿದೆ. ಯಾಕೆಂದರೆ ಚಿನ್ನ ಶಬ್ದ ಮಾಡುವುದಿಲ್ಲ. ಶಬ್ದ ಮಾಡುವುದು ತಗಡು.

ತನ್ನನ್ನು ನಿಂದಿಸುತ್ತಿರುವವರನ್ನು, ಹೀಯಾಳಿಸುತ್ತಿರುವವರ ಬಗ್ಗೆ,ಅವಮಾನಿಸುತ್ತಿರುವವರ ಬಗ್ಗೆ ಆಕೆ ತಾಳಿರುವ ದಿವ್ಯ ನಿರ್ಲಕ್ಷ್ಯವೇ ಆಕೆಯ ವಿರೋಧಿಗಳ ಅವರನ್ನು ಧೃತಿಗೆಡಿಸಿದೆ, ಅವರ ಹುಚ್ಚಿನ, ಕ್ರೌರ್ಯದ ಸೀಮೆಗಳನ್ನು ದಾಟಿ ಅವರನ್ನು ಮೃಗಗಳನ್ನಾಗಿ ಮಾಡಿದೆ. ಏನೇನೂ ಮಾಡಿದರೂ ಆಕೆಯನ್ನು ವಿಚಲಿತರನ್ನಾಗಿಸಲು ಆಗದೇ, ಧೃತಿಗೆಡಿಸಲಾಗದೇ, ಅವರು ಹೊಡೆದ ಚೆಂಡು, ಹೊಡೆದ ವೇಗಕ್ಕಿಂತ ನೂರಿನ್ನೂರು ಪಟ್ಟು ಹೆಚ್ಚಿನ ವೇಗದಲ್ಲಿ ಹಿಂದೆ ಬಂದು ಅವರನ್ನೇ ನೆಲಕ್ಕಪ್ಪಳಿಸಿದೆ. Yet she is silent, she is resolute and she just keeps walking with her head held high.

ಆಕೆಯೇ ನಮ್ಮ ನಡುವಿನ ಕೌತುಕ ಹಾಗೂ ಅದ್ಬುತ ಸೋನೀಯಾ ಗಾಂಧಿ. ಆಕೆ ಕಾಂಗ್ರೇಸ್ ಅಲ್ಲ ಯಾವುದೇ ಪಕ್ಷದಲ್ಲಿದ್ದರೂ, ರಾಜಕೀಯದಲ್ಲಿಲ್ಲದಿದ್ದರೂ ನಾನು ಆಕೆಯ, ಆಕೆಯ ಗುಳಿಗೆನ್ನೆಯ, ನಿಷ್ಕಳಂಕ ಮುಗುಳ್ನಗೆಯ ಶಾಶ್ವತ ಫ್ಯಾನ್ ಆಗಿರುತ್ತಿದ್ದೆ ಯಾಕೆಂದರೆ ಆಕೆ ಬರೀ ಭಾರತೀಯಳಲ್ಲ, ಕೇವಲ ಮಹಿಳೆಯಲ್ಲ, ಬದಲಾಗಿ ಮನುಷತ್ವದ ಹಾಗೂ ಮನುಜಪಥದ ಅಲ್ಟಿಮೇಟ್ ಹಾಗೂ ಅಪ್ರತಿಮ ರಾಯಭಾರಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Published

on

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವ್‌ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.

ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.

ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

Published

on

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.

ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.

ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980336243

Continue Reading

ದಿನದ ಸುದ್ದಿ

ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ : ಭವ್ಯ ನರಸಿಂಹಮೂರ್ತಿ

Published

on

ಸುದ್ದಿದಿನ, ಬೆಂಗಳೂರು : ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಅಂಗವಾಗಿ ಅವರ ತತ್ವ ಆದರ್ಶಗಳು ಹಾಗೂ ಯುವ ಜನತೆಗೆ ನೀಡಿರುವ ಸಂದೇಶಗಳನ್ನು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಜನತೆಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಭವ್ಯ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೈಕ್ ರ್ಯಾಲಿ ಬೆಳಿಗ್ಗೆ 09-00 ಕ್ಕೆ ರಾಜಾಜಿನಗರ Entrance Bridge ಇಂದ ಪ್ರಾರಂಭವಾಗಿ ನವರಂಗ ಚಿತ್ರಮಂದಿರ – ಶಂಕರ್ ಮಠ – ಹಾವನೂರ್ ಸರ್ಕಲ್ – ಹೌಸಿಂಗ್ ಬೋರ್ಡ್ – ಕಾಮಾಕ್ಷಿಪಾಳ್ಯ ಬಸ್ ಸ್ಟಾಂಡ್ – ಹಾವನೂರ್ – ಅಕ್ಷಯ ಉಪಹಾರ – ಮೋದಿ ಹಾಸ್ಪಿಟಲ್ – ನವರಂಗ ಬ್ರಿಡ್ಜ್ – ಗಿರಿಯಾಸ್ ಸಿಗ್ನಲ್ – 6th ಬ್ಲಾಕ್ – ಕೊನೆಯದಾಗಿ 12 ಗಂಟೆಗೆ ಭಾಷ್ಯಮ್ ಸರ್ಕಲ್ ನಲ್ಲಿ ಕೊನೆಗೊಳ್ಳುತ್ತದೆ.

ದಾರಿಯಲ್ಲಿ 4 ಕಡೆ ಸ್ವಾಮಿ ವಿವೇಕಾನಂದರಿಗೆ ಪೂಜೆ ಹಮ್ಮಿಕೊಳ್ಳಲಾಗಿದೆ. ಪೂಜೆಯ ನಂತರ ವಿವೇಕಾನಂದರ ತತ್ವ ಆದರ್ಶಗಳನ್ನೊಳಗೊಂಡ ಹತ್ತು ಸಾವಿರ ಪುಸ್ತಕಗಳನ್ನು ಕ್ಷೇತ್ರದಾದ್ಯಂತ ಉಚಿತವಾಗಿ ಹಂಚಲಾಗುವುದು ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿರುತ್ತದೆ ಎಂದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending