Connect with us

ಸಿನಿ ಸುದ್ದಿ

ಕಟ್ಟ ಕಡೆಯ ಬಿಂದು-ಇದ್ದೆಡೆಯೇ ಕಂಡಾಗ

Published

on

  • ನಾ ದಿವಾಕರ

ಬುಧವಾರ ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನರಾಗಿದ್ದು ತಿಳಿದಾಗ ಕೆಲವು ಕ್ಷಣ ಮಾತೇ ಹೊರಡಲಿಲ್ಲ. ಇತ್ತೀಚೆಗೆ ಕಂಬನಿ ಬತ್ತಿ ಹೋಗಿದೆ ಇಲ್ಲದಿದ್ದರೆ ಸುರಿದುಹೋಗುತ್ತಿತ್ತೇನೋ ! ಆದರೂ ಕಣ್ಣಾವೆಗಳು ವದ್ದೆಯಾದ ಅನುಭವ. ನೂರಾರು ಚಿತ್ರಗಳಲ್ಲಿ ನಟಿಸಿದವರಲ್ಲ, ಗಗನದೆತ್ತರದ ಕಟೌಟ್ ನೋಡಿರುವ ಆರಾಧ್ಯ ದೈವ ಎನಿಸಿಕೊಂಡವರಲ್ಲ. ಅಭಿಮಾನಿ ಸಂಘಗಳಿಗೆ ಪಾತ್ರರಾದವರಲ್ಲ. ಬಹುಶಃ 35 ವರ್ಷಗಳ ಪಯಣದಲ್ಲಿ ತಮಗೆ ಲಭಿಸಿದ ಅವಕಾಶವನ್ನು ಕೊಂಚವೂ ರಾಜಿ ಮಾಡಿಕೊಳ್ಳದೆ ನ್ಯಾಯಸಲ್ಲಿಸಿದ ಕೆಲವೇ ನಟರಲ್ಲಿ ಇರ್ಫಾನ್ ಒಬ್ಬರು.

ಅವರು ಇಷ್ಟವಾಗುವುದೂ ಈ ಕಾರಣಕ್ಕೇ. ಸಂಭಾಷಣೆಯ ವೈಖರಿ, ಕಂಗಳಲ್ಲೇ ಭಾವ ಸ್ಫುರಿಸುವ ಅದ್ಭುತ ಕಲಾಭಿವ್ಯಕ್ತಿ, ಪಾತ್ರದೊಳಗೆ ಪರಕಾಯ ಪ್ರವೇಶ, ಅಭಿನಯದಲ್ಲಿ ತಲ್ಲೀನತೆ ಮತ್ತು ತಾವು ನಿರ್ವಹಿಸುವ ಪಾತ್ರವನ್ನು ಪರದೆಯ ಹೊರ ತಂದು ನೋಡುವವರ ಮಧ್ಯೆ ನಿಲ್ಲಿಸುವಂತಹ ಕಲಾತ್ಮಕತೆ ಇವೆಲ್ಲವೂ ಇರ್ಫಾನ್ ಅವರನ್ನು ಅದ್ಭುತ ನಟನನ್ನಾಗಿ ಮಾಡಿತ್ತು.

ಅವರಲ್ಲಿ ಗಮನಿಸಬಹುದಾದ ಮತ್ತೊಂದು ಅಂಶ, ಯಾವುದೇ ಅನುಕರಣೆ ಇರಲಿಲ್ಲ. ಅವರಿಗೆ ಗಾಡ್ ಫಾದರ್ ಸಹ ಇರಲಿಲ್ಲವೆನ್ನಿ. ತಮ್ಮ ಕಲಾ ಸಾಮರ್ಥ್ಯದ ಮೇಲೆ ತಾವೇ ನಿರ್ಮಿಸಿಕೊಂಡ ಕಲಾ ಪ್ರಪಂಚದಲ್ಲಿ ವಿಶ್ವದಾದ್ಯಂತ ಜನಪ್ರಿಯತೆ ಪಡೆದ ನಟ. ಕೆಲವೊಮ್ಮೆ ಸೈಯೀದ್ ಜಾಫ್ರಿ ನೆನಪಾಗುತ್ತಾರೆ. ಪಾತ್ರಗಳಲ್ಲಿ ಜೀವಂತಿಕೆಯನ್ನು ತುಂಬಲು ತಮ್ಮ ಕಣ್ಣುಗಳೇ ಸಾಕು ಎನ್ನುವ ಕೆಲವೇ ಸಮಕಾಲೀನ ನಟರು ನಮ್ಮ ನಡುವೆ ಇದ್ದಾರೆ/ಇದ್ದರು. ಸೈಯಿದ್ ಜಾಫ್ರಿ, ನಾಸಿರುದ್ದಿನ್ ಶಾ, ಕಮಲ ಹಾಸನ್, ಅನುಪಮ್ ಖೇರ್, ಫರೂಕ್ ಶೇಖ್, ನಾನಾ ಪಾಟೇಕರ್ ಮತ್ತು ಇರ್ಫಾನ್ ಖಾನ್.

ಇರ್ಫಾನ್ ಈಗ ಇದ್ದರು ಎನ್ನುವ ಸಾಲಿಗೆ ಸೇರಿದ್ದಾರೆ. ಒಬ್ಬ ನಟ ಪರದೆಯ ಮೇಲೆ ಬಿಂಬಿಸುವ ಮೌಲ್ಯಗಳೇ ಬೇರೆ, ನಿತ್ಯ ಜೀವನದಲ್ಲಿ ಅನುಸರಿಸುವ ಮೌಲ್ಯಗಳೇ ಬೇರೆ ಎನ್ನುವುದು ದಿಟ. ಆದರೆ ಜನಮಾನಸದಲ್ಲಿ ತಮ್ಮ ಅಭಿನಯ ಕಲೆಯಿಂದ ಮನೆ ಮಾಡಿದ ಕಲಾವಿದ ಜನಸಾಮಾನ್ಯರ ತುಡಿತಗಳಿಗೆ ಸ್ಪಂದಿಸಿದರೆ ಎಷ್ಟು ಆಪ್ತರಾಗಬಹುದು ? ಈ ಪ್ರಶ್ನೆಗೆ ಇರ್ಫಾನ್ ಅಂಥವರು ಮಾತ್ರ ಉತ್ತರ ನೀಡಲು ಸಾಧ್ಯ. ಅದಕ್ಕೇ ಇರ್ಫಾನ್ ಭಾಯಿ ಇಷ್ಟವಾಗುತ್ತಾರೆ.

53, ಸಾಯುವ ವಯಸ್ಸಲ್ಲ. ಆದರೆ ಅವರು ಎದುರಿಸಿದ ಖಾಯಿಲೆಗೆ ಒಂದರಿಂದ ನೂರು ಲೆಕ್ಕವೇ ಗೊತ್ತಿಲ್ಲ. ಕರೆದುಕೊಂಡು ಹೋಗಲೆಂದೇ ಬಂದ ಖಾಯಿಲೆಯೊಡನೆ ಎರಡು ವರ್ಷಗಳ ಕಾಲ ಸೆಣಸಿ ಇರ್ಫಾನ್ ವಿದಾಯ ಹೇಳಿದ್ದಾರೆ. 2018ರಲ್ಲಿ ಅವರು ಲಂಡನ್ನಿನ ಆಸ್ಪತ್ರೆಗೆ ದಾಖಲೆಯಾಗಿದ್ದಾಗ ಬರೆದ ಪುಟ್ಟ ಬರಹ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಅದರ ಕೆಲವು ಸಾಲುಗಳು ಹೀಗಿವೆ :- ನಾನು ವೇಗವಾಗಿ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಕನಸುಗಳು, ಯೋಜನೆಗಳು, ಗುರಿಗಳು ಎಲ್ಲವುಗಳಲ್ಲಿ ಎಂಗೇಜ್ ಆಗಿದ್ದೆ. ಥಟ್ಟನೆ ಯಾರೋ ಭುಜ ತಟ್ಟಿದಂತಾಯಿತು, ತಿರುಗಿ ನೋಡಿದರೆ ಟಿ ಸಿ ನಿಂತಿದ್ದರು “ ನೀವು ತಲುಪಬೇಕಾದ ಸ್ಥಳ ಬಂದಿದೆ, ಪ್ಲೀಸ್ ಇಳಿದುಬಿಡಿ ಎಂದರು, ಇಲ್ಲ ಇಲ್ಲ ನಾನು ತಲುಪಬೇಕಾದ ಸ್ಥಳ ಇನ್ನೂ ಬಂದಿಲ್ಲ ಎಂದೆ, ಇಲ್ಲ ಇದೇ ಅದು ಕೆಲವೊಮ್ಮೆ ಹಾಗೆಯೇ ಆಗುತ್ತೆ ”. ಓಹ್ ಸಾವಿನ ನಿರೀಕ್ಷೆಯಲ್ಲಿರುವ ಒಬ್ಬ ವ್ಯಕ್ತಿ ಈ ರೀತಿಯ ರೂಪಕವನ್ನು ಬರೆಯುವುದೆಂದರೆ ಅಚ್ಚರಿಯಾಗುವುದಲ್ಲವೇ ?

ಇರ್ಫಾನ್ ಹೀಗೆ ಬರೆದಿದ್ದನ್ನು ಅನುವಾದಿಸಿದ ವೇಣುಗೋಪಾಲ್ ಶೆಟ್ಟಿಯವರಿಗೆ ಸಾವಿರ ವಂದನೆಗಳು. ಹಂಚಿಕೊಂಡ ವಿನುತಾ ವಿಶ್ವನಾಥ್ ಮತ್ತು ಪುರುಷೋತ್ತಮ್ ಬಿಳಿಮಲೆಯವರಿಗೂ. ಜೀವನ ದರ್ಶನ ಮಾಡಿಸುವ ಇಂತಹ ಮಾತುಗಳು ಕೆಲವೊಮ್ಮೆ ಐಡಿಯಲಿಸ್ಟಿಕ್ ಎನಿಸಬಹುದು ಅಥವಾ ಭಾವನಾತ್ಮಕವೋ, ಅಧ್ಯಾತ್ಮವೋ ಎನಿಸಬಹುದು. ಆದರೆ ಈ ರೀತಿ ಸಾವಿನ ನಿರೀಕ್ಷೆಯಲ್ಲಿರುವವರೊಡನೆ ಬದುಕಿದವರಿಗೆ ಇದು ಹೆಚ್ಚು ಆಪ್ತ ಎನಿಸುತ್ತದೆ. ಇರ್ಫಾನ್ ಎರಡು ವರ್ಷಗಳ ಕಾಲ ಹೀಗೆ ಅಂತ್ಯದ ನಿರೀಕ್ಷೆಯಲ್ಲೇ ಬದುಕಿ ಮರ್ತ್ಯ ಮೀರಿ ನಿಲ್ಲಲು ಯತ್ನಿಸಿದ್ದಾರೆ.

ಅವರೇ ತಮ್ಮ ಪತ್ರದಲ್ಲಿ ಹೇಳಿರುವಂತೆ “ ಸಾಗರದಲ್ಲಿ ತೇಲುತ್ತಿರುವ ಮರದ ತೊಗಟೆಯಂತಿರುವ ನಿಮಗೆ ಅಲ್ಲಿನ ಅಲೆಗಳು ಹೇಗಿರಬಹುದೆಂದು ಊಹಿಸಲೂ ಅಸಾಧ್ಯವಾಗುತ್ತದೆ, ಅವುಗಳನ್ನು ನಿಯಂತ್ರಿಸಲು ನೀರು ಹತಾಶರಾಗಿ ಪ್ರಯತ್ನಿಸುತ್ತೀರಿ ” ಮತ್ತೊಂದು ರೂಪಕ. ಬದುಕುವ ಛಲ ಮತ್ತು ಸಾವಿನ ನಿರೀಕ್ಷೆಯ ನಡುವೆ ಸಂಘರ್ಷ ಎಂದರೆ ಇದೇ ಅಲ್ಲವೇ ? ಎಂತಹ ಬರಹ ಬಿಟ್ಟುಹೋಗಿದ್ದೀರಿ ಇರ್ಫಾನ್. ಒಂದೇ ಪುಟ ಇದ್ದರೂ ಬೃಹತ್ ಕಾವ್ಯದಂತೆ ಭಾವ ಸ್ಫುರಿಸಿದೆ. ನೀವು ನಿಜಕ್ಕೂ ಧನ್ಯ ಇರ್ಫಾನ್ ಭಾಯ್.

ಇರ್ಫಾನ್‍ಖಾನ್ ಅವರ ಸಾವಿನ ಸುದ್ದಿ ಖಿನ್ನತೆ ಮೂಡಿಸಿತ್ತು

ಮಧ್ಯಾಹ್ನ ಕೊರೋನಾ ಇಲ್ಲದ ಸುದ್ದಿಯನ್ನು (ಕನ್ನಡ ಸುದ್ದಿಮನೆಯಲ್ಲ) ನೋಡಲು ಅವಕಾಶ ಸಿಕ್ಕಿತೆಂಬ ಸಣ್ಣ ಖುಷಿ ಒಂದೆಡೆಯಾದರೆ ಇರ್ಫಾನ್‍ಖಾನ್ ಅವರ ಸಾವಿನ ಸುದ್ದಿ ಖಿನ್ನತೆ ಮೂಡಿಸಿತ್ತು. ನೆನ್ನೆ ರಾತ್ರಿ ಏನೋ ನೆನಪಾಯಿತು. ರಾಜೇಶ್ ಖನ್ನಾ-ಅಮಿತಾಬ್ ನಟನೆಯ, ಹೃಷಿಕೇಶ್ ಮುಖರ್ಜಿಯ ಆನಂದ್ ಚಿತ್ರ ನೆನಪಾಯಿತು. ನೋಡಿದಾಗಲೆಲ್ಲಾ ಕಣ್ಣು ವದ್ದೆ ಮಾಡುವ ಚಿತ್ರ ಅದು. ಹಾಗೆಯೇ ಸಾವು ಬದುಕಿನ ಸಂಘರ್ಷವನ್ನು, ಸಾವಿನ ನಿರೀಕ್ಷೆಯಲ್ಲಿರುವ ಒಬ್ಬ ಸರಳ ವ್ಯಕ್ತಿಯ ಕಣ್ಣುಗಳ ಮೂಲಕ ತೋರಿಸುವ ಚಿತ್ರವೂ ಹೌದು. ರಾಜೇಶ್ ಖನ್ನನ ಬದುಕಿನ ಮೈಲಿಗಲ್ಲು ಈ ಚಿತ್ರ. ಈ ಚಿತ್ರದ ಕೆಲವು ಸಂಭಾಷಣೆಗಳು ಸಾರ್ವಕಾಲಿಕವಾದವು, ಸಾರ್ವತ್ರಿಕವಾದವೂ ಹೌದು. ಕ್ಯಾನ್ಸರ್ ಇರುವ ಒಬ್ಬ ಕವಿ ಹೃದಯದ ವ್ಯಕ್ತಿ ಇನ್ನು ಆರು ತಿಂಗಳಲ್ಲಿ ತಾನು ಈ ಲೋಕದಲ್ಲಿ ಇರುವುದಿಲ್ಲ ಎಂದು ತಿಳಿದಿದ್ದರೂ , ಜೀವನವನ್ನು ನೋಡುವ ಬಗೆ, ಅದ್ಭುತ. ಚಿತ್ರ ನೋಡಿಯೇ ಆಸ್ವಾದಿಸಬೇಕು.

ಈ ಚಿತ್ರದಲ್ಲಿ ಕಾಕಾನ (ರಾಜೇಶ್ ಖನ್ನನ ಅಡ್ಡಹೆಸರು) ಕೆಲವು ಸಂಭಾಷಣೆಗಳಿವೆ. ಆನಂದ್‍ಗೆ ಕ್ಯಾನ್ಸರ್ ಗಡ್ಡೆ ಇದೆ ಎಂದು ತಿಳಿದಾಗ “ ನಾನು ಇನ್ನು ಆರು ತಿಂಗಳಿಗಿಂತಲೂ ಹೆಚ್ಚು ಬದುಕುವುದಿಲ್ಲ. 70 ವರ್ಷಕ್ಕೂ ಆರು ತಿಂಗಳಿಗೂ ಏನು ವ್ಯತ್ಯಾಸವಿದೆ , ಮುಂದಿನ ಆರು ತಿಂಗಳಲ್ಲಿ ಲಕ್ಷಾಂತರ ಕ್ಷಣಗಳನ್ನು ಬದುಕುವವರ ಪಾಡೇನು ? ಬದುಕು ದೀರ್ಘವಾಗಿರಬೇಕಿಲ್ಲ ಉತ್ತಮವಾಗಿರಬೇಕು, ನಾನು ಬದುಕಿರುವವರೆಗೂ ಸತ್ತಿರುವುದಿಲ್ಲ ಸತ್ತ ನಂತರ ನಾನೇ ಇರುವುದಿಲ್ಲ ” ಇದು ಆನಂದ್ ಒಬ್ಬ ವೈದ್ಯನಿಗೆ, ಅಮಿತಾಬ್‍ಗೆ ಹೇಳುವ ಮಾತುಗಳು. ಮತ್ತೊಂದು ದೃಶ್ಯದಲ್ಲಿ “ ಪ್ರತಿಯೊಂದು ನಗುವಿನ ಹಿಂದೆಯೂ ಖುಷಿಯೇ ಇರಬೇಕೆಂದಿಲ್ಲ ಬಾಬುಮೊಷಾಯ್ ಕೆಲವೊಮ್ಮೆ ದುಃಖವೂ ಇರುತ್ತದೆ ” ಎನ್ನುತ್ತಾನೆ. ಒಮ್ಮೆ ಆನಂದನ ಗೆಳೆಯನ ಮಡದಿ ತನ್ನ ಹುಟ್ಟುಹಬ್ಬದ ದಿನ ಅವನ ಆಶೀರ್ವಾದ ಬಯಸುತ್ತಾಳೆ ಆಗ ಆನಂದ್ “ ನಿನಗೆ ಏನೆಂದು ಹಾರೈಸಲಿ ತಂಗಿ, ನನ್ನ ಆಯಸ್ಸನ್ನು ನಿನಗೆ ಕೊಡು ಎಂದು ದೇವರಲ್ಲಿ ಕೇಳಲೂ ಆಗುವುದಿಲ್ಲ ” ಎಂದು ಮನದಲ್ಲೇ ಪರಿತಪಿಸುತ್ತಾನೆ.

ಮತ್ತೊಂದು ಮನಮಿಡಿಯುದ ದೃಶ್ಯದಲ್ಲಿ ಅಮಿತಾಬ್ ಒಬ್ಬ ವೈದ್ಯನಾಗಿ ಆನಂದ್‍ಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಹೇಳುತ್ತಾನೆ . ಆಗ ಆನಂದ್ “ ಇನ್ನೆಷ್ಟು ದಿನ ನನಗೆ, ನಿನ್ನ ದಿನಗಳು ಮುಗಿಯುತ್ತಿವೆ ಎಂದು ನೆನಪುಮಾಡುತ್ತೀಯ ಬಾಬುಮೊಷಾಯ್, ಈವರೆಗೂ ಯಾರೂ ತನ್ನ ಸಾವನ್ನು ಕಂಡಿಲ್ಲ ಆದರೆ ನಾನು ದುರ್ಭಾಗ್ಯನು, ಪ್ರತಿಕ್ಷಣವೂ ನನ್ನ ಸಾವನ್ನು ಕಾಣುತ್ತಿದ್ದೇನೆ , ನಿನ್ನ ನೋವು ತುಂಬಿದ ಕಣ್ಣುಗಳಲ್ಲಿ ” ಎಂದು ಹೇಳುತ್ತಾನೆ. ಅಂತ್ಯದ ನಿರೀಕ್ಷೆಯಲ್ಲಿರುವ ಒಂದು ಜೀವ ಮತ್ತೊಂದು ಜೀವದ ಕಣ್ಣುಗಳಲ್ಲಿ ಜೀವಂತಿಕೆ ಬಯಸುತ್ತದೆ. ಇಂತಹ ದೃಶ್ಯ ರೂಪಕಗಳು ಬಹುಶಃ ಈಗಿನ ಚಿತ್ರಗಳಲ್ಲಿ ಕನಸಿನ ಮಾತೆನ್ನಿ.

ಇರ್ಫಾನ್ ಇದೇ ಪ್ರಯತ್ನ ಮಾಡಿ ಹೊರಟುಬಿಟ್ಟಿದ್ದಾರೆ

ಈ ಆನಂದ್ ಚಿತ್ರ ನನಗೆ ಬಹಳ ಆಪ್ತವಾದದ್ದು. ಇದಕ್ಕೆ ಕಾರಣವೂ ಇದೆ. ತನ್ನ ಬದುಕಿನ ಪಯಣ ಇನ್ನು ಕೆಲವೇ ದಿನಗಳಲ್ಲಿ, ವರ್ಷಗಳಲ್ಲಿ ಅಂತ್ಯವಾಗುತ್ತದೆ ಎಂದು ತಿಳಿದಿದ್ದೂ ಸದಾ ಹರ್ಷಚಿತ್ತನಾಗಿರುವ ಆನಂದ್ ಬಹಳ ಆಪ್ತ ಎನಿಸುತ್ತಾನೆ. ಏಕೆಂದರೆ ಅವನು ಬದುಕು ಮತ್ತು ಸಾವು ಎರಡನ್ನೂ ಗೆಲ್ಲಲು ಯತ್ನಿಸುತ್ತಾನೆ. ಬಹುಶಃ ಇರ್ಫಾನ್ ಇದೇ ಪ್ರಯತ್ನ ಮಾಡಿ ಹೊರಟುಬಿಟ್ಟಿದ್ದಾರೆ.

ನನ್ನೊಡನೆ ನಾಲ್ಕು ದಶಕಗಳ ಕಾಲ ಬದುಕಿ ತನ್ನ ಪಯಣ ಮುಗಿಸಿದ ನನ್ನ ಸೋದರ ನಾಗರಾಜ್ ಇದೇ ಸನ್ನಿವೇಶದಲ್ಲೇ ಬದುಕಿದ್ದನ್ನು ಕಂಡಿದ್ದೇನೆ. ಅವನಿಗೆ ವಿ ಎಸ್ ಡಿ (ventricular septal defect)ತೊಂದರೆ ಇತ್ತು. ಅಂದರೆ ಹೃದಯದ ಹೃತ್ಕುಕ್ಷಿಗಳನ್ನು ಬೇರ್ಪಡಿಸುವ ಗೋಡೆ (ಸೆಪ್ಟಮ್)ಯಲ್ಲಿ ಒಂದು ರಂಧ್ರ ಇತ್ತು. ರಕ್ತ ಎಡದಿಂದ ಬಲಕ್ಕೆ ಹರಿಯುತ್ತಿದ್ದುದರಿಂದ, ಆಮ್ಲಜನಕದ ಅಂಶ ಹೆಚ್ಚಾಗಿರುವ ರಕ್ತ ಶ್ವಾಸಕೋಶದೊಳಗೆ ಹೋಗುತ್ತಿತ್ತು. ಆಗ ಹೃದಯ ಬಡಿತದ ವೇಗ ಹೆಚ್ಚಾಗುತ್ತಿತ್ತು. ಶ್ರಮವಹಿಸುವ ಯಾವುದೇ ಕೆಲಸ ಮಾಡಲಾಗುತ್ತಿರಲಿಲ್ಲ. ಹುಟ್ಟಿನಿಂದಲೇ ಬಂದ ಸಮಸ್ಯೆ, ಚಿಕಿತ್ಸೆ ನೀಡಲಿಲ್ಲವೆನ್ನಿ.

ನಮಗಿಬ್ಬರಿಗೂ ಕೆನರಾ ಬ್ಯಾಂಕಿನಲ್ಲಿ ಒಮ್ಮೆಲೆ ನೌಕರಿ ದೊರೆತಾಗ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು. ಇವನಿಗೆ ಇದ್ದ ಸಮಸ್ಯೆಯನ್ನು ನೋಡಿ ವೈದ್ಯರು ನಿರಾಕರಿಸಿಬಿಟ್ಟರು. ನೌಕರಿ ಇಲ್ಲದಿದ್ದರೆ ನಮ್ಮ ಬದುಕೂ ಇಲ್ಲ ಎನ್ನುವ ಪರಿಸ್ಥಿತಿ. ಹೇಗೋ ವೈದ್ಯರ ಕಾಲು ಹಿಡಿದು ಪ್ರಮಾಣಪತ್ರ ಗಿಟ್ಟಿಸಿಕೊಂಡೆವು. ಆಗ ನಮಗೆ ಮತ್ತು ಅವನಿಗೆ ತಿಳಿದ ವಿಷಯ, ಅವನ ಆಯಸ್ಸು 40 ವರ್ಷ ಮಾತ್ರ ಎನ್ನುವುದು. ನಮ್ಮ ಕಣ್ಣೀರು ಕೋಡಿ ಹರಿಯಿತು, ಅವನು ವಿಚಲಿತನಾಗಲಿಲ್ಲ. ಐದು ಮೆಟ್ಟಿಲುಗಳಿಗಿಂತಲೂ ಹೆಚ್ಚು ಹತ್ತಲಾಗುತ್ತಿರಲಿಲ್ಲ. ಓಡುವುದು ಸಾಧ್ಯವೇ ಇರಲಿಲ್ಲ. ಭಾರ ಎತ್ತುವುದು ಅಸಾಧ್ಯವಾಗಿತ್ತು. ಬ್ಯಾಂಕಿನಲ್ಲಿ (ಆಗ ಲೆಡ್ಜರ್ ಇದ್ದ ಕಾಲ 1984) ಲೆಡ್ಜರ್ ಎತ್ತಿಕೊಡಲು ಯಾರಾದರೂ ಬರಬೇಕಿತ್ತು. ಮೊದಲ ಅಂತಸ್ತಿನಲ್ಲಿದ್ದ ವಿಭಾಗ ಅವನಿಗೆ ನಿಷಿದ್ಧ ಏಕೆಂದರೆ ಮೆಟ್ಟಿಲು ಹತ್ತಲಾಗುತ್ತಿರಲಿಲ್ಲ. ಮನೆಯಲ್ಲಿ ನನ್ನ ರಕ್ಷಣೆ ಮತ್ತು ನೆರವು ಇತ್ತೆನ್ನಿ.

ಇರ್ಫಾನ್ ಖಾನ್ ಬದುಕು ಮತ್ತು ಆನಂದ್ ಚಿತ್ರವನ್ನು ನೋಡುವಾಗ ಅವನ ನೆನಪಾಗುತ್ತದೆ. “ ಈ ಆ್ಯಮ್ ಎ ಹೋಲ್ ಹಾರ್ಟೆಡ್ ಮ್ಯಾನ್ ” ಎನ್ನುತ್ತಿದ್ದ. ಯಾರಾದರೂ ಏಕೆ ಎಂದು ಕೇಳಿದರೆ ಹಾರ್ಟ್‍ನಲ್ಲಿ ಹೋಲ್ ಇದೆ ಅದಕ್ಕೇ ಎನ್ನುತ್ತಿದ್ದ. ಹೀಗೆ ಅವನ ಹಾಸ್ಯ ಮಿಶ್ರಿತ ಮಾತುಗಳು. ಹತ್ತು ನಿಮಿಷ ನಡೆದರೆ ಅವನ ಹೃದಯ ಬಡಿತ ಐದು ಆಡಿ ದೂರಕ್ಕೆ ಕೇಳುತ್ತಿತ್ತು. ಸುಸ್ತಾಗಿ ಕುಳಿತುಬಿಡುತ್ತಿದ್ದ. ಎಷ್ಟೋ ಬಾರಿ ಅವನ ಇಡೀ ಭಾರವನ್ನು ನನ್ನ ಹೆಗಲ ಮೇಲೆ ಹೊತ್ತು ನಡೆಸಿದ್ದೆ. ಹೈದರಾಬಾದ್ ನೋಡಲು ಹೋದಾಗ ಅವನಿಗೆ ಮೇಲೆ ಹತ್ತಲಾಗುವುದಿಲ್ಲ ಎಂದು ನಾನೂ ಸಹ ಗೋಲ್ಕೊಂಡಾ, ಚಾರ್ ಮಿನಾರ್ ಒಳಗೆ ಹೋಗದೆ ಬಂದಿದ್ದೆ. ಅವನ ಜೀವನ ಬೇಗನೆ ಕೊನೆಯಾಗುತ್ತದೆ ಎಂದು ತಿಳಿದಿದ್ದೂ ಸದಾ ಎಲ್ಲರನ್ನೂ ನಗಿಸುತ್ತಲೇ ಬದುಕು ಸವೆಸಿದ ಸೋದರ ಅಗಲಿ 19 ವರ್ಷ ಕಳೆದಿದೆ. ಈಗಲೂ ಅವನ ಕೆಲವು ಜೋಕ್ಸ್ ನೆನಪಾಗುತ್ತವೆ. ಒಂದೆರಡು ತುಣುಕುಗಳು :

1. “ ಮೇನೇಜರ್ : ನಾಗರಾಜ್ ಇಲ್ಲಿ ಬನ್ನಿ ದುಬೈನಿಂದ ಬೇಗ್ ಬಂದಿದ್ದಾರೆ
ಇವನು : ಯಾಕ್ಸಾರ್ ನಿಧಾನವಾಗೇ ಬರಬಹುದಿತ್ತಲ್ಲವೇ ? ”

2. “ ಗೆಳೆಯ (ಮುಸ್ಲಿಂ) : ನಾಗರಾಜ್ ಜೀ ನನಗೆ ಗಂಡು ಮಗು ಹುಟ್ಟಿದೆ
ಇವನು : ಈದ್ ಮುಬಾರಕ್ ಜೀ !!
ಗೆಳೆಯ : ಏನ್ ದಿವಾಕರ್ ಮಗು ಹುಟ್ಟಿದ್ರೆ ಇವ್ನು ಈದ್ ಮುಬಾರಕ್ ಅಂತಾನೆ
ಇವನು : ಸಾರಿ, ಈದಿದ್ದಕ್ಕೆ ಮುಬಾರಕ್ !!!! ”

3. “ ನನ್ನ ಮದುವೆಯ ಸಂದರ್ಭ. ನನ್ನ ಭಾವಿ ಮಾವನರು ಕುಟುಂಬದವರೊಡನೆ ಮನೆಗೆ ಬಂದಿದ್ದರು.
ನನ್ನ ಸೋದರಿ : ಸರ್ ನಿಮಗೆ ಎಷ್ಟು ಮಕ್ಕಳು ?
ಭಾವಿ ಮಾವನವರು : ಹನ್ನೆರಡು ಜನ ಆರು ಗಂಡು ಆರು ಹೆಣ್ಣು
ನನ್ನ ಸೋದರಿ : ನೀವು ಏನು ಕೆಲಸ ಮಾಡ್ತಿದ್ರೀ ?
ಇವನು : ಅದೇ ಕೆಲ್ಸ !!!!!! ”

ಹೀಗೆ ತನ್ನ ಸಾವು ನಿಶ್ಚಿತ ಎಂದು ತಿಳಿದಿದ್ದೂ ಮಾತು ಮಾತಿಗೂ ಎಲ್ಲರನ್ನೂ ನಗಿಸುತ್ತಲೇ 17 ವರ್ಷಗಳ ಕಾಲ ಬದುಕು ಸವೆಸಿದ. ಮದುವೆ ಬೇಡ ಎಂದು ಹೇಳಿದ್ದರೂ ಮದುವೆಯಾದ. ಕೆಲವು ವರ್ಷ ಸಂಸಾರವೂ ನಡೆಯಿತು. ಆದರೆ ವೈದ್ಯರ ಮಾತು ಸುಳ್ಳಾಗಲಿಲ್ಲ. ನಲವತ್ತು ತುಂಬಿದ ನಾಲ್ಕು ತಿಂಗಳಲ್ಲೇ ಇಲ್ಲವಾದ, 2001.

ಇದೇ ಜೀವನ ಇದುವೇ ಜೀವನ ಎನ್ನಬಹುದೇ ?

ಇರ್ಫಾನ್ ಖಾನ್ ಇಲ್ಲವಾದ ಸಂದರ್ಭದಲ್ಲಿ ಮತ್ತು ಅವರ ಅದ್ಭುತ ಬರಹ ಓದಿದ ನಂತರ ಏಕೋ ನೆನಪು ಜಾರಿತು. ಆನಂದ್ ನನಗೆ ಆಪ್ತವಾಗುವುದು ಈ ಕಾರಣಕ್ಕೆ. ಈಗ ಇರ್ಫಾನ್ ಹೆಚ್ಚು ಆಪ್ತವಾಗುವುದೂ ಇದೇ ಕಾರಣಕ್ಕೆ. ಸಾವು ಬದುಕಿನ ನಡುವೆ ಅಂತರ ಬಹಳ ಕಡಿಮೆ ಎನ್ನುವ ವಾಸ್ತವವನ್ನು ಅರಿಯಲು ಇಂತಹ ಕೆಲವು ದೃಷ್ಟಾಂತಗಳೂ ನೆರವಾಗುತ್ತವೆ. ಇರ್ಫಾನ್ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿದ್ದಾರೆ. ಪರದೆಯ ಮೇಲೆ ಮತ್ತು ನಮ್ಮ ನಡುವೆ ಅದ್ಭುತ ನೆನಪುಗಳನ್ನೂ ಬಿಟ್ಟುಹೋಗಿದ್ದಾರೆ. ಇಂತಹ ಜೀವಗಳ ಜೀವಂತಿಕೆ ಸಾವಿನಲ್ಲೂ ಕಾಣುತ್ತದೆಯಲ್ಲವೇ ? ಇದೇ ಜೀವನ ಇದುವೇ ಜೀವನ ಎನ್ನಬಹುದೇ ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಟ ಮನದೀಪ್‌ ರಾಯ್‌ ನಿಧನ

Published

on

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್‌ ರಾಯ್‌ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.

ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್‌ ರಾಯ್‌ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್‌ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಬುಧವಾರ ರಾಶಿ ಭವಿಷ್ಯ-ಡಿಸೆಂಬರ್-28,2022 : ಈ ರಾಶಿಯವರಿಗೆ ಸಂಗಾತಿಯ ಸಂಪೂರ್ಣ ಸಹಕಾರ ಸಿಗಲಿದೆ, ಇದರಿಂದ ನಿಮ್ಮ ಅದೃಷ್ಟ ಬದಲಾಗಲಿದೆ

Published

on

ಈ ರಾಶಿಯವರಿಗೆ ಸಂಗಾತಿಯ ಸಂಪೂರ್ಣ ಸಹಕಾರ ಸಿಗಲಿದೆ, ಇದರಿಂದ ನಿಮ್ಮ ಅದೃಷ್ಟ ಬದಲಾಗಲಿದೆ,

ಬುಧವಾರ ರಾಶಿ ಭವಿಷ್ಯ-ಡಿಸೆಂಬರ್-28,2022

ಸೂರ್ಯೋದಯ: 06:45 ಏ ಎಂ, ಸೂರ್ಯಾಸ್ತ : 05:51 ಪಿ ಎಂ

ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078
ಪುಷ್ಯ ಮಾಸ, ಹೇಮಂತ ಋತು, ಶುಕ್ಲ ಪಕ್ಷ, ದಕ್ಷಿಣಾಯಣ

ತಿಥಿ: ಷಷ್ಠೀ 08:44 ಪಿಎಂ ವರೆಗೂ, ನಂತರ ಸಪ್ತಮೀ
ನಕ್ಷತ್ರ: ಶತಭಿಷ 12:46 ಪಿಎಂ ವರೆಗೂ , ಪೂರ್ವಾ ಭಾದ್ರ
ಯೋಗ: ಸಿದ್ಧಿ 02:21 ಪಿಎಂ ವರೆಗೂ , ವ್ಯತೀಪಾತ
ಕರಣ: ಕೌಲವ 09:43 ಏಎಂ ವರೆಗೂ , ತೈತಲೆ 08:44 ಪಿಎಂ ವರೆಗೂ , ಗರಜ

ರಾಹು ಕಾಲ: 12:00 ನಿಂದ 01:30 ವರೆಗೂ
ಯಮಗಂಡ: 07:30 ನಿಂದ 09:00 ವರೆಗೂ
ಗುಳಿಕ ಕಾಲ: 10:30 ನಿಂದ 12:00 ವರೆಗೂ

ಅಮೃತಕಾಲ: 04:04 ಏಎಂ ದಿನಪೂರ್ತಿ
ಅಭಿಜಿತ್ ಮುಹುರ್ತ: ಇಲ್ಲ

ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ ರಾಶಿ: ತುಂಬಾ ದಿನದ ಪ್ರೀತಿ, ಕೆಲವರು ಪ್ರೀತಿಸಿದವರು ಬೇರೆಯವರ ಜೊತೆ ಮದುವೆ ಇದು ಸಮಂಜಸವಲ್ಲ, ವಿದೇಶದಲ್ಲಿ ಉದ್ಯೋಗ ಹುಡುಕಾಟ ಪ್ರಯತ್ನಿಸಿದವರಿಗೆ ಯಶಸ್ವಿ ,ಹೋಂ ಮೇಡ್ ತಿಂಡಿತಿನಿಸು ವ್ಯಾಪಾರಸ್ಥರಿಗೆ ಅಧಿಕ ಲಾಭ,ಇಂಟೀರಿಯರ್ ಡಿಸೈನರ್ ಉದ್ಯೋಗದಲ್ಲಿ ಧನಲಾಭ. ಆರ್ಥಿಕ ಸಂಕಷ್ಟದಲ್ಲಿ ಇದ್ದವರಿಗೆ ಅನಿರೀಕ್ಷಿತ ಧನಲಾಭ. ಸಂತಾನ ಪ್ರಾಪ್ತಿ. ಸಂಗೀತ, ಹಿನ್ನೆಲೆ ಗಾಯನ, ನಟನೆ, ನಟ-ನಟಿಯರಿಗೆ, ಸಾಹಸ ಕಲಾವಿದರಿಗೆ ಸನ್ಮಾನಗಳು ಹಾಗೂ ಬೇಡಿಕೆ ಹೆಚ್ಚಾಗಲಿದೆ. ಶಿಕ್ಷಕರಿಗೆ ಅಪರೂಪದ ಮಹತ್ವಾಕಾಂಕ್ಷೆ ಕಾರ್ಯ ಯಶಸ್ವಿ. ಹೋಟೆಲ್ ಉದ್ಯಮದವರಿಗೆ ಆರ್ಥಿಕ ಚೇತರಿಕೆ. ಅಧಿಕಾರಿವರ್ಗದವರು ಕೆಲಸದ ಒತ್ತಡ. ತಂತ್ರಜ್ಞಾನ ಅಭ್ಯರ್ಥಿಗಳಿಗೆ ಉದ್ಯೋಗ ಪ್ರಾಪ್ತಿ. ಮಹಿಳಾ ಜನಪ್ರತಿನಿಧಿಗಳಿಗೆ ಆತಂಕ. ಅವಿವಾಹಿತ ಯುವಕ-ಯುವತಿಯರಿಗೆ ಮದುವೆ ಸಾಧ್ಯತೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ: ತುಂಬಾ ದಿನದ ಪ್ರೀತಿ ನಿಲುಕದ ನಕ್ಷತ್ರ, ಕಷ್ಟಪಟ್ಟು ದುಡಿದಷ್ಟು ಹೆಚ್ಚಿನ ಆದಾಯ ನಿಮ್ಮದಾಗಲಿದೆ. ಅನಿರೀಕ್ಷಿತ ಮದುವೆ ಯೋಗ. ನವದಂಪತಿಗಳ ಜೀವನದಲ್ಲಿ ಸಾಮರಸ್ಯ. ಭೂಮಿ ವ್ಯವಹಾರಗಳಲ್ಲಿ ಧನಲಾಭ. ಹೆಂಡತಿಯ ತವರು ಮನೆ ಕಡೆಯಿಂದ ಲಾಭ. ಆಂತರಿಕ ಶತ್ರು ಹೆಚ್ಚಾಗುತ್ತಾರೆ. ಉದ್ಯೋಗ ಅನ್ವೇಷಣೆಯಲ್ಲಿರುವವರಿಗೆ ಶುಭ ಸಂದೇಶ. ಸರ್ಕಾರಿ ನೌಕರಿ ಸಿಗುವ ಸಾಧ್ಯತೆ. ಕೆಲವರಿಗೆ ಉಷ್ಣ ವಾಯು ವಾತ ಪಿತ್ತ ಸಮಸ್ತೆ ಕಾಡಲಿದೆ. ಹಣದ ಕೊರತೆ ಸರಿದೂಗಿಸಲು ಪಾರ್ಟ್ ಟೈಮ್ ಜಾಬ್ ಪ್ರಯತ್ನ. ಹೆಣ್ಣುಮಕ್ಕಳಿಗೆ ಅತಿಯಾದ ನಿಧಾನ ಕೆಲಸಕಾರ್ಯ ಒಳ್ಳೆಯದಲ್ಲ. ಬಂಡತನ ಮಾಡಬೇಡಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ ರಾಶಿ: ಪ್ರೀತಿಸಿ ಬೇರೆಯವರ ಜೊತೆ ಮದುವೆ ಇದು ಸಮಂಜಸವಲ್ಲ ,ಸರಕಾರಿ ಮಟ್ಟದ ಕೆಲಸ ಮತ್ತು ಕಾನೂನು ಸಂಬಂಧಿಸಿದ ಕೆಲಸ ಯಶಸ್ವಿ. ಸ್ವಂತ ಉದ್ಯೋಗ ಪ್ರಾರಂಭಿಸುವುದು ಒಳಿತು. ಆಮದು ಮತ್ತು ರಫ್ತು ಸಂಬಂಧಿಸಿದಚಟುವಟಿಕೆಗಳು ಲಾಭದ ಕಡೆಗೆ. ತಕರಾರಿನಲ್ಲಿರುವ ಭೂಮಿಯ ವಿಚಾರಗಳಲ್ಲಿ ದಿಡೀರನೆ ಸಂಧಾನ ಬರುವ ಸಾಧ್ಯತೆ. ಅತಿಥಿ ಉಪನ್ಯಾಸಕರಿಗೆ ಉದ್ಯೋಗದ ಸಿಹಿ ಸಂತೋಷ. ಬೆಳ್ಳಿ, ಬಂಗಾರ,ಆಭರಣ ವೃತ್ತಿ ವ್ಯಾಪಾರಿಗಳಿಗೆ ನಷ್ಟದ ಚಿಂತನೆ. ಸರಕಾರಿ ಇಲಾಖೆಯ ಎಲ್ಲಾ ಉದ್ಯೋಗಿಗಳಿಗೆ ಲಾಭದಾಯಕ. ಕುಟುಂಬ ಸದಸ್ಯರ ಮದುವೆ ಭಾಗ್ಯ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕರ್ಕಾಟಕ ರಾಶಿ: ಪ್ರೀತಿಸಿ ಕೆಟ್ಟೆ ಎಂಬ ಅನುಭವ, ಪುರುಷರಿಗೆ ಹೃದಯದ ಸಮಸ್ಯೆ, ಹೆಣ್ಣುಮಕ್ಕಳಿಗೆ ಗರ್ಭಕೋಶ ಸೋಂಕು, ಮಂಡಿನೋವು ಶಸ್ತ್ರಚಿಕಿತ್ಸೆ ಸಮಸ್ಯೆ ಎದುರಿಸಬೇಕಾದೀತು. ಹೊಡೆದು ಹೋದ ಬದುಕು, ಕುಟುಂಬ ಏಕಾಂಗಿ ಜೀವನ. ಅಧಿಕಾರಿಗಳಿಗೆ ವೃತ್ತಿ ಕ್ಷೇತ್ರದಲ್ಲಿ ದನಲಾಭ,ಮನೆ ಕಟ್ಟುವ ವಿಚಾರ. ಶಿಕ್ಷಕರಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಸಂಕಷ್ಟ. ಆಸ್ತಿ ಹೋರಾಟದಲ್ಲಿ ಅನಿರೀಕ್ಷಿತ ಅಡತಡೆ. ಉದ್ಯೋಗ ಬದಲಾಯಿಸುವುದು ಬೇಡ. ಜನಪ್ರತಿನಿಧಿಗಳಿಗೆ ಧನಲಾಭ. ಕೃಷಿಭೂಮಿ ಕೊಳ್ಳುವಿರಿ. ಭೂ ವ್ಯವಹಾರದಲ್ಲಿ ಲಾಭ. ನಿಮ್ಮ ಪತ್ನಿಗೆ ಆಸ್ತಿ ದೊರೆಯಲಿದೆ. ಯುವಕ-ಯುವತಿಯರಿಗೆ ವಿವಾಹ ಕಾರ್ಯ ನೆರವೇರಲಿದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ ರಾಶಿ: ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿಗೆ ಹೊಂದಾಣಿಕೆ ಮತ್ತು ಕಾಯುವುದು ಉತ್ತಮ, ಸರ್ಕಾರಿ ಉದ್ಯೋಗ ಪಡೆಯುವುದಕ್ಕಾಗಿ ಶ್ರಮವಹಿಸಬೇಕು, ನಿವೇಶನ ಖರೀದಿಸುವ ಯೋಗವಿದೆ, ರಾಜಕೀಯ ವ್ಯಕ್ತಿಗಳಿಗೆ ಅನುಯಾಯಿಗಳಿಂದ ತೊಂದರೆ ಸಂಭವ,ಶೃಂಗಾರ ಸಾಮಗ್ರಿಗಳ ಸಗಟು ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ನಿರೀಕ್ಷೆ, ಸರಕುಸಾಗಾಣಿಕೆ ವ್ಯವಹಾರದಲ್ಲಿ ಆದಾಯ ದ್ವಿಗುಣ,
ಕಮಿಷನ್ ಏಜೆಂಟ್ವ್ಯವಹಾರಸ್ಥರಿಗೆ ಲಾಭದ ನಿರೀಕ್ಷೆ, ವ್ಯಾಪಾರಸ್ಥರಿಗೆ ಆರ್ಥಿಕಸಾಮಾನ್ಯವಾಗಿದೆ,ಉದ್ಯೋಗಿಗಳಿಗೆ ಹಿತಶತ್ರುಗಳಿಂದ ತೊಂದರೆ ಸಂಭವ, ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭ, ಹೊಸ ಉದ್ಯಮ ಪ್ರಾರಂಭದ ಬಗ್ಗೆ ಮಾತುಕತೆ ಪ್ರಾರಂಭ, ಮದುವೆ ಅಡತಡೆ ಎದುರಿಸಬೇಕಾದೀತು. ನಿಮ್ಮ ಮಧುರ ಪ್ರೇಮಕ್ಕೆ ನಂಬಿದ ವ್ಯಕ್ತಿಯಿಂದ ದ್ರೋಹ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾ ರಾಶಿ: ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆದರೂ ಆತಂಕ ತಪ್ಪಿದ್ದಲ್ಲ. ಲೇವಾದೇವಿ ವ್ಯವಹಾರದಲ್ಲಿ ಆದಾಯ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ನಿಂತಿದ್ದ ಮದುವೆ ವಿಜೃಂಭಣೆಯಿಂದ ನೆರವೇರುತ್ತದೆ. ಪ್ರೇಮಿಗಳು ಮಾನಸಿಕ ಒತ್ತಡದಿಂದ ಬಳಲುವಿರಿ. ಜನಪ್ರತಿನಿಧಿಗಳು ನಿಮ್ಮ ಗೌರವ ಘನತೆ ಕುಂದು ಬರುವ ಯಾವುದೇ ಕೆಲಸಗಳನ್ನು ಮಾಡಬೇಡಿ. ಗಂಡ ಹೆಂಡತಿ ಸಿಡುಕುತನ ಬಿಡಿ. ಮಹಿಳೆಯರಿಗೆ ಹಾರ್ಮೋನಿನ ತೊಂದರೆ ಮತ್ತು ರಕ್ತದ ಒತ್ತಡ ಸಮಸ್ತೆ ಕಾಡಲಿದೆ. ನಿಮಗಿಷ್ಟ ಪಟ್ಟವರು ಏಕಾಂತ ಸ್ಥಿತಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ತುಲಾ ರಾಶಿ: ಮದುವೆಯ ನಂತರ ಬಹುದೊಡ್ಡ ಭಾಗ್ಯೋದಯ ಐಶ್ವರ್ಯ, ಅಂತಸ್ತು ಮನೆ, ವಾಹನಗಳನ್ನು ಪಡೆಯುವಿರಿ. ಅನೈತಿಕ ಸಂಬಂಧಗಳು ಕೆಲವೊಮ್ಮೆ ಮಾರಕ, ಗುತ್ತಿಗೆದಾರರು ದೊಡ್ಡ ದೊಡ್ಡ ಅಣೆಕಟ್ಟುಗಳ ನಿರ್ಮಾಣ ರಸ್ತೆ ನಿರ್ಮಾಣ ಆಕ್ಷನ್ಸ್ ದೊರೆಯುತ್ತದೆ. ಉದ್ಯೋಗಿಗಳು ಅನಾವಶ್ಯಕವಾಗಿ ಮೇಲಾಧಿಕಾರಿಗಳ ಜೊತೆ ವಾದ- ವಿವಾದ ಮುಂದುವರೆಯಲಿದೆ. ಬೇರೆಯವರ ಹಣಕಾಸಿನ ವ್ಯವಹಾರದಿಂದ ದೂರವಿರಿ.
ಸ್ವ ಗೃಹ ಬಿಟ್ಟು ಬೇರೆ ಗೃಹದಲ್ಲಿ ವಾಸವಾಗಿದ್ದು ಸಮಸ್ಯೆಗಳ ಸುರಿಮಳೆ. ಶಿಕ್ಷಕರಿಗೆ ಆತಂಕದ ಸಮಯ. ಮಶಿನರಿ ಕೆಲಸ ನಿರ್ವಹಿಸುವವರಿಗೆ ಗಾಯ ಸಂಭವ. ವಕೀಲ ವೃತ್ತಿ ಇದ್ದವರು ಜನಪ್ರಿಯತೆ ಗಳಿಸುವಿರಿ. ಪ್ರೇಮಿಗಳ ಮದುವೆ ತಾಳ್ಮೆ ಅಗತ್ಯ. ವಿದೇಶಕ್ಕೆ ಹೋಗುವರು ಆತಂಕದ ಪರಿಸ್ಥಿತಿ ಎದುರಿಸುವರು. ನವದಂಪತಿಗಳಿಗೆ ಸಂತಾನ ಲಾಭವಿದೆ. ಆಕಸ್ಮಿಕ ಮದುವೆ ಯೋಗ. ನಿಮಗಿಷ್ಟ ಪಟ್ಟವರು ಮಧ್ಯಸ್ಥಿಕೆ ಜನರಿಂದ ಅಗಲಿಸುವರು,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ ರಾಶಿ: ನಿಮಗಿಷ್ಟ ಪಟ್ಟವರು ಗಾಳಿ ಮಾತಿನಿಂದ ದೂರ, ಆಸ್ತಿಯ ಸಮಸ್ಯೆ ಬಗೆಹರಿಯಲಿದೆ. ಅಪರಿಚಿತರಿಂದ ದೂರ ಇರಬೇಕು. ಅನೈತಿಕ ಸಂಬಂಧದಿಂದ ಅಪವಾದಗಳು ಅಪಮಾನಗಳು ಎದುರಿಸಬೇಕಾಗುತ್ತದೆ.ನಿಮ್ಮ ಆರೋಗ್ಯಕ್ಕಾಗಿ ಹೆಚ್ಚಿನ ಹಣ ವೆಚ್ಚವಾಗುತ್ತದೆ. ಕಣ್ಣಿನ ತೊಂದರೆ,ವಾತ, ಪಿತ್ತಜನಕಾಂಗ,ಮೈಗ್ರೇನ್ ಸಮಸ್ಯೆಗಳು ಎದುರಿಸಬೇಕಾಗುವುದು. ಗ್ಯಾರೇಜ್ ಕೆಲಸ ಮಾಡುವವರಿಗೆ ಧನಲಾಭ. ಮಹಿಳಾ ಉದ್ಯೋಗಿಗಳಿಗೆ ಬಡ್ತಿ ಭಾಗ್ಯ. ನಿಮ್ಮ ಮೇಲೆ ಅಪಾರವಾದ ಗೌರವ ಮುಂದುವರೆಯಲಿದೆ. ಉನ್ನತ ಅಧಿಕಾರಿಗಳಿಗೆ ಉತ್ತಮ ಕಾಲ ಸ್ಥಳ ಬದಲಾಯಿಸಲು. ವಾಹನ ಮಾರಾಟದಲ್ಲಿ ಮಧ್ಯಮ ಫಲ. ಮಧ್ಯವರ್ತಿಗಳಿಗೆ ಆರ್ಥಿಕ ಚೇತರಿಕೆಯ ಇಲ್ಲ. ಉದ್ಯೋಗದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ನಿಮ್ಮ ಸಂಗಾತಿ ನಿಮಗೆ ಮಾನಸಿಕವಾಗಿ ದೈಹಿಕವಾಗಿ ವ್ಯವಹಾರಿಕವಾಗಿ ಎಲ್ಲಾ ಕ್ಷೇತ್ರ ವಿಚಾರದಲ್ಲೂ ಸಲಹೆ ನೀಡುವರು.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನಸ್ಸು ರಾಶಿ: ಕುಟುಂಬ ಸದಸ್ಯರಲ್ಲಿ ಮದುವೆ ಯೋಗ. ದಂಪತಿಗಳಿಗೆ ಸಂತಾನ ಭಾಗ್ಯ. ಫೋಟೋಗ್ರಾಫಿ, ತೋಟಗಾರಿಕೆ, ಪೇಂಟಿಂಗ್, ಕಲೆ, ಸಹಿತ್ಯ, ಸಂಗೀತ ವಾದ್ಯಗಳ ನುಡಿಸುವಿಕೆ, ರಾಜಕೀಯ, ನಾಟಕ ಕಂಪನಿ, ರಂಗಭೂಮಿ ಕಲಾವಿದರಿಗೆ, ಅದೃಷ್ಟ ನಿಮ್ಮ ಹತ್ತಿರ ಹುಡುಕಿಕೊಂಡು ಬರುತ್ತದೆ. ನಿಮಗಿಷ್ಟ ಪಟ್ಟವರು ಕಾರಣ ಹೇಳದೆ ದೂರ ಸರಿಯುವರು,ತಾಳ್ಮೆಯಿಂದ ಕಾದು ನೋಡಿ. ಕರಕುಶಲ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗ ಸಿಗಲಿದೆ. ಆಧುನಿಕ ವ್ಯವಸಾಯ ಪ್ರಾರಂಭ ಮಾಡಲು ಸೂಕ್ತ ಸಮಯ. ಪುಸ್ತಕದ ಮಳಿಗೆ, ದಿನಸಿ ಮಾರಾಟ, ಮಹಿಳೆಯರ ವಸ್ತ್ರಗಳ ವ್ಯಾಪಾರ-ವ್ಯವಹಾರಗಳಲ್ಲಿ ಲಾಭಾಂಶ ತರುತ್ತದೆ. ಪ್ರೇಮಿಗಳ ಮನದಲ್ಲಿರುವ ಆತಂಕದ ಭಾವನೆ ಕ್ರಮೇಣ ಮರೆಯಾಗುತ್ತದೆ. ರಿಯಲ್ ಎಸ್ಟೇಟ್ ಕ್ಷೇತ್ರದ ಹಣಕಾಸಿನ ವಿಚಾರದಲ್ಲಿ ದಿಡೀರನೆ ಅಭಿವೃದ್ಧಿ ಕಂಡುಬರುತ್ತದೆ. ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸದಾ ದೊರೆಯುತ್ತದೆ. ನೃತ್ಯ ತರಬೇತಿದಾರರಿಗೆ ಮತ್ತು ವೀಣೆ ನುಡಿಸುವವರಿಗೆ ಆರ್ಥಿಕ ಲಾಭದ ಜೊತೆಗೆ ಪುರಸ್ಕಾರ ಸನ್ಮಾನ ದೊರೆಯಲಿದೆ. ಷೇರು ಮಾರುಕಟ್ಟೆಗೆ ಹಣ ಹೂಡುವ ಮುನ್ನ ಒಮ್ಮೆ ಯೋಚಿಸಿ. ಸೌಂದರ್ಯವರ್ಧಕ ವ್ಯಾಪಾರಸ್ಥರಿಗೆ ಧನಲಾಭ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಕರ ರಾಶಿ:ಇಂದು ಚೈತನ್ಯ ಶೀಲರಾಗಿ ಕೆಲಸಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ, ನಿಮಗೆ ಇಷ್ಟಪಟ್ಟವರು ಇದ್ದಕ್ಕಿದ್ದಂತೆ ದೂರ ಸರಿಯುವರು,ವಿದ್ಯುತ್, ಇಂಧನ, ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವವರು ಎಚ್ಚರ ವಹಿಸಿರಿ, ಎಲ್ಲಾ ವ್ಯಾಪಾರಸ್ಥರಿಗೆ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ, ಉದ್ಯಮಿಗಳ ಕಾರ್ಮಿಕರ ಸಮಸ್ಯೆ ಪರಿಹಾರ, ಸರ್ಕಾರಿ ಅಧಿಕಾರಿಗಳಿಂದ ಸಹಾಯ ದೊರೆತು ನಿಮ್ಮ ವ್ಯವಹಾರಗಳ ಅಡಚಣೆ ನಿವಾರಣೆ, ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿಗೆ ಹೊಂದಾಣಿಕೆ ಮತ್ತು ಕಾಯುವುದು ಉತ್ತಮ, ಸರ್ಕಾರಿ ಉದ್ಯೋಗ ಪಡೆಯುವುದಕ್ಕಾಗಿ ಶ್ರಮವಹಿಸಬೇಕು, ನಿವೇಶನ ಖರೀದಿಸುವ ಯೋಗವಿದೆ, ರಾಜಕೀಯ ವ್ಯಕ್ತಿಗಳಿಗೆ ಅನುಯಾಯಿಗಳಿಂದ ತೊಂದರೆ ಸಂಭವ,ಶೃಂಗಾರ ಸಾಮಗ್ರಿಗಳ ಸಗಟು ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ನಿರೀಕ್ಷೆ, ಸರಕುಸಾಗಾಣಿಕೆ ವ್ಯವಹಾರದಲ್ಲಿ ಆದಾಯ ದ್ವಿಗುಣ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕುಂಭ ರಾಶಿ: ನಿಮ್ಮ ಹೋಟೆಲ್ ವ್ಯವಹಾರದಲ್ಲಿ ಏರುಪೇರು ಇದ್ದರೂ ಚಿಂತಿಸಬೇಡಿ. ಲಾಭ ನಿಮ್ಮದೇ. ಶುಭಕಾರ್ಯಗಳಲ್ಲಿ ವಿವಾದ ಬರುವುದು. ಪಾಲುದಾರಿಕೆ ವ್ಯವಹಾರಗಳಲ್ಲಿ ನಷ್ಟ. ಅಧಿಕಾರಿಗಳಿಗೆ ಶುಭವಾರ್ತೆ ಬರಲಿದೆ. ಉದ್ಯಮಿಗಳಿಗೆ ಮತ್ತು ಕಾರ್ಮಿಕರ ನಡುವಿನ ಮನಸ್ತಾಪ ಅಂತ್ಯಗೊಳ್ಳುತ್ತದೆ. ಶೇರು ಮಾರುಕಟ್ಟೆಯಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ಹೋಮ್ ಮೇಡ್ ಉತ್ಪನ್ನಗಳ ಮಾರಾಟ ಉದ್ಯಮ ದಾರರಿಗೆ ಲಾಭದಾಯಕ. ಉದ್ಯೋಗ ಕ್ಷೇತ್ರದಲ್ಲಿ ಪುರುಷರು ಸ್ತ್ರೀಯರ ಜೊತೆ ಆದಷ್ಟು ಸಂಯಮದಿಂದ ವರ್ತಿಸಿ. ಜನಪ್ರತಿನಿಧಿಗಳಿಗೆ ಕೀರ್ತಿ- ಪ್ರತಿಷ್ಠೆ ಲಭಿಸುತ್ತದೆ. ಪಾರ್ಟ್ ಟೈಮ್ ಕೆಲಸಕ್ಕೆ ಪ್ರಯತ್ನ ಮಾಡುವಿರಿ. ಟ್ರಾನ್ಸ್ಪೋರ್ಟ್ ಬಿಜಿನೆಸ್ ನಲ್ಲಿ ನಷ್ಟ ಎದುರಿಸಬೇಕಾಗುವುದು. ನಿಮಗೆ ಇಷ್ಟ ಪಟ್ಟವರು ನಿಲುಕದ ನಕ್ಷತ್ರ, ಆಸ್ತಿ ಮಾರಾಟದಲ್ಲಿ ಅಡತಡೆ ಸಂಭವ. ಅಧಿಕಾರಿಗಳಿಗೆ ಕೆಲಸದ ಒತ್ತಡ ಮತ್ತು ಪ್ರಭಾವಶಾಲಿ ವ್ಯಕ್ತಿಯ ಒತ್ತಡ ಎದುರಿಸಬೇಕಾಗುವುದು. ವರ್ಗಾವಣೆ ಮಾಡಿಸಿಕೊಂಡರೆ ಉತ್ತಮ. ನರದೌರ್ಬಲ್ಯ ಸಮಸ್ಯೆ ಕಾಡಲಿದೆ. ನಿಂತಿದ್ದ ಮದುವೆ ವಿಜೃಂಭಣೆಯಿಂದ ಪ್ರಾರಂಭ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೀನ ರಾಶಿ: ಮನಸಾರೆ ಪ್ರೀತಿಸಿದವರು ನಿಲುಕುದ ನಕ್ಷತ್ರ, ನೀವು ಏನು ಮಾಡದ ತಪ್ಪಿಗೆ ದಾಂಪತ್ಯದಲ್ಲಿ ಅಶಾಂತಿ. ಕುಟುಂಬ ಸದಸ್ಯರೊಡನೆ ಮಾಡುವ ಪಾಲುದಾರಿಕೆ ವ್ಯಾಪಾರ ಹೋಟೆಲ್ ವ್ಯವಹಾರ ಲಾಭದಾಯಕ. ಹೋಮ್ ಮೇಡ್ ಉತ್ಪನ್ನಗಳ ವ್ಯಾಪಾರ ಆರ್ಥಿಕ ಚೇತರಿಕೆ. ಸೌಂದರ್ಯ ಸಾಧನ, ಬ್ಯೂಟಿ ಪಾರ್ಲರ್ ವ್ಯಾಪಾರಸ್ಥರಿಗೆ ಅಧಿಕ ಲಾಭ. ಮನೆ ನಿರ್ಮಾಣ ಉದ್ಯಮದಾರರರಿಗೆ ಅಧಿಕ ಲಾಭ, ಹಣ್ಣು ಬೆಳೆಗಾರರಿಗೆ ಮತ್ತು ಡ್ರೈ ಫ್ರೂಟ್ಸ್ ವ್ಯಾಪಾರಸ್ಥರಿಗೆ ಉತ್ತಮ ಲಾಭ ವಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಯು ಸ್ತ್ರೀ ವಿವಾದ ಎದುರಿಸುವಿರಿ. ಸ್ವ ಗೃಹ ನಿರ್ಮಾಣದಿಂದ ನಿಮ್ಮ ನಿವೇಶನ ನಿಮಗೆ ಸಿಗಲಿದೆ. ಮನೆಯಲ್ಲಿ ಮದುವೆ ಯೋಗ ಕೂಡಿಬರಲಿದೆ ಅದಕ್ಕೆ ದುಡ್ಡಿನ ಸಮಸ್ಯೆ ಬರದು. ವಿದೇಶ ಹೋಗಲಿಕ್ಕೆ ಇಚ್ಛೆ ಉಳ್ಳವರು ದೊರೆಯುವ ಅವಕಾಶಗಳನ್ನು ಸೂಕ್ತವಾಗಿ ಬಳಸಿ. ದೈವ ಬಲದಿಂದ ಸಫಲ. ವಾಹನ ಖರೀದಿಸುವ ಯೋಗ. ನಿಂತುಹೋಗಿದ್ದ ಮದುವೆ ಈಗ ನಡೆಯಲಿದೆ. ಸೇವಾ ಆಧಾರಿತ ಉದ್ಯೋಗ ಖಾಯಂ ಆಗುವ ಸಾಧ್ಯತೆ. ಅಧಿಕಾರಿಯ ಕಿರುಕುಳ ಕಡಿಮೆಯಾಗಲಿದೆ. ಹಣಕಾಸಿನ ಸಂಸ್ಥೆಯ ಉದ್ಯೋಗಸ್ಥರಿಗೆ ಹೆಚ್ಚಿನ ಲಾಭ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Continue Reading

ಸಿನಿ ಸುದ್ದಿ

ನಟ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ

Published

on

ಸುದ್ದಿದಿನ,ಬೆಂಗಳೂರು: ಸ್ಯಾಂಡಲ್ ವುಡ್ ನ ನಟ ‘ರೆಬಲ್​ ಸ್ಟಾರ್​’ ಅಂಬರೀಷ್​ ಹಾಗೂ ನಟಿ ಸುಮಲತಾ ದಂಪತಿಯ ಪುತ್ರ ಅಭಿಷೇಕ್​ ಅಂಬರೀಷ್ ಅವರು ಅವಿವಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಖ್ಯಾತ ಫ್ಯಾಷನ್‌ ಡಿಸೈನರ್‌ ಪ್ರಸಾದ್‌ ಬಿದ್ದಪ್ಪಾ ಅವರ ಪುತ್ರಿ ಅವಿವಾ ಬಿದ್ದಪ್ಪ ಜೊತೆ ಇಂದು ಅಭಿಷೇಕ್​ ನಿಶ್ಚಿತಾರ್ಥ ಖಾಸಗಿ ಹೋಟೆಲ್​​ನಲ್ಲಿ ನಿಶ್ಚಿತಾರ್ಥ ನಡೆದಿದೆ. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರು’ಸಂಕ್ರಾಂತಿ’ ಹಬ್ಬದ ನಂತರ ಸಪ್ತಪದಿ ತುಳಿಯಲಿದ್ದಾರೆ. ನಿಶ್ಚಿತಾರ್ಥದಲ್ಲಿ ಕುಟುಂಬಸ್ಥರು, ಆಪ್ತರು ಮಾತ್ರ ಭಾಗಿಯಾಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending