Connect with us

ದಿನದ ಸುದ್ದಿ

ಮನಸ್ಸು : ಬುದ್ಧನ ಬೋಧನೆಯ ಪ್ರಮುಖ ತಿರುಳು

Published

on

  • ರಘೋತ್ತಮ ಹೊ.ಬ

ಮ್ಮೆ ಭಗವಾನ್ ಬುದ್ಧರು ಶ್ರಾವಸ್ತಿಯಲ್ಲಿ ಉಳಿದುಕೊಂಡಿದ್ದರು. ಬುದ್ಧರು ಉಳಿದುಕೊಂಡಿದ್ದ ಆ ಸ್ಥಳಕ್ಕೆ ಕೋಸಲ ದೇಶದ ರಾಜ ಪ್ರಸೇನಜಿತ ಆಗಮಿಸಿದ. ರಥ ಇಳಿಯುತ್ತಿದ್ದಂತೆ ರಾಜ ಪ್ರಸೇನಜಿತ ಅತ್ಯುತ್ಕøಷ್ಟ ಗೌರವದಿಂದ ಬುದ್ಧರ ಬಳಿಗೆ ಬಂದ. ಬಂದವನೇ ಮಾರನೇ ದಿನ ತನ್ನ ನಗರಕ್ಕೆ ಬರುವಂತೆ, ತನ್ನ ಆತಿಥ್ಯವನ್ನು ಸ್ವೀಕರಿಸುವಂತೆ, ತಮ್ಮ ಬೋಧನೆ ಮತ್ತು ವ್ಯಕ್ತಿತ್ವದ ಶ್ರೇಷ್ಠತೆಯನ್ನು ತನ್ನ ಜನರ ಮುಂದೆ ಪ್ರದರ್ಶಿಸುವಂತೆ ಆತ ಬುದ್ಧರನ್ನು ಆಹ್ವಾನಿಸಿದ.

ಹಾಗೆಯೇ ಆತನ ಆಹ್ವಾನಕ್ಕೆ ಸಮ್ಮತಿಸಿದ ಬುದ್ಧರು ಮಾರನೆಯ ದಿನ ತನ್ನ ಉಪಾಸಕರೊಡನೆ ಪ್ರಸೇನಜಿತನ ನಗರವನ್ನು ಪ್ರವೇಶಿಸಿದರು. ನಗರದ ನಾಲ್ಕು ಬೀದಿಗಳ ಮೂಲಕ ನಡೆದು ಅವರು ತಮಗೆ ನಿಗಧಿಪಡಿಸಿದ ಸ್ಥಳದಲ್ಲಿ ಕುಳಿತುಕೊಂಡರು ಮತ್ತು ವಿನಯಪೂರ್ವಕವಾಗಿ ಪ್ರಸೇನಜಿತ ನೀಡಿದ ಆತಿಥ್ಯ ಸ್ವೀಕರಿಸಿ ಬುದ್ಧರು ನಗರದ ನಾಲ್ಕು ಹೆದ್ದಾರಿಗಳು ಕೂಡುವ ಸ್ಥಳದಲ್ಲಿ ವಿಶಾಲ ಸಭಿಕರ ಮುಂದೆ ತಮ್ಮ ಬೋಧನೆ ಪ್ರಾರಂಭಿಸಿದರು.

ಬುದ್ದರು ಹೀಗೆ ಬೋಧನೆ ನಡೆಸುತ್ತಿರಬೇಕಾದರೆ ಅಲ್ಲಿ ಇಬ್ಬರು ಶ್ರೀಮಂತರು ಉಪಸ್ಥಿತರಿದ್ದರು. ಅವರಲ್ಲಿ ಮೊದಲನೆಯವನು ಹೇಳಿದ “ಎಂತಹ ಶ್ರೇಷ್ಠ ಜ್ಞಾನ, ಅದರ ಅನ್ವಯದ ವ್ಯಾಪಕತೆ, ನಮ್ಮ ಅಂತರಂಗ ಪರಿಶೋಧಿಸುವ ಅದರ ಗುಣ ಇಂತಹದ್ದನ್ನು ಸಾರ್ವಜನಿಕವಾಗಿ ಬೋಧಿಸಲಾಗುತ್ತದೆಯೆಂದರೆ, ನಿಜಕ್ಕೂ ಇದು ರಾಜನ ಶ್ರೇಷ್ಠ ನಡವಳಿಕೆ”.

ಇನ್ನು ಇದಕ್ಕೆ ವಿರುದ್ಧವಾಗಿ ಎರಡನೆಯ ಶ್ರೀಮಂತ ಹೇಳಿದ್ದು “ಇಂತಹ ಮನುಷ್ಯನನ್ನು (ಬುದ್ಧನನ್ನು) ಕರೆತಂದು ಬೋಧನೆ ನೀಡಿಸುತ್ತಿರುವ ರಾಜನ ಈ ನಡೆ ಎಂಥ ಅವಿವೇಕದ್ದು? ಹಾಗೆಯೇ ಆ ಬುದ್ಧನೂ ಅಷ್ಟೆ ಹಸುವಿನ ಹಿಂದೆ ಕರು ಅಡ್ಡಾಡುವಂತೆ, ಕುರಿಯಂತೆ ಅರಚುತ್ತಾ ರಾಜನ ಹಿಂದೆ ಹೋಗುತ್ತಿದ್ದಾನೆ”. ಹೀಗೆ ಹೇಳುತ್ತಾ ಆ ಶ್ರೀಮಂತರಿಬ್ಬರು ಪರಸ್ಪರ ವಿದಾಯ ಹೇಳಿ ತಾವು ಉಳಿದುಕೊಂಡಿದ್ದ ವಸತಿಗೃಹಕ್ಕೆ ತೆರಳಿದರು. ಅದರಲ್ಲಿ ಮೊದಲನೆಯ ಶ್ರೀಮಂತ ಸ್ವಲ್ಪ ಮದ್ಯಪಾನ ಮಾಡಿ ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಂಡು ತನ್ನ ಸೇವಕರೊಡನೆ ವಸತಿಗೃಹದ ತನ್ನ ಕೋಣೆಯಲ್ಲಿ ಉಳಿದುಕೊಂಡ.

ಆದರೆ ಅದಕ್ಕೆ ತದ್ವಿರುದ್ಧವಾಗಿ ಎರಡನೆಯ ಶ್ರೀಮಂತ ಒಳಗಿನ ಕೆಟ್ಟತನದಿಂದ ಪ್ರೇರೇಪಿಸಲ್ಪಟ್ಟು ಮತಿಮೀರಿ ಮದ್ಯಪಾನ ಮಾಡಿದ. ಹೇಗೆಂದರೆ ಆತನಿಗೇ ಪರಿವೇ ಇಲ್ಲದೆ ತನ್ನ ವಸತಿಗೃಹದ ಮುಂಭಾಗದ ರಸ್ತೆಯಲ್ಲೇ ಆತ ಮಲಗಿದ ಮತ್ತು ಬೆಳಕುಹರಿಯುತ್ತಲೇ ಅವನದೇ ಸೇವಕರು ರಸ್ತೆಯಲ್ಲಿ ಮಲಗಿರುವುದು ಯಾರು ಎಂಬುದನ್ನು ಗುರುತಿಸದೇ ಕುದುರೆ ಗಾಡಿಯನ್ನು ಆತನ ಮೇಲೆ ಹರಿಸಿದರು. ಪರಿಣಾಮ ಆ ಶ್ರೀಮಂತ ಅಸುನೀಗಿದ.

ಆದರೆ ಮೊದಲನೆಯ ಶ್ರೀಮಂತ? ಆತ ದೂರದ ರಾಜ್ಯವೊಂದಕ್ಕೆ ತೆರಳುತ್ತಲೇ ಆತನ ಮುಂದೆ ಕುದುರೆಯೊಂದು ಬಂದು ಮೊಣಕಾಲೂರಿತು. ಆಶ್ಚರ್ಯವೆಂಬಂತೆ ಶ್ರೀಮಂತ ಆ ಕುದುರೆಯನ್ನೇರುತ್ತಲೇ ಅದು ಆತನನ್ನು ಆ ರಾಜ್ಯದ ಆಸ್ಥಾನಕ್ಕೆ ಹೊಯ್ದಿತ್ತು ಮತ್ತು ರಾಜಕುದುರೆ ಆರಿಸಿತರುವ ವ್ಯಕ್ತಿಗಾಗಿ ಕಾಯುತ್ತಿದ್ದ ಅಲ್ಲಿಯ ಜನರು ಕುದುರೆ ಹೀಗೆ ಶ್ರೀಮಂತನನ್ನು ಆರಿಸಿತರುತ್ತಿದ್ದಂತೆ ಆತನನ್ನು ಸಿಂಹಾಸನಕ್ಕೇರಿಸಿದರು. ಪರಿಣಾಮ ಆ ಶ್ರೀಮಂತ ಆ ರಾಜ್ಯದ ರಾಜನಾದ.

ಹೀಗೆ ಇಂತಹ ವಿಚಿತ್ರ ಘಟನೆಗಳು ನಡೆದ ಕೆಲ ದಿನಗಳ ತರುವಾಯ ರಾಜನಾದ ಆ ಶ್ರೀಮಂತ ಒಮ್ಮೆ ಸ್ವತಃ ಬುದ್ಧನನ್ನು ತನ್ನ ರಾಜ್ಯಕ್ಕೆ ಉಪದೇಶನೀಡುವಂತೆ ಆಹ್ವಾನಿಸಿದ. ರಾಜನಾಗಿ ನೇಮಕಗೊಂಡ ಆ ಶ್ರೀಮಂತನ ಆಹ್ವಾನಕ್ಕೆ ಮನ್ನಿಸಿದ ಬುದ್ಧರು ಆತನ ರಾಜ್ಯಕ್ಕೆ ಆಗಮಿಸಿದರು ಮತ್ತು ಆತನ ಆತಿಥ್ಯ ಸ್ವೀಕರಿಸಿ ಆ ಶ್ರೀಮಂತನ ಎದುರೇ “ಹೇಗೆ ಕೆಟ್ಟ ಮನಸ್ಸನ್ನು ಹೊಂದಿದ್ದ ಒಬ್ಬ ಶ್ರೀಮಂತ ಸಾವು ಕಂಡ, ಒಳ್ಳೆಯ ಮನಸ್ಸು ಹೊಂದಿದ್ದ ಮತ್ತೊಬ್ಬ ಹೇಗೆ ಉನ್ನತ ಸ್ಥಾನಕ್ಕೇರಿದ” ಎಂಬುದನ್ನು ವಿವರಿಸುತ್ತಾ “ಮನಸ್ಸೇ ಎಲ್ಲದಕ್ಕೂ ಮೂಲ. ಮನಸ್ಸೇ ಗುರು, ಮನಸ್ಸೇ ಕಾರಣ.ಮನಸ್ಸಿನ ಮಧ್ಯೆ ಕೆಟ್ಟ ಆಲೋಚನೆ ಇದ್ದರೆ ಆಗ ಮೂಡಿ ಬರುವ ಪದಗಳು ಕೆಟ್ಟದ್ದಾಗಿರುತ್ತವೆ, ಕ್ರಿಯೆಗಳೂ ಕೆಟ್ಟದ್ದಾಗಿರುತ್ತವೆ ಮತ್ತು ಅಂತಹ ಪಾಪದ ಫಲವಾಗಿ ಮೂಡಿಬರುವ ದುಃಖ ಆ ಮನುಷ್ಯನನ್ನು ಹೇಗೆ ರಥದ ಚಕ್ರಗಳು ಆತನನ್ನು ಹಿಂಬಾಲಿಸುತ್ತವೋ ಹಾಗೆ ಹಿಂಬಾಲಿಸುತ್ತವೆ” ಎನ್ನುತ್ತಾ…

“ಆದ್ದರಿಂದ ಮನಸ್ಸೇ ಎಲ್ಲದಕ್ಕೂ ಮೂಲ. ಇಂತಹದ್ದನ್ನು ಮಾಡು ಎಂದು ಆದೇಶಿಸುವುದೆಂದರೆ ಅದು ಮನಸ್ಸು.ಇಂತಹದ್ದನ್ನು ಯೋಚಿಸು ಎಂದು ಆದೇಶಿಸುವುದೆಂದರೆ ಅದು ಮನಸ್ಸು. ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳಿದ್ದರೆ ಆಗ ಮೂಡಿ ಬರುವ ಪದಗಳು, ಮಾಡುವ ಕ್ರಿಯೆ ಎಲ್ಲವೂ ಒಳ್ಳೆಯದ್ದಾಗಿರುತ್ತವೆ ಮತ್ತು ಅಂತಹ ಒಳ್ಳೆಯ ನಡವಳಿಕೆಯ ಫಲವಾಗಿ ಮೂಡಿಬರುವ ಸಂತೋಷ ಆ ಮನುಷ್ಯನನ್ನು ಹೇಗೆ ವಸ್ತುವೊಂದನ್ನು ಆತನ ನೆರಳು ಹಿಂಬಾಲಿಸುತ್ತದೆಯೋ ಹಾಗೆ ಹಿಂಬಾಲಿಸುತ್ತದೆ”. ಬುದ್ಧ ಹೀಗೆ ಹೇಳುತ್ತಲೇ ರಾಜನ ಸ್ಥಾನಕ್ಕೆ ಏರಿದ ಆ ಶ್ರೀಮಂತ, ಆತನ ಮಂತ್ರಿಗಳು, ಆತನ ರಾಣಿ ಎಲ್ಲರೂ ಬುದ್ಧನ ಅನುಯಾಯಿಗಳಾಗುತ್ತಾರೆ. (ಆಧಾರ: ‘ಬುದ್ಧ ಅಂಡ್ ಹಿಸ್ ಧಮ್ಮ’, ಲೇಖಕರು: ಡಾ.ಅಂಬೇಡ್ಕರ್, ಪು.282)

ಒಟ್ಟಾರೆ ಬುದ್ಧನ ಪ್ರಕಾರ ಜಗತ್ತಿನ್ನೆಲ್ಲ ದುಃಖಗಳಿಗೆ, ನೋವುಗಳಿಗೆ ಕಾರಣ ಮನುಷ್ಯನ ಮನಸ್ಸು. ಮನುಷ್ಯನ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆ ಮೂಡಿಬಂದರೆ ಸಂತಸ ತಾನಾಗೇ ನಮ್ಮತ್ತ ಹರಿದುಬರುತ್ತದೆ. ಕೆಟ್ಟ ಆಲೋಚನೆ ಮೂಡಿಬಂದರೆ ದುಃಖ ತಾನಾಗೇ ಅಂತಹವರನ್ನು ಹಿಂಬಾಲಿಸುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ಪ್ರಸ್ತಾಪಿತವಾಗಿರುವ ಆ ಶ್ರೀಮಂತರಿಬ್ಬರ ದೃಷ್ಟಾಂತದಲ್ಲಿ ಬುದ್ಧನ ಬೋಧನೆಯ ಆ ಪ್ರಮುಖ ತಿರುಳು ನಮಗೆ ಸ್ಪಷ್ಟವಾಗುತ್ತದೆ, ಇಡೀ ಜಗತ್ತಿಗೇ ಸುಸ್ಪಷ್ಟವಾಗಿ ತಿಳಿಯುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಟ ಮನದೀಪ್‌ ರಾಯ್‌ ನಿಧನ

Published

on

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್‌ ರಾಯ್‌ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.

ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್‌ ರಾಯ್‌ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್‌ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Published

on

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವ್‌ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.

ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.

ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

Published

on

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.

ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.

ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980336243

Continue Reading

Trending