ದಿನದ ಸುದ್ದಿ
ಆಸೆಯೇ ದುಃಖಕ್ಕೆ ಕಾರಣ ಇದು ಎಷ್ಟು ಸರಿ..?

- ಶಿವಸ್ವಾಮಿ,ಬೌದ್ಧ ಉಪಾಸಕರು
ಆಸೆಯೇ ದುಃಖ್ಖಕ್ಕೆ ಕಾರಣ ಎಂದೂ ಯಾರಾದ್ರೂ ಥಟ್!ಅಂತಾ ! ಹೇಳಿದರೆ ಮನಸ್ಸಿಗೆ ಮೊದಲು ಬರುವವರೇ ಬುದ್ಧ. ಹಾಗಾದರೆ ಮನುಷ್ಯನಾದವನು ಆಸೆಗಳನ್ನು ಹೊಂದಾಬಾರದೆ? ಆಸೆಗಳಿಲ್ಲಾದಿದ್ದರೆ ಮನುಷ್ಯ ಜೀವಿಸುವುದಾದರೂ ಏತಕ್ಕೆ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ, ಪ್ರತಿಯೊಬ್ಬರೂ ಬದುಕಬೇಕಾದ ರೇ ತಮ್ಮದೇ ಆದ ಆಸೆಗಳನ್ನು ಹೊಂದುತ್ತಾರೆ.
ಆದರೆ ತಮ್ಮ ಅತಿಯಾದ ಆಸೆಗಳಿಗೆ ಮಿತಿ ಇರಬೇಕಷ್ಟೇ !ಅತಿಯಾದರೆ ಅಮೃತವು ವಿಷವಾಗುತ್ತದೆ ಎಂಬಂತೆ ಜೀವನದಲ್ಲಿ ಸಮಸ್ಥಿತಿಯಿಂದ ಇರಬೇಕಾಗುತ್ತದೆ, ಆಸೆಯೇ ದುಃಖ್ಖಕ್ಕೆ ಕಾರಣವೆಂದು ಭಗವಾನ್ ಬುದ್ಧ ಹೇಳಿದರೆಂದು ಹಲವರು ಹೇಳುತ್ತಲೇ ಬಂದಿದ್ದಾರೆ, ಆದರೆ ಯಾವುದೇ ತ್ರಿಪಿಟಕಗಳಲ್ಲಿ ಕಂಡು ಬರುವುದಿಲ್ಲ, ಆದ್ದರಿಂದ “ಆಸೆಯೇ ದುಃಖ್ಖಕ್ಕೆ ಕಾರಣ” ಇದು ಸಮರ್ಪಕವಾದ ಹೇಳಿಕೆಯಲ್ಲ, ಪಾಳಿ ಭಾಷೆಯಲ್ಲಿ ತನ್ಹಾ ಎಂಬ ಪದವನ್ನು ಬಳಸುತ್ತಾರೆ.
ಇದು ಆಸೆಗೆ ಪರ್ಯಾಯ ಪದವಲ್ಲ ಇದಕ್ಕೆ ಇಂಗ್ಲಿಷ್ನಲ್ಲಿ ಆಸೆಗೆ ಹತ್ತಿರವಾದ Craving ಎಂಬ ಪದವನ್ನು ಬಳಸುತ್ತಾರೆ Craving ಎಂದರೆ ದುರಾಸೆ ಅಥವಾ ತೃಶ್ನೆ ಎಂದಾಗುತ್ತದೆ “ಆದ್ದರಿಂದ ದುರಾಸೆಯೇ ದುಃಖ್ಖಕ್ಕೆ ಕಾರಣವೆನ್ನಬಹುದು” . ಲೋಕದಲ್ಲಿ ದುಃಖ್ಖವಿದೆ, ದುಃಖ್ಖಕ್ಕೆ ಕಾರಣವು ಇದೆ, ದುಃಖ್ಖ ನಿರೋಧ, ದುಃಖ್ಖ ನಿರೋಧ ಮಾರ್ಗ ಎಂಬ ನಾಲ್ಕು ಆರ್ಯ ಸತ್ಯಗಳ ಮೂಲಕ, ನೈತಿಕತೆಯ ಆಧಾರದ ಮೇಲೆ ತನ್ನ ಅನುಭವದ ಮೂಲಕ ಮಾನವ ಪರವಾದ ಸತ್ಯವನ್ನು ಕಂಡು ಹಿಡಿದ ಅದೇ ನಿಜವಾದ ಬುದ್ಧನ ಧಮ್ಮ
4 ಆರ್ಯ ಸತ್ಯಗಳು
1.ದುಃಖ್ಖ
ಲೋಕದಲ್ಲಿ ದುಃಖ್ಖವಿದೆ ಹುಟ್ಟು ದುಃಖ್ಖ, ರೋಗ ದುಃಖ್ಖ, ವಯಸ್ಸಾಗುವುದು ದುಃಖ್ಖ, ಸಾವು ದುಃಖ್ಖ, ಬಯಸಿದ್ದು ಸಿಗದಿದ್ದರೆ ದುಃಖ್ಖ, ನೋವು, ಯಾತನೆ, ಕೊರಗು, ದೈಹಿಕವಾಗಿರಲಿ ಮಾನಸಿಕವಾಗಿರಲಿ ಅದೆಲ್ಲಾ ದುಃಖ್ಖ,.
2.ದುಃಖ್ಖಕ್ಕೆ ಕಾರಣ
ದುರಾಸೆ ಅಥವಾ ತೃಶ್ನೆ ಮೂರು ವಿಧವಾದ ದುರಾಸೆ ಅಥವಾ ತೃಶ್ನೆಗಳಿವೆ.
ಅ. ಕಾಮ ತೃಶ್ನೆ : ಪಂಚ ಇಂದ್ರಿಯಗಳ ವಿಷಯಗಳನ್ನು ಅನುಭವಿಸಬೇಕೆನ್ನುವ ಇಚ್ಛೆಯೇ ಕಾಮ ತೃಶ್ನೆ.
ಬ. ಭವ ತೃಶ್ನೆ : ನಾನು ಶಾಶ್ವತವಾಗಿ ಜೀವಿಸಬೇಕೆಂಬುದೇ ಭವ ತೃಶ್ನೆ, ನಾನು ದೊಡ್ಡ ಶ್ರೀಮಂತನಾಗಬೇಕು, ಸದಾ ಭೋಗಜೀವನದಲ್ಲಿರ ಬೇಕೇಂಬುದೇ ಆಗಿದೆ.
ಕ. ವಿಭವ ತೃಶ್ನೆ : ನಾನು ಈ ಪ್ರಪಂಚದಲ್ಲಿ ಇರಲೇಭಾರದು ಎಂಬ ಹತಾಶೆಯ ಸ್ಥಿತಿ.
3. ದುಃಖ್ಖ ನಿರೋಧ
ಲೋಕದಲ್ಲಿ ದುಃಖ್ಖವಿದೆ, ದುಃಖ್ಖ ಕ್ಕೆ ಕಾರಣವು ಇದೆ, ಎಂದ ಮೇಲೆ ದುಃಖ್ಖ ನಿರೋಧವು ಸಾಧ್ಯವಿದೆ ದುಃಖ್ಖ ನಿರೋಧದ ಮೂಲಗಳಾದ ಅಜ್ಞಾನ ಮತ್ತು ದುರಾಸೆಗಳಿಂದ ಹೊರ ಬಂದರೆ ದುಃಖ್ಖವು ದೂರವಾಗುತ್ತದೆ.
4.ದುಃಖ್ಖ ನಿರೋಧ ಮಾರ್ಗ
ನಾಲ್ಕನೇ ಆರ್ಯ ಸತ್ಯವೇ ದುಃಖ್ಖ ನಿರೋಧ ಮಾರ್ಗ ಅಥವಾ ಅಷ್ಠ ಮಾರ್ಗ ಅಥವಾ ಮದ್ಯಮ ಮಾರ್ಗ, ಪಂಚ ಇಂದ್ರಿಯಗಳ ಸುಖಕ್ಕಾಗಿ ಭೋಗಜೀವನದಲ್ಲಿ ತೊಡಗುವುದು ಮತ್ತು ನೋವಿನಿಂದ ಕೂಡಿದ ಕಠಿಣ ತಪಸ್ಸು ದೇಹ ದಂಡನೆ ಎಂಬ ಎರಡು ಅತೀರೇಖಾ ಮಾರ್ಗಗಳನ್ನು ಬುದ್ಧ ಕೈಬಿಟ್ಟಿದ್ದೆ ಅಲ್ಲದೆ ಸುಖ ಶಾಂತಿ ಪ್ರಜ್ಞೆಯ ಮಾರ್ಗವಾದ ಮನುಷ್ಯರನ್ನು ನಿಬ್ಬಾಣದ ಕಡೆಗೆ ಕರೆದೊಯ್ಯುವ ಮಾರ್ಗ ಕಂಡು ಹಿಡಿದರು ಅದುವೇ ಮದ್ಯಮ ಮಾರ್ಗ ಅಥವಾ ಅಷ್ಟಮಾರ್ಗ.
ದುಃಖ್ಖ ನಿವಾರಣೆಗಾಗಿ ಮದ್ಯಮ ಮಾರ್ಗವು 8 ಅಂಶಗಳನ್ನು ಹೊಂದಿದೆ.
- ಸರಿಯಾದ ದೃಷ್ಟಿ
- ಸರಿಯಾದ ಸಂಕಲ್ಪ
- ಸರಿಯಾದ ಮಾತು
- ಸರಿಯಾದ ಕೆಲಸ
- ಸರಿಯಾದ ಜೀವನೋಪಾಯ
- ಸರಿಯಾದ ಪ್ರಯತ್ನ
- ಸರಿಯಾದ ಅರಿವು
- ಸರಿಯಾದ ಏಕಾಗ್ರೆತೆ
ಪ್ರಕೃತಿಗೆ ಹತ್ತಿರವಾದ, ತಮ್ಮ ಅನುಭವದ ಮೂಲಕ ಕಂಡು ಕೊಂಡ ಬುದ್ಧರ ಅಂತಿಮ ಸತ್ಯವೇ ಅವರ ಧಮ್ಮ, ಧಮ್ಮ ಎಂಬ ಪಾಳಿ ಪದಕ್ಕೆ ಧರ್ಮ ಎಂಬ ಪದವು ಪದವಲ್ಲ, ಧಮ್ಮವೆಂದರೆ ಸರ್ವರ ಹಿತ ಸರ್ವರ ಸುಖ,’ನಾನು ಹೇಳಿದೆ ಎಂದೂ ಒಪ್ಪಿಕೊಳ್ಳಬೇಡಿ, ಬನ್ನೀ… ನಿಮ್ಮ ಅನುಭವದ ಮೂಲಕ ಇಲ್ಲಿ ಈಗಲೇ ಪರೀಕ್ಷಿಸಿ ಇಷ್ಟವಾದರೆ ಒಪ್ಪಿಕೊಳ್ಳಿ, ಇಲ್ಲಾವಾದರೆ ಬಿಟ್ಟುಬಿಡಿ ಎಂಬ ಮಾತನ್ನು ಬುದ್ಧರನ್ನು ಬಿಟ್ಟರೆ ಜಗತ್ತಿನ ಯಾವ ಧರ್ಮಗುರುಗಳು ಹೇಳಿರುವುದು ಕಂಡು ಬರುವುದಿಲ್ಲ.
ಮುಂದುವರಿದು ನಾನು
ದೇವಾಮಾನವನಲ್ಲ, ಯಾವುದೇ ನಾನು ಮುಕ್ತಿಧಾತನಲ್ಲ, ಕೇವಲ ಮಾರ್ಗಧಾತನಷ್ಟೇ, ನಿಮಗೆ ನೀವೇ ಬೆಳಕಾಗಿ, ಎಂದೂ ನೈತಿಕತೆಯ ಸತ್ಯದ ನಡೆ, ಕತ್ತಲಿನಿಂದ ಬೆಳಕಿನಡೆ, ಅಸತ್ಯದಿಂದ ಸತ್ಯದ ಕಡೆಗೆ ಕರೆದೊಯ್ಯುವ ಜ್ಞಾನದ ದೀಪವೇ ಬುದ್ಧರ ಧಮ್ಮ, ಬುದ್ಧರ ನಂತರ ಉತ್ತರಾಧಿಕಾರಿ ಯಾರು? ಎಂಬ ಶಿಷ್ಯ ಆನಂದನ ಪ್ರಶ್ನೆಗೆ ಉತ್ತರವಾಗಿ ಭಗವಾನ್ ಬುದ್ಧರು “ಧಮ್ಮಕ್ಕೆ ಧಮ್ಮವೇ ಉತ್ತರಾಧಿಕಾರಿ”ಎಂದೂ ಇಡೀ ವಿಶ್ವವನ್ನು ಧಮ್ಮವೇ ಮುನ್ನಡೆಸಲಿದೆ ಎಂದರು. ಬಹುಜನರಿಗೆ ಹಿತವಾದ, ಬಹುಜನರಿಗೆ ಸುಖವಾದ, ಲೋಕಕ್ಕೆ ಧಮ್ಮವನ್ನು ನೀಡಿ ಇಡೀ ಜಗತ್ತಿಗೆ ಬೆಳಕಾಗಿ ಇಂದಿಗೂ ಪ್ರಜ್ವಲಿಸುತಿದ್ದಾರೆ. ಬಂಧುಗಳೇ ಇಂದು ಅವರ ಜನ್ಮದಿನ, ಅವರ ತತ್ವ ಸಿದ್ಧಾಂತಗಳು ಸರ್ವರಿಗೂ ದಾರಿ ದೀಪಾವಾಗಿ, ಇಡೀ ವಿಶ್ವವು ಸುಖ ಶಾಂತಿ ನೆಮ್ಮದಿಯಿಂದ ನೆಲಸುವಂತಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

-
ನಿತ್ಯ ಭವಿಷ್ಯ6 days ago
ಸೋಮವಾರ- ರಾಶಿ ಭವಿಷ್ಯ ಜನವರಿ-23,2023 : ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ
-
ದಿನದ ಸುದ್ದಿ4 days ago
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ
-
ದಿನದ ಸುದ್ದಿ11 hours ago
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ10 hours ago
ನಟ ಮನದೀಪ್ ರಾಯ್ ನಿಧನ