Connect with us

ದಿನದ ಸುದ್ದಿ

ಬುಡಕಟ್ಟು ಜನಾಂಗದ ಗಟ್ಟಿ ದನಿ : ಸಾಯಿ ಪಲ್ಲವಿ

Published

on

  • ಸಿದ್ದು ಸತ್ಯಣ್ಣನವರ್

ಆಕೆಬಡಗ‘ ಎಂಬ ತಮಿಳುನಾಡಿನ ಬುಡಕಟ್ಟು ಜನಾಂಗದ ಕುಡಿ. ದ್ರಾವಿಡತನ ರಕ್ತದಲ್ಲೇ ಇತ್ತು. ಸಿನಿ ರಂಗ ಸೃಷ್ಟಿಸಿದ್ದ ಹಲವು ಸಿದ್ಧ ಮಾದರಿಗಳನ್ನು ಮೀರಿದ ಅಗ್ಗಳಿಕೆ ಸಹ ಆಕೆಯದು. ಹೆಸರು ‘ಸಾಯಿ‌ ಪಲ್ಲವಿ’. ಸದ್ಯ ದಕ್ಷಿಣ ಭಾರತ ಚಿತ್ರರಂಗದ ಬೇಡಿಕೆಯ ನಟಿ. ಆ ಬೇಡಿಕೆಯನ್ನು ತನ್ನ ಪ್ರಬುದ್ಧತೆ,‌ ,ಪ್ರತಿಭೆ, ನಟನಾ ಕೌಶಲ್ಯತೆಯಿಂದ ಸೃಷ್ಟಿಸಿಕೊಂಡಿರುವಾಕೆ.

ಕೆಲ ದಿನಗಳ ಹಿಂದೆ ಆಕೆ ಕಾಸ್ಮೆಟಿಕ್ ಕಂಪನಿಯೊಂದರ ಎರಡು ಕೋಟಿ ರೂಪಾಯಿ ಜಾಹೀರಾತನ್ನು ತಿರಸ್ಕರಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಅದು ಅವಳನ್ನು ಬಲ್ಲ ಕುಟುಂಬ ವರ್ಗ ಮತ್ತು ಸ್ನೇಹಿತ ವಲಯಕ್ಕೆ ಆಶ್ಚರ್ಯಕರ‌ ಸಂಗತಿಯೇನಾಗಿರಲಿಲ್ಲ. ಯಾಕೆಂದರೆ ಸಾಯಿ ಪಲ್ಲವಿ‌ಯ ತಂಗಿ ಪೂಜಾ‌ ಮೈ ಬಣ್ಣ ಕಪ್ಪು. ಅವಳು ಸಹ ಹಲವು ಕಂಪೆನಿಯ ಕಾಸ್ಮೆಟಿಕ್ ಪ್ರೋಡಕ್ಟ್ಸ್ ಬಳಸಿದವಳೇ. ಆದರೆ ಫಲಿತಾಂಶ ಮಾತ್ರ ಶೂನ್ಯ. ಇದನ್ನೇ‌ ಮತ್ತೊಂದು ಬಗೆಯಲ್ಲಿ‌ ಅಂದರೆ‌ ಎರಡು ಕೋಟಿ‌ ಜಾಹೀರಾತು ಏಕೆ ತಿರಸ್ಕರಿಸಿದೀರಿ? ಎಂದು ಸಂದರ್ಶನವೊಂದರಲ್ಲಿ‌ ನಿರೂಪಕಿ ಕೇಳಿದ್ದಳು.

ಕಾಸ್ಮೆಟಿಕ್ಸ್ ಕಂಪನಿಗಳ ವಂಚನೆ ತನ್ನ ತಂಗಿಯ ಮೂಲಕವೇ ಸಾಯಿ‌ ಪಲ್ಲವಿಗೆ ಮನದಟ್ಟಾಗಿತ್ತು. ಆಗ ಅವಳು ಕೊಟ್ಟ ಉತ್ತರ ಹೀಗಿತ್ತು ‘ಬ್ರಿಟಿಷರು ಬೆಳ್ಳಗೆ, ಆಫ್ರಿಕನ್ನರು ಕಪ್ಪಗೆ, ಭಾರತೀಯರು ಕಂದು. ಆಫ್ರಿಕಾದಲ್ಲಿ ನಾವು ಅಲ್ಲಿನ‌ ಕಪ್ಪನೆ ಯುವತಿಯರನ್ನೇ ಸುಂದರಿಯರು ಎನ್ನಬೇಕಾಗುತ್ತದೆ. ಮೈ ಬಣ್ಣ ಎನ್ನುವುದು ಬರೀ ಒಂದು ಭಾವನೆಯಷ್ಟೇ. ನನ್ನ ತಂಗಿಯೇ ಇದ್ದಳಲ್ಲ, ಮನೆಯಲ್ಲಿ. ನಾನು ಹಾಗಾಗಿ ಆ ಜಾಹೀರಾತನ್ನು ಒಪ್ಪಿಕೊಳ್ಳಲಿಲ್ಲ. ದುಡ್ಡಿಗಾಗಿ ನಾನೇಕೆ‌ ಜನರನ್ನು ವಂಚಿಸಲಿ?’ ಎಂದಿದ್ದಳು. ಇದು ಪ್ರಶ್ನೆಯೊಂದಕ್ಕೆ ಸಾಯಿ ಪಲ್ಲವಿಯ ಉತ್ತರವಾದರೂ ಕಪ್ಪು ಬಣ್ಣದ ಬಗ್ಗೆ ತಮಿಳರ‌ ಪ್ರೇಮವನ್ನು ಹೇಳುತ್ತದೆ. (ಪಾ.ರಂಜಿತ್ ನಿರ್ದೇಶನದ ಕಾಲಾ ಸಿನಿಮಾ ಆ ಬಗ್ಗೆ ಖಚಿತವಾಗಿ ಮಾತನಾಡುತ್ತದೆ. ಈ ಪಟ್ಟಿ ಬೆಳೆಸಿದರೆ ಇನ್ನು ಬೆಳೆಯುತ್ತದೆ. ಅದಿಲ್ಲಿ ಅನಗತ್ಯ).

ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿ ವಾಸಿಸುವ ‘ಬಡಗ’ ಎಂಬ ಬುಡಕಟ್ಟು ಜನಾಂಗದ ಹೆಣ್ಣುಮಗಳು ಈ ಸಾಯಿ ಪಲ್ಲವಿ. ಮೆಡಿಕಲ್ ಓದಿದರೂ (ಹಾರ್ಟ್ ಸ್ಪೇಶಲಿಸ್ಟ್) ಪ್ರಾಕ್ಟೀಸಿಗಾಗಿ ಹೆಸರು ನೋಂದಾಯಿಸಿಕೊಂಡಿಲ್ಲ. ತಮಿಳುನಾಡಿನ ಸುಮಾರು 400 ಹಳ್ಳಿಗಳಲ್ಲಿ ಕಂಡು ಬರುವ ಬಡಗ ಜನಾಂಗ ನಮ್ಮಲ್ಲಿ ಕಾಡು ಕುರುಬ, ಜೇನು ಕುರುಬರು ವಾಸಿಸುವಂತೆಯೇ ಕಾಡಿನ ಏರಿಳಿತಗಳ ನಡುವೆ ಹಟ್ಟಿಗಳಲ್ಲಿ ವಾಸಿಸುವವರು. ‘ಬಡಗ’ ಎಂದರೆ ತಮಿಳು ಜನಪದದಲ್ಲಿ ದಕ್ಷಿಣ ಎಂಬರ್ಥವೂ ಉಂಟು.

ನಟಿಯರಲ್ಲಿ ದ್ರಾವಿಡತನದ ಢಾಳ ಛಾಯೆ ನನಗೆ ಎದ್ದು ಕಂಡದ್ದು ‘ಪ್ರೇಮಂ‘ ಎಂಬ ಸಿನೇಮಾದ ಮೂಲಕ‌‌ ಮೋಡಿ ಮಾಡಿದ‌ ಈ ‘ಮಲರ್‘ ಮೂಲಕ. ವೃತ್ತಿಪರ ನೃತ್ಯಪಟುವಲ್ಲದಿದ್ದರೂ, ಈಕೆ ಅದರಲ್ಲೂ ಯಶಸ್ಸು ಸಾಧಿಸಿದಾಕೆ. ಡ್ಯಾನ್ಸ್ ಬರುತ್ತಿದ್ದ ಕಾರಣಕ್ಕೆ ಮಲಯಾಳಂನ ಎವರ್ ಗ್ರೀನ್ ಹಿಟ್ ಸಿನೆಮಾ ‘ಪ್ರೇಮಂ’ ಚಿತ್ರದಲ್ಲಿ ‘ಮಲರ್’ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅಲ್ಲಿಂದಾಚೆಗೆ ಸಾಯಿ ಪಲ್ಲವಿ‌ ಹೊರಳಿ ನೋಡುವ ಪ್ರಮೇಯಗಳೇ ಎದುರಾಗಲಿಲ್ಲ.

ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದರೂ ಆಕೆಯ ಸ್ಪಷ್ಟ ನಿಲುವು ಸಿನಿಮಾ ರಂಗದ ಬಹುತೇಕರಿಗೆ ಅಪಥ್ಯವೂ ಸಹ. ಅದೇನೂ ಅಂತಹ ಗುಟ್ಟೂ ಅಲ್ಲ. ಹಾಗಂತ ಹಲವು ಒತ್ತಡಗಳ ನಡುವೆಯೂ ಸಾಯಿ ಪಲ್ಲವಿ ಪುರುಷ‌ ಪ್ರೌಢಿಮೆಯ ಸಿನೇಮಾ ಇಂಡಸ್ಟ್ರಿಗಳಲ್ಲಿ ತನ್ನ ನಿಲುವಿಗೆ ಬದ್ಧವಾಗಿರೋದು ಹಲವು ಬಾರಿ ಸುದ್ದಿಯೂ ಆಗಿರುವುದು ಹಳೇ ಸಮಾಚಾರ.

ನನ್ನ ತಂಗಿ ಪೂಜಾಳ ಮೈ ಬಣ್ಣ ಕಪ್ಪು. ನನ್ನದು ಬಿಳಿ. ಅದೆಲ್ಲ ಇಲ್ಲಿ ಅನಗತ್ಯ. ಮೈ ಬಣ್ಣ ನನಗೆಂದು ವಿಶೇಷ, ಆಕರ್ಷಕವೆನಿಸಿಲ್ಲ, ಅನಿಸುವುದೂ ಇಲ್ಲ. ಆಫ್ರಿಕನ್ನರ ಮೈ ಬಣ್ಣ ಸಹಜವಾಗಿಯೇ ಕಪ್ಪು. ಕಪ್ಪು ಹುಡುಗಿಯರನ್ನೇ ಅವರು ಸುಂದರಿ ಎಂದು ಕರೆಯಬೇಕು. ಭಾರತದಲ್ಲೂ ಅಷ್ಟೇ’ ಮೇಲೆ ಉಲ್ಲೇಖಿಸಿರುವ ಸಂದರ್ಶನ ಇದೆಯಲ್ಲ, ಅದರಲ್ಲೇ ಮುಂದುವರೆದು ಎರಡನೇ ಬಾರಿ ಇದೇ ಉತ್ತರ ಪುನರುಚ್ಚರಿಸಿದ್ದಳು ಸಾಯಿ ಪಲ್ಲವಿ.

ಬಹುಭಾಷಾ ನಟಿ ಪಾರ್ವತಿ ಮೆನನ್ ಬಿಟ್ಟರೆ ಇಂತಹ ವಿಚಾರಗಳಲ್ಲಿ ತೀರಾ ಇತ್ತೀಚೆಗೆ ಹೀಗೆ ಪುರುಷತ್ವದ ಕಪಾಳಕ್ಕೆ ಹೊಡೆದಂತೆ ನೇರವಾಗಿ ಮಾತನಾಡಿದ್ದು ಸಾಯಿ‌ಪಲ್ಲವಿ ಮಾತ್ರ. ಹದಿ ವಯದ ಯುವಕರಂತೂ ಸಾಯಿ ಪಲ್ಲವಿಯ ತೆಲುಗಿನ ‘ಫಿದಾ‘ ಮಲಯಾಳಂನ ‘ಕಾಳಿ‘ ಹಾಗೂ ‘ಅಧಿರನ್‘ ಸಿನಿಮಾಗಳಲ್ಲಿ ಅವಳ ಮುಗ್ಧ, ಮೋಹಕ ನಟನೆಯನ್ನು ಎಂದೂ ಮರೆಯಲಾರರು. ಅದೆಲ್ಲದರಾಚೆಗೆ ಅವಳ ವೈಚಾರಿಕ ನಿಲುವನ್ನು ಸಹ. ಇಂತಹ ಸಾಯಿ ಪಲ್ಲವಿಗೆ ಇಂದು (   ಮೇ 9 ನಿನ್ನೆ ) ಜನ್ಮದಿನ. ಇಂತಹ ನಟಿಯರ ಸಂಖ್ಯೆ ದುಪ್ಪಟ್ಟಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಟ ಮನದೀಪ್‌ ರಾಯ್‌ ನಿಧನ

Published

on

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್‌ ರಾಯ್‌ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.

ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್‌ ರಾಯ್‌ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್‌ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Published

on

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವ್‌ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.

ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.

ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

Published

on

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.

ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.

ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980336243

Continue Reading

Trending