ದಿನದ ಸುದ್ದಿ
ಕೊರೋನಾ ರೋಗ ನಿರೋಧಕ ಶಕ್ತಿವರ್ಧನೆ ತಂತ್ರಗಳು

ಸುದ್ದಿದಿನ,ದಾವಣಗೆರೆ : ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ರೋಗನಿರೋಧಕ ಶಕ್ತಿವರ್ಧನೆ ಮತ್ತು ಸದೃಢ ಆರೋಗ್ಯಕ್ಕಾಗಿ ಆಯುರ್ವೇದ ಸಲಹಾ ಸೂಚಿಯಲ್ಲಿ ತಿಳಿಸಿರುವಂತೆ ಕೋವಿಡ್-19 ವೈರಸ್ ತಡೆಗಟ್ಟುವ ಹಂತ-ಎರಡು ತಂತ್ರವನ್ನು ಅನುಸರಿಸಲು ಸೂಚಿಸಲಾಗಿದೆ.
- ಹಾಟ್ ಸ್ಪಾಟ್ ಮತ್ತು ಬಫರ್ ಝೋನ್ ವಲಯದಲ್ಲಿ ವಾಸಿಸುವ ಜನರು.
- 60 ವರ್ಷಕ್ಕಿಂತ ಮೇಲ್ಪಟ್ಟ ಆರೋಗ್ಯವಂತ ವೃದ್ಧರು.
- ಬೇರೆ ಖಾಯಿಲೆಗಳಿಂದ ಬಳಲುತ್ತಿರುವ 50 ವರ್ಷಕ್ಕಿಂತ ಮೇಲ್ಪಟ್ಟವರು.
ಆಗಾಗ್ಗೆ ಉಸಿರಾಟದ ಕಾಯಿಲೆಯ ಇತಿಹಾಸ ಹೊಂದಿರುವ ಯಾವುದೇ ವಯಸ್ಸಿನ ಜನರು, ಸುತ್ತುವರಿದ ಗಾಳಿ ಕಲುಷಿತ ಪ್ರದೇಶದಲ್ಲಿ ವಾಸಿಸುವ ಜನರು ಮತ್ತುಧೂಮಪಾನಿಗಳು (ಸಕ್ರಿಯ ಮತ್ತು ನಿಷ್ಕ್ರಿಯ) ಆರೋಗ್ಯ ಸೇವೆ ಕಾರ್ಯಕರ್ತರು ಈ ಮೇಲ್ಕಂಡ ವರ್ಗದವರು ಈ ಕೆಳಕಂಡ ಕಾರ್ಯತಂತ್ರಗಳನ್ನು ಅನುಸರಿಸಿ ರೋಗನಿರೋಧಕ ಶಕ್ತಿಯನ್ನು ವರ್ಧಿಸಿಕೊಂಡು ಸದೃಢ ಆರೋಗ್ಯವನ್ನು ಉತ್ತೇಜಿಸಿಕೊಳ್ಳಬಹುದಾಗಿರುತ್ತದೆ.
ನಿರೋಧಕ ಕಾರ್ಯತಂತ್ರ – 2ನೇ ಹಂತ
ಗುರಿ
- ಉತ್ತಮ ಹಸಿವು, ಉತ್ತಮ ನಿದ್ರೆ, ಮಾನಸಿಕ ಶಾಂತಿಯನ್ನು ಕಾಪಾಡಲು ಮತ್ತು ಪೋಷಕಾಂಶವುಳ್ಳ ಆಹಾರವನ್ನು ಒದಗಿಸುವುದರ ಜೊತೆಗೆ ಅಲ್ಪ ಪ್ರಮಾಣದ ಔಷಧಿಯೊಂದಿಗೆ ರೋಗ ನಿರೋಧಕ ಶಕ್ತಿಯನ್ನು ವರ್ಧಿಸುವುದು.
- ಆರೋಗ್ಯವಂತ ವೃದ್ಧರು, ಬೇರೆ ಖಾಯಿಲೆಗಳಿಂದ ಬಳಲುತ್ತಿರುವ 50 ವರ್ಷಕ್ಕಿಂತ ಮೇಲ್ಪಟ್ಟವರು ಆರೋಗ್ಯ ಸೇವೆ ಕಾರ್ಯಕರ್ತರು, ಆಗಾಗ್ಗೆ ಉಸಿರಾಟದ ಕಾಯಿಲೆಯ ಇತಿಹಾಸ ಹೊಂದಿರುವ ಯಾವುದೇ ವಯಸ್ಸಿನ ಜನರು, ಸುತ್ತುವರಿದ ಗಾಳಿ ಕಲುಷಿತ ಪ್ರದೇಶದಲ್ಲಿ ವಾಸಿಸುವ ಜನರು ಮತ್ತು ಧೂಮಪಾನಿಗಳು(ಸಕ್ರಿಯ ಮತ್ತು ನಿಷ್ಕ್ರಿಯ), ಆಯುರ್ವೇದದಿಂದ ತಡೆಗಟ್ಟುವ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಸಿದ್ಧರಿರುವವರು.
ಕಾರ್ಯತಂತ್ರಗಳು
- ಬೇಗನೆ ಮಲಗುವುದು, ಬೇಗನೆ ಏಳುವುದು.
- ಹಲ್ಲುಜ್ಜಿದ ನಂತರ, 2 ಹನಿ ಅಣುತೈಲ ಅಥವಾ ಎಳ್ಳೆಣ್ಣೆಯನ್ನು ಮೂಗಿನ ಎರಡು ಹೊಳ್ಳೆಗಳಲ್ಲಿ ಹಾಕುವುದು (ಪ್ರತಿಮರ್ಷ ನಸ್ಯ)
- ತದನಂತರ 50 ಮಿಲೀ ತ್ರಿಫಲಾ ಕಷಾಯವನ್ನು (ನೆಲ್ಲಿಕಾಯಿ, ಅಳಲೆಕಾಯಿ, ತಾರೆಕಾಯಿ) 3-5 ನಿಮಿಷಗಳ ಕಾಲ ಮೌಖಿಕ ಕುಳಿಯಲ್ಲಿ (ಬಾಯಿಯಲ್ಲಿ) ಒಂದು ಚಿಟಿಕೆ ಟಂಕಣ ಭಸ್ಮ (ಶುದ್ಧೀಕರಿಸಿದ ಬೋರಕ್ಸ್) ದೊಂದಿಗೆ ಹಿಡಿದಿಟ್ಟುಕೊಳ್ಳುವುದು ಅಥವಾ 1 ಟೇಬಲ್ ಸ್ಪೂನ್ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು 3-5 ನಿಮಿಷಗಳ ಕಾಲ ಬಾಯಲ್ಲಿ ತಿರುಗಾಡಿಸಿ ಉಗಳಬೇಕು ನಂತರ ಬಿಸಿ ನೀರಿನಿಂದ ಬಾಯಿ ಮುಕ್ಕಳಿಸುವುದು ಇದನ್ನು ದಿನಕ್ಕೆ ಎರಡು ಬಾರಿ ಮಾಡುವುದು.
- ಪುದೀನ ಎಲೆಗಳು ಹಾಗೂ ಅಜವಾಯನದೊಂದಿಗೆ ಕುದಿಸಿದ ನೀರಿನಿಂದ ಹಬೆ ತೆಗೆದುಕೊಳ್ಳುವುದು.
- ಮೂವತ್ತು ನಿಮಿಷಗಳ ಕಾಲ ದೇಹ ಸಡಿಲಗೊಳಿಸುವ ವ್ಯಾಯಾಮ, ಸೂರ್ಯ ನಮಸ್ಕಾರ (6 ಸುತ್ತು) ಯಾವುದಾದರೂ ನಾಲ್ಕು ಆಸನಗಳು, ಪ್ರಾಣಾಯಾಮ ಮತ್ತು ಧ್ಯಾನ.
- 4 ತುಳಸಿ ಎಲೆಗಳು, ನಿಂಬೆರಸ, ಒಣ ದ್ರಾಕ್ಷಿಯೊಂದಿಗೆ ಈ ಕೆಳಗೆ ಹೇಳಿರುವ ಯಾವುದಾದರೊಂದು ಮೂಲಿಕೆಯನ್ನು ಅರ್ಧ ಗ್ರಾಂ ನಂತೆ ಸೇರಿಸಿ(ಪ್ರತಿದಿನ ಒಂದು ಮೂಲಿಕೆ) ಗಿಡಮೂಲಿಕೆ ಚಹಾವನ್ನು ತಯಾರಿಸಿ ದಿನಕ್ಕೆ ಒಂದರಿಂದ ಎರಡು ಭಾರಿ ಸೇವಿಸುವುದು.
1) ದಾಲ್ಚಿನಿ
2) ಕರಿಮೆಣಸು
3) ಶುಂಠಿ - ಅರಿಶಿನ, ಜೀರಿಗೆ, ಕೊತ್ತಂಬರಿ ಹಾಗೂ ಬೆಳ್ಳುಳ್ಳಿಯನ್ನು ದಿನನಿತ್ಯದ ಅಡಿಗೆಯಲ್ಲಿ ಉಪಯೋಗಿಸುವುದು.
- ಒಂದು ಲೀಟರ್ ಕುದಿಯುವ ನೀರಿಗೆ 8 ತುಳಸಿ ಎಲೆಗಳು ಅಥವಾ ಶುಂಠಿ, ಲಾವಂಚ ಸೇರಿಸಿ 2-3 ನಿಮಿಷಗಳ ಕಾಲ ಮತ್ತೆ ಕುದಿಸಿ ಸೋಸಿ ಕುಡಿಯುವುದು.
- ಪ್ರತಿದಿನ ಸಂಜೆ 10 ಗ್ರಾಂ ಅಮೃತಬಳ್ಳಿ ಕಾಂಡ ಅಥವಾ ಷಡಂಗ ಪಾನೀಯ ಕಷಾಯ ಚೂರ್ಣವನ್ನು 640 ಮಿ.ಲೀ. ನೀರಿಗೆ ಸೇರಿಸಿ 320 ಮಿ.ಲೀ. ಆಗುವವರೆಗು ಕುದಿಸಿ ಸೋಸಿ ತಯಾರಿಸಿದ ಅಮೃತಬಳ್ಳಿ ಪಾನೀಯ ಅಥವಾ ಷಡಂಗ ಪಾನೀಯವನ್ನು ಕುಡಿಯುವುದು.
- ಸಂಶಮನಿವಟಿ, 2 ಮಾತ್ರೆಗಳು, ದಿನಕ್ಕೆ ಎರಡು ಬಾರಿ, ಊಟದ ನಂತರ, 15 ದಿವಸಗಳ ಕಾಲ.
- 2 ಟೀ ಚಮಚ ಅಗಸ್ತ್ಯ ರಸಾಯನವನ್ನು ಬಿಸಿ ನೀರಿನೊಂದಿಗೆ ಸೇವಿಸುವುದು.
- ಒಂದು ಲೋಟ ಕುದಿಯುವ ಹಾಲಿಗೆ 1/3 ಟೀ ಚಮಚ ಅರಿಶಿನ ಪುಡಿ, 1/3 ಟೀ ಚಮಚ ಅಶ್ವಗಂಧ ಚೂರ್ಣವನ್ನು ಸೇರಿಸಿ, ನಂತರ ಹಾಲನ್ನು 2 ನಿಮಿಷ ಕುದಿಸಿ, ಸೋಸಿ ತಯಾರಿಸಿದ ಗೋಲ್ಡನ್ ಮಿಲ್ಕ್ನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಸೇವಿಸುವುದು.
ನಿಗದಿಪಡಿಸಿದ ಸಮಯ ವೈದ್ಯರ ಹೆಸರು ಮತ್ತು ತಜ್ಞತೆ ಮೊಬೈಲ್ ಸಂಖ್ಯೆ,ಆಯುರ್ವೇದ ವೈದ್ಯಾಧಿಕಾರಿಗಳು
- ಬೆಳಗ್ಗೆ 08:00 ರಿಂದ ಮಧ್ಯಾಹ್ನ 12:00
- ಡಾ|| ಶಾಂತ ಮೂರ್ತಿ.ಎ. ಬಿ.ಎ.ಎಂ.ಎಸ್. 9448346798
- ಡಾ|| ಮಲ್ಲಿಕಾರ್ಜುನ.ಬಿ.ಎಸ್. ಬಿ.ಎ.ಎಂ.ಎಸ್. 9448415175
- ಡಾ|| ಕಿಶೋರಿ.ಕೆ.ಎಸ್. ಬಿ.ಎ.ಎಂ.ಎಸ್. 8197719498
- ಡಾ|| ಅನುರಾಧ.ಎಸ್.ಎಸ್. ಬಿ.ಎ.ಎಂ.ಎಸ್. 9986743079
- ಡಾ|| ಸಯ್ಯುದ್ ಶಂಷುದ್ದೀನ್. ಬಿ.ಎ.ಎಂ.ಎಸ್. 9448567574
- ಡಾ|| ಸುಧಾ.ಹೆಚ್.ಎಂ. ಬಿ.ಎ.ಎಂ.ಎಸ್., ಎಂ.ಎಸ್. (ಶಲ್ಯತಂತ್ರ). 9880132397
- ಡಾ|| ಸಿದ್ದೇಶ್.ಈ.ಬಿಸನಳ್ಳಿ. ಬಿ.ಎ.ಎಂ.ಎಸ್. 9663666426
- ಮಧ್ಯಾಹ್ನ 12:00 ರಿಂದ ಸಂಜೆ 04:00
- ಡಾ|| ರೇವ್ಯಾ ನಾಯ್ಕ.ಟಿ. ಬಿ.ಎ.ಎಂ.ಎಸ್. 9886145132
- ಡಾ|| ಸುಚಿತ್ರಾ.ಎಸ್.ಎಸ್. ಬಿ.ಎ.ಎಂ.ಎಸ್., ಎಂ.ಡಿ. (ಕಾಯಚಿಕಿತ್ಸ). 9844428797
- ಡಾ|| ಸುರೇಶ್.ಎಂ.ಸಿ. ಬಿ.ಎ.ಎಂ.ಎಸ್. 9448423933
- ಡಾ|| ಸದಾಶಿವ.ಕೆ. ಬಿ.ಎ.ಎಂ.ಎಸ್. 9902183131
- ಡಾ|| ಶಾಲಿನಿ.ಡಿ. ಬಿ.ಎ.ಎಂ.ಎಸ್. 8762294359
- ಡಾ|| ದ್ಯಾವನ್ ಗೌಡ.ಬಿ.ಹೆಚ್. ಬಿ.ಎ.ಎಂ.ಎಸ್. 9448534506
- ಸಂಜೆ 04:00 ರಿಂದ ರಾತ್ರಿ 08:00
- ಡಾ|| ಚಂದ್ರಕಾಂತ್.ಎಸ್.ನಾಗಸಮುದ್ರ. ಬಿ.ಎ.ಎಂ.ಎಸ್. 9449361108
- ಡಾ|| ಪ್ರೀತಿ.ಡಿ.ಎಸ್. ಬಿ.ಎ.ಎಂ.ಎಸ್. 9731155440
- ಡಾ|| ಲಿಂಗರಾಜೇಂದ್ರ.ಎನ್.ಕೆ. ಬಿ.ಎ.ಎಂ.ಎಸ್. 9448414906
- ಡಾ|| ಶಿಲ್ಪ.ಎಸ್.ಟಿ. ಬಿ.ಎ.ಎಂ.ಎಸ್. 9986081977
ಹೆಚ್ಚಿನ ಮಾಹಿತಿಗಾಗಿ ಈ ಮೇಲ್ಕಂಡ ಆಯುರ್ವೇದ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

-
ನಿತ್ಯ ಭವಿಷ್ಯ6 days ago
ಸೋಮವಾರ- ರಾಶಿ ಭವಿಷ್ಯ ಜನವರಿ-23,2023 : ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ
-
ದಿನದ ಸುದ್ದಿ4 days ago
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ
-
ದಿನದ ಸುದ್ದಿ11 hours ago
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ10 hours ago
ನಟ ಮನದೀಪ್ ರಾಯ್ ನಿಧನ