ದಿನದ ಸುದ್ದಿ
ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನ | ಬೆಳಗಾವಿ ಮನೆಯಲ್ಲಿ ನೀರವ ಮೌನ ; ಗಣ್ಯರ ಸಂತಾಪ

ಸುದ್ದಿದಿನ, ದೆಹಲಿ : ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ (65) ಸಾವನ್ನಪ್ಪಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಸುರೇಶ್ ಅಂಗಡಿ ಪ್ರತಿನಿಧಿಸುತ್ತಿದ್ದರು. ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿಯ ಪ್ರಬಲ ಮುಖಂಡರಾಗಿದ್ದರು.
ಸಂಸದರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೆಳಗಾವಿಯ ಅವರ ಕುಟುಂಬಸ್ಥರ ಅತೀವ ಆಘಾತಕ್ಕೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಅಂಗಡಿಯವರಿಗೆ ಸಂತಾಪ ಸೂಚಿಸುತ್ತಾ, ದೇಶದ ಗಣ್ಯರು ಕುಟುಂಬದವರಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಂತ್ವನ ಹೇಳಿದ್ದಾರೆ.

ಕೇಂದ್ರ ರೈಲ್ವೆ ರಾಜ್ಯ ಸಚಿವ ಶ್ರೀ ಸುರೇಶ್ ಅಂಗಡಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ….
Posted by Chief Minister of Karnataka on Wednesday, September 23, 2020
Shri Suresh Angadi was an exceptional Karyakarta, who worked hard to make the Party strong in Karnataka. He was a dedicated MP and effective Minister, admired across the spectrum. His demise is saddening. My thoughts are with his family and friends in this sad hour. Om Shanti. pic.twitter.com/2QDHQe0Pmj
— Narendra Modi (@narendramodi) September 23, 2020
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಸಾವು ಆಘಾತಕಾರಿಯಾದುದು. ಸ್ನೇಹಜೀವಿಯಾಗಿದ್ದ ಸುರೇಶ್ ಅಂಗಡಿ ರಾಜ್ಯದ ಅಭಿವೃದ್ದಿ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದರು. ಅವರ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು,
ಅವರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. pic.twitter.com/Q4VQWBoKxp— Siddaramaiah (@siddaramaiah) September 23, 2020
Demise of Shri Suresh Angadi , Union Minister of State for Railways is shocking news. India has lost a popular leader, who always responded to problems of people . A gentleman, simple and humble . May Almighty grant his soul eternal peace .. Om Shanti.
— Shankar M Bidari (@ShankarMBidari1) September 23, 2020
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ವ್ಯಾಪಕ ಮಳೆ; ತುರ್ತು ಪರಿಹಾರಕ್ಕೆ 200 ಕೋಟಿ ರೂಪಾಯಿ ಬಿಡುಗಡೆ

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraja Bommai) ಶನಿವಾರ ರಾಜ್ಯದ ( Karnataka ) ವಿವಿಧ ಜಿಲ್ಲೆಗಳಲ್ಲಿನ ಮಳೆ ಪರಿಸ್ಥಿತಿ ಕುರಿತು ( Havy Rain ) ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ( Vedio Conferences ) ನಡೆಸಿದರು.
ಮಳೆ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿ ಪ್ರವಾಹ ಪರಿಹಾರ ಕಾರ್ಯಗಳಿಗಾಗಿ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ 21 ಜಿಲ್ಲೆಗಳಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ.
ಬಳ್ಳಾರಿ, ಧಾರವಾಡ, ಚಿತ್ರದುರ್ಗ, ಗದಗ, ಚಾಮರಾಜನಗರ, ಕೋಲಾರ, ಹಾವೇರಿ, ವಿಜಯನಗರ ಹಾಗೂ ಕೋಲಾರ ಜಿಲ್ಲೆಗಳಿಗೆ ತಲಾ 5 ಕೋಟಿ ರೂಪಾಯಿ, ಚಿಕ್ಕಮಗಳೂರು, ಕೊಪ್ಪಳ, ಚಿಕ್ಕಬಳ್ಳಾಪುರ, ಮಂಡ್ಯ, ರಾಯಚೂರು, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ 10 ಕೋಟಿ ರೂಪಾಯಿ ಹಾಗೂ ದಾವಣಗೆರೆ, ಹಾಸನ, ಉಡುಪಿ, ಮೈಸೂರು ಜಿಲ್ಲೆಗಳಿಗೆ ತಲಾ 15 ಕೋಟಿ ರೂಪಾಯಿ, ದಕ್ಷಿಣ ಕನ್ನಡ ಜಿಲ್ಲೆಗೆ 20 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಹಣ ಬಳಕೆಯಲ್ಲಿ ಯಾವುದೇ ಲೋಪವಾದಲ್ಲಿ ಆಯಾ ಜಿಲ್ಲಾಧಿಕಾರಿಯನ್ನು ನೇರವಾಗಿ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೇರಳದ ವೈನಾಡು ಸೇರಿದಂತೆ ಕಬಿನಿ ನದಿ ಪಾತ್ರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಪಿಲಾ ನದಿ ತುಂಬಿ ಹರಿಯುತ್ತಿದೆ ಮಳೆಯಿಂದಾಗಿ ಕಬಿನಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಸುಮಾರು 30 ರಿಂದ 35 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಹಣದುಬ್ಬರ, ಕೋವಿಡ್ ನಿಭಾಯಿಸುವ ಭಾರತೀಯ ಮಾದರಿಗೆ ವಿಶ್ವದ ಆರ್ಥಿಕ ತಜ್ಞರ ಪ್ರಶಂಸೆ: ಗೃಹ ಸಚಿವ ಅಮಿತ್ ಶಾ

ಸುದ್ದಿದಿನ ಡೆಸ್ಕ್ : ಆರ್ಥಿಕ ಪುನಶ್ಚೇತನಕ್ಕೆ ಪ್ರಧಾನಿ ನರೇಂದ್ರ ಮೋದಿ ( Narendra Modi ) ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಪರಿಣಾಮಕಾರಿ ಕ್ರಮಗಳಿಂದಾಗಿ ಆರ್ಥಿಕ ಅಭಿವೃದ್ಧಿ ದರದಲ್ಲಿ ( GDP) ಭಾರತ ಜಾಗತಿಕವಾಗಿ ಮುಂಚೂಣಿಯಲ್ಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ( Amit Shah) ಹೇಳಿದ್ದಾರೆ.
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ( Banglore) ನಿನ್ನೆ ನಡೆದ ’ಸಂಕಲ್ಪದಿಂದ ಸಿದ್ಧಿ’ ( Sankalp Se Siddhi )
ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ಪ್ರಸ್ತುತ ಭಾರತದ ಅಭಿವೃದ್ಧಿ ದರ ಶೇಕಡ 7.4ರಷ್ಟಿದ್ದು, ಚೀನಾ ಶೇಕಡ 3.3ಮತ್ತು ಬ್ರೆಜಿಲ್ ಶೇಕಡ 1.7ರಷ್ಟು ಅಭಿವೃದ್ಧಿ ದರ ಹೊಂದಿವೆ ಎಂದು ತಿಳಿಸಿದರು.
ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾನವೀಯ ಮುಖವಿರುವ ಆರ್ಥಿಕತೆಯನ್ನು ಪರಿಚಯಿಸಿದ್ದು, ಸಮಾಜದ ಕಟ್ಟಕಡೆಯ ಜನರ ಏಳಿಗೆಗೆ ಹಲವಾರು ಕಲ್ಯಾಣ ಕ್ರಮಗಳನ್ನು ಕೈಗೊಂಡಿದ್ದಾರೆ. ಕೇಂದ್ರ ಸರ್ಕಾರದಿಂದ ಬಡವರಿಗೆ ಮನೆ, ಶೌಚಾಲಯ, ವಿದ್ಯುತ್, ಆರೋಗ್ಯ ವಿಮೆ, ನೀರಿನ ಸಂಪರ್ಕ ಮತ್ತು ಉಚಿತ ಪಡಿತರವನ್ನು ಒದಗಿಸುವ ಪ್ರಯತ್ನಗಳು ಮುಂದುವರೆದಿವೆ ಎಂದು ಅಮಿತ್ ಶಾ ತಿಳಿಸಿದರು.

ಕೋವಿಡ್ ಮತ್ತು ಹಣದುಬ್ಬರವನ್ನು ನಿಭಾಯಿಸುವ ಭಾರತೀಯ ಮಾದರಿಯನ್ನು ವಿಶ್ವದಾದ್ಯಂತ ಅರ್ಥಶಾಸ್ತ್ರಜ್ಞರು ಪ್ರಶಂಸೆ ಮಾಡಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು.
ಇದನ್ನೂ ಓದಿ | ಆಕಾಶವಾಣಿ, ಎಫ್ಎಂ, ದೂರದರ್ಶನ ಚಾನಲ್ಗಳಿಗೆ ಅತಿ ಹೆಚ್ಚು ಜನ ಮನ್ನಣೆ: ಕೇಂದ್ರ ವಾರ್ತಾ ಸಚಿವ ಅನುರಾಗ್ ಸಿಂಗ್ ಠಾಕೂರ್
ಇತರ ದೇಶಗಳು ಉದ್ಯಮಗಳಿಗೆ ಬೇಡಿಕೆಯನ್ನು ಹೆಚ್ಚಿಸುವ ಮತ್ತು ಪ್ಯಾಕೇಜ್ಗಳನ್ನು ಘೋಷಿಸುವತ್ತ ಗಮನಹರಿಸಿದಾಗ, ಪ್ರಧಾನಮಂತ್ರಿಗಳು ಪರಿಹಾರವನ್ನು ಹುಡುಕುವತ್ತ ಗಮನಹರಿಸಿದರು ಮತ್ತು ಲಸಿಕೆಯನ್ನು ಕಂಡುಹಿಡಿಯಲು ವಿಜ್ಞಾನಿಗಳನ್ನು ಪ್ರೋತ್ಸಾಹಿಸಿದರು ಎಂದು ಸಚಿವ ಅಮಿತ್ ಶಾ ತಿಳಿಸಿದರು.
ದೇಶದಲ್ಲಿ ವಿಶ್ವದ ಅತಿದೊಡ್ಡ ಲಸಿಕೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದ್ದು, ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ್ ಭಾರತ್ ಅಭಿಯಾನಗಳ ಮೂಲಕ ಸ್ವದೇಶಿ ಸ್ವಾವಲಂಬನೆಗೆ ಒತ್ತು ನೀಡಲಾಗಿದೆ ಎಂದು ಅಮಿತ್ ಶಾ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಕಾಶವಾಣಿ, ಎಫ್ಎಂ, ದೂರದರ್ಶನ ಚಾನಲ್ಗಳಿಗೆ ಅತಿ ಹೆಚ್ಚು ಜನ ಮನ್ನಣೆ: ಕೇಂದ್ರ ವಾರ್ತಾ ಸಚಿವ ಅನುರಾಗ್ ಸಿಂಗ್ ಠಾಕೂರ್

ಸುದ್ದಿದಿನ ಡೆಸ್ಕ್ : ಆಕಾಶವಾಣಿ (AIR) ಮತ್ತು ಆಕಾಶವಾಣಿಯ ಎಫ್ಎಂ ಚಾನಲ್ಗಳನ್ನು ( FM Channel) ಅತಿ ಹೆಚ್ಚು ಶ್ರೋತೃಗಳು ಆಲಿಸುತ್ತಿದ್ದಾರೆ.
ಖಾಸಗಿ ಎಫ್ಎಂ ಚಾನಲ್ಗಳಿಗೆ ಹೋಲಿಸಿದರೆ ಆಕಾಶವಾಣಿಯ ಎಫ್ಎಂ ಚಾನಲ್ ಅತಿ ಹೆಚ್ಚು ಜನಪ್ರಿಯವಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ( Anurag Singh thakur ) ತಿಳಿಸಿದ್ದಾರೆ.
ರಾಜ್ಯಸಭೆಗೆ ಲಿಖಿತ ಉತ್ತರ ಮೂಲಕ ಮಾಹಿತಿ ನೀಡಿದ ಸಚಿವರು, ಭಾಷೆ, ಸಂಸ್ಕೃತಿ, ಪ್ರಾದೇಶಿಕತೆ, ಸ್ಥಳೀಯ ಮಾಹಿತಿ, ಸಂಪ್ರದಾಯಗಳಿಗೆ ಒತ್ತು ನೀಡುವ ಮೂಲಕ ಆಕಾಶವಾಣಿ ಜನರ ಮನದಲ್ಲಿ ಸ್ಥಾನ ಪಡೆದಿದೆ. ನಿರಂತರವಾಗಿ ಉತ್ತರ ಮಾಹಿತಿಯನ್ನು ನೀಡುವ ಮೂಲಕ ಶ್ರೋತೃಗಳಿಗೆ ಹತ್ತಿರವಾಗಿದೆ ಎಂದು ತಿಳಿಸಿದರು.

ಇದಲ್ಲದೇ ದೂರದರ್ಶನದ ಚಾನಲ್ಗಳು ಕೂಡ ಕಳೆದ ಕೆಲವು ವರ್ಷಗಳಿಂದ ಬಾರ್ಕ್ ರೇಟಿಂಗ್ ಪಟ್ಟಿಯಲ್ಲಿ ಮುಂಚೂಣಿ ಸ್ಥಾನ ಪಡೆದುಕೊಂಡಿದೆ. ದೂರದರ್ಶನ ಎಂದಿಗೂ ಗುಣಮಟ್ಟದ ಹಾಗೂ ಖಚಿತ ಮಾಹಿತಿ ನೀಡುವ ಮೂಲಕ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಇದರ ಜಾಲ ಕೂಡ ಇಡೀ ದೇಶಾದ್ಯಂತ ಹರಡಿದೆ. ಅತ್ಯಾಧುನಿಕ ಗುಣಮಟ್ಟ ನೀಡಲು ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿವೆ ಎಂದು ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.
ಆನ್ಲೈನ್ ಬೆಟ್ಟಿಂಗ್ಗಳ ಕುರಿತ ಜಾಹಿರಾತುಗಳನ್ನು ಪ್ರಸಾರ ಮಾಡಬಾರದೆಂದು ಮುದ್ರಣ, ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸಲಹೆ ನೀಡಿದೆ.
2019ರ ಗ್ರಾಹಕ ಸುರಕ್ಷಾ ಕಾಯ್ದೆ, 1995ರ ಕೇಬಲ್ ಮತ್ತು ಟೆಲಿವಿಷನ್ ಜಾಲ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ಪತ್ರಿಕಾ ಮಂಡಳಿ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಆನ್ಲೈನ್ ಬೆಟ್ಟಿಂಗ್ ಪ್ಲಾಟ್ಫಾರಂ ಕುರಿತ ಜಾಹಿರಾತುಗಳನ್ನು ಪ್ರಕಟಿಸಬಾರದು ಎಂದು ಮಾಧ್ಯಮಗಳಿಗೆ ಸೂಚನೆ ನೀಡಿರುವುದಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಜನರಿಗೆ ತಪ್ಪು ಮಾಹಿತಿ ನೀಡುವ ಅಥವಾ ದಿಕ್ಕು ತಪ್ಪಿಸುವ ಆನ್ಲೈನ್ ಬೆಟ್ಟಿಂಗ್ ಜಾಹಿರಾತುಗಳನ್ನು ಪ್ರಕಟಿಸುವಂತಿಲ್ಲ ಎಂದು ಅವರು ಮೇಲ್ಮನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ಮಳೆ ಅವಾಂತರ | ನವಿಲೇಹಾಳಿನಲ್ಲಿ ನಾಲ್ಕು ಮನೆಗಳು ನೆಲಸಮ
-
ಕ್ರೀಡೆ6 days ago
ಕಾಮನ್ ವೆಲ್ತ್ ಕ್ರೀಡಾಕೂಟ ; ಪುರುಷರ 73 ಕೆ.ಜಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಅಚಿಂತಾ ಶೆಯಿಲಿಗೆ ಸ್ವರ್ಣ ಪದಕ
-
ನಿತ್ಯ ಭವಿಷ್ಯ7 days ago
ಸೋಮವಾರ ರಾಶಿ ಭವಿಷ್ಯ-ಆಗಸ್ಟ್-1,2022 : ಈ ರಾಶಿಯವರಿಗೆ ತುಂಬಾ ಇಷ್ಟಪಟ್ಟವರು ನಿಲುಕದ ನಕ್ಷತ್ರ!
-
ದಿನದ ಸುದ್ದಿ6 days ago
ಹರಿಯಾಣದ ಚಾಂಡಿಮಂದಿರದಲ್ಲಿ ಇಂದಿನಿಂದ ಇದೇ 20ರವರೆಗೆ ಭಾರತ – ವಿಯೆಟ್ನಾಂ ಸೇನಾ ಸಮರಾಭ್ಯಾಸ
-
ದಿನದ ಸುದ್ದಿ6 days ago
ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ; ಮೇಲ್ವಿಚಾರಣೆಗೆ ಕಾರ್ಯಪಡೆ ರಚನೆ
-
ಕ್ರೀಡೆ6 days ago
ಸೇಂಟ್ ಕಿಟ್ಸ್ ನಲ್ಲಿಂದು ಭಾರತ – ವೆಸ್ಟ್ ಇಂಡೀಸ್ ನಡುವಣ 2ನೇ ಟಿ-20 ಕ್ರಿಕೆಟ್ ಪಂದ್ಯ
-
ದಿನದ ಸುದ್ದಿ6 days ago
ಕೋಲಾರ ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಇಂದು ಸಂಜೆ ಪ್ರತಿಭಟನೆ
-
ದಿನದ ಸುದ್ದಿ6 days ago
ಮಂಕಿಪಾಕ್ಸ್ ಕುರಿತಂತೆ ನಾಳೆ ಮಹತ್ವದ ಸಭೆ : ಸಿ.ಎಂ ಬಸವರಾಜ್ ಬೊಮ್ಮಾಯಿ