ದಿನದ ಸುದ್ದಿ
ದಾವಣಗೆರೆ | ವಿಕಲಚೇತನರಿಗೆ ಕೋವಿಡ್ 19 ಲಸಿಕೆ

ಸುದ್ದಿದಿನ,ದಾವಣಗೆರೆ : ಕೋವಿಡ್ 19 ಕೊರೊನಾ ವೈರಸ್ ಸೋಂಕು ವೇಗವಾಗಿ ಹರಡುತ್ತಿರುವ ಕಾರಣ ದಾವಣಗೆರೆ ನಗರದ 18 ರಿಂದ 45 ವರ್ಷ ಮತ್ತು 45 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ (ಮಾನಸಿಕ ಅಸ್ವಸ್ಥರನ್ನು ಒಳಗೊಂಡಂತೆ) ಕೋವಿಡ್ 19 ಲಸಿಕೆಯನ್ನು ಪಡೆಯಲು ಚಿಗಟೇರಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಮಕ್ಕಳ ಆಸ್ಪತ್ರೆಯಲ್ಲಿ ಪ್ರತಿದಿನ 100 ಜನರಿಗೆ (ವಿಕಲಚೇತನರು & ಆರೈಕೆದಾರರು) ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆವರೆಗೆ ಲಸಿಕೆ ನೀಡಲಾಗುತ್ತಿದೆ.
ವಿಕಲಚೇತನರು ಸರತಿ ಸಾಲಿನಲ್ಲಿ ನಿಲ್ಲದಂತೆ ನೇರವಾಗಿ ಆದ್ಯತೆ ಮೇರೆಗೆ ನೇರವಾಗಿ ಲಸಿಕೆ ನೀಡಲಾಗುವುದು. ವೀಲ್ಚೇರ್ & ಮೂಲಭೂತ ವ್ಯವಸ್ಥೆ ಕಲ್ಪಿಸಲಾಗಿದೆ. ದಾವಣಗೆರೆ ನಗರದ ವಿಕಲಚೇತನರು ಈ ಆಸ್ಪತ್ರೆಗೆ ಬರುವಾಗ ಕಡ್ಡಾಯವಾಗಿ ಆಧಾರ ಕಾರ್ಡ್ ಮತ್ತು ವಿಕಲಚೇತನರ ಗುರುತಿನ ಚೀಟಿ ಅಥವಾ ಯು.ಡಿ.ಐ.ಡಿ. ಕಾರ್ಡ್ ದಾಖಲೆಗಳನ್ನು ತೆಗೆದುಕೊಂಡು ಬರತಕ್ಕದ್ದು.
ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆಯನ್ನು ಪಡೆಯಲು ಸಾಧ್ಯವಾಗದವರು (ಬೆಡ್ರಿಡನ್) ವಾಹನದ ಸೌಲಭ್ಯಕ್ಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆ ದಾವಣಗೆರೆ ದೂ.ಸಂ: 08192-263936 ಅಥವಾ ವಿಕಲಚೇತನರ ಸಲಹಾ ಕೇಂದ್ರ ದೂ.ಸಂ: 08192-263939 ಗೆ ಕರೆ ಮಾಡಿ ವಿಳಾಸ, ಮೊಬೈಲ್ ಸಂಖ್ಯೆ & ಇತರೆ ಮಾಹಿತಿ ನೀಡಿ ನೋಂದಣಿ ಮಾಡಿಕೊಳ್ಳಬಹುದೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಜಿ.ಎಸ್.ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಈಗ ಇ-ರೈಲಿನ ಕನಸು ಸಹ ನನಸಾಗಲಿದೆ..!

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಇ-ಬೈಕ್, ಇ-ಕಾರ್ ಮತ್ತು ಇ-ಬಸ್ ನಂತರ, ಈಗ ಇ-ರೈಲಿನ ಕನಸು ಸಹ ನನಸಾಗಲಿದೆ. ಪಶ್ಚಿಮ ಮಧ್ಯ ರೈಲ್ವೆಯು ನವದೂತ್ ಎಂಬ ಬ್ಯಾಟರಿ ಚಾಲಿತ ಡ್ಯುಯಲ್ ಮೋಡ್ ಲೋಕೋಮೋಟಿವ್ ಅನ್ನು ಅಭಿವೃದ್ಧಿಪಡಿಸಿದೆ.
ಈ ಎಂಜಿನ್ ಎರಡೂ ಮೋಡ್ ಗಳಲ್ಲಿ ಅಂದರೆ ಬ್ಯಾಟರಿ ಮತ್ತು ವಿದ್ಯುಚ್ಛಕ್ತಿಯಲ್ಲಿ ಚಲಿಸುತ್ತದೆ. ಪ್ರಸ್ತುತ, ಇದನ್ನು ಪ್ರಾಯೋಗಿಕ ಆಧಾರದ ಮೇಲೆ ಜಬಲ್ಪುರ, ಮುದ್ವಾರ ಮತ್ತು ಇತರ ನಿಲ್ದಾಣಗಳಲ್ಲಿ ರೈಲುಗಳನ್ನು ಓಡಿಸುವಾಗ ಬಳಸಲಾಗುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ ; ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ : ಸಿಎಂ ಬೊಮ್ಮಾಯಿ

ಸುದ್ದಿದಿನ ಡೆಸ್ಕ್ : ವಿಧಾನ ಪರಿಷತ್ನ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ತಮ್ಮ ಹಿಂದಿನ ಎಲ್ಲಾ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಶೀಘ್ರ ಬೃಹತ್ ಕಾರ್ಯಕ್ರಮ ಆಯೋಜಿಸಿ ಅವರನ್ನು ಪಕ್ಷಕ್ಕೆ ಸ್ವಾಗತಿಸಲಾಗುವುದು. ಸಾಕಷ್ಟು ರಾಜಕೀಯ ಅನುಭವ ಹೊಂದಿರುವ ಹೊರಟ್ಟಿ ಅವರು, ಪಕ್ಷಕ್ಕೆ ಬಂದಿರುವುದರಿಂದ ಪಕ್ಷದ ಬಲ, ಮತ್ತಷ್ಟು ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಶಕ್ತಿ ತುಂಬಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಧಾರಾಕಾರ ಮಳೆ ; ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ರೆಡ್ ಅಲರ್ಟ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲು ಸೂಚನೆ

ಸುದ್ದಿದಿನ ಡೆಸ್ಕ್ : ಬೆಂಗಳೂರಿನ ಬಹುತೇಕ ಎಲ್ಲಾ ಭಾಗಗಳಲ್ಲಿ 100 ಮಿಲಿಮೀಟರ್ಗೂ ಹೆಚ್ಚು ಮಳೆಯಾಗಿದೆ. ಈ ಸಂಬಂಧ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚಿಸಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ರೆಡ್ ಅಲರ್ಟ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲು ಸೂಚಿಸಲಾಗಿದೆ. ಮುಖ್ಯಮಂತ್ರಿಗಳು ಇಂದು ಮಳೆಯಿಂದ ಹಾನಿಗೊಳಗಾದ ಕೆಲಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಘೋಷಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ ಬೆಂಗಳೂರಿನಲ್ಲಿಂದು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ನಿತ್ಯ ಭವಿಷ್ಯ6 days ago
ಈ ರಾಶಿಯವರು ಆರ್ಥಿಕ ಮುಗ್ಗಟ್ಟಿನಿಂದ ಕಂಗಾಲು ಆದರೆ ಕೊನೆಘಳಿಗೆಯಲ್ಲಿ ಆತ್ಮೀಯರಿಂದ ಬಚಾವ್! ಗುರುವಾರ- ರಾಶಿ ಭವಿಷ್ಯ ಮೇ-12,2022
-
ದಿನದ ಸುದ್ದಿ7 days ago
ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಭಾರತಕ್ಕೆ ಪಲಾಯನ ಕುರಿತ ವರದಿ ನಿರಾಧಾರ : ಕೊಲಂಬೊದ ಭಾರತೀಯ ರಾಯಭಾರಿ ಕಚೇರಿ ಸ್ಪಷ್ಟನೆ
-
ರಾಜಕೀಯ6 days ago
ಕರ್ನಾಟಕದ ನಾಲ್ಕು ಸ್ಥಾನ ಸೇರಿದಂತೆ ರಾಜ್ಯಸಭೆಯ 57ಸ್ಥಾನಗಳಿಗೆ ಜೂನ್ 10 ರಂದು ಚುನಾವಣೆ ; ಆಯೋಗದಿಂದ ವೇಳಾಪಟ್ಟಿ ಪ್ರಕಟ
-
ರಾಜಕೀಯ6 days ago
ಹಿಂದುಳಿದ ವರ್ಗಗಳಿಗೆ ಮೀಸಲು ಸೌಲಭ್ಯ ; ಕಾನೂನು ಕ್ರಮ : ಸಿಎಂ ಬೊಮ್ಮಾಯಿ
-
ದಿನದ ಸುದ್ದಿ6 days ago
ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸರ್ಕಾರದ ತೀರ್ಮಾನ : ಸಚಿವ ಜೆ.ಸಿ. ಮಾದುಸ್ವಾಮಿ
-
ದಿನದ ಸುದ್ದಿ5 days ago
ಮಧ್ಯಾಹ್ನದ ಪ್ರಮುಖ ಸುದ್ದಿಗಳು
-
ನಿತ್ಯ ಭವಿಷ್ಯ4 days ago
ಇಂದಿನಿಂದಲೇ ಈ ರಾಶಿಗಳಿಗೆ ಧನ ಲಾಭ, ಸುಖ ಸಂಪತ್ತು ಪ್ರಾಪ್ತಿ! ಶನಿವಾರ ರಾಶಿ ಭವಿಷ್ಯ-ಮೇ-14,2022
-
ನಿತ್ಯ ಭವಿಷ್ಯ5 days ago
ಬುಧ ಗ್ರಹ ವಕ್ರಿಯ ಚಾಲನೆ ಯಾವ ರಾಶಿಗೆ ಶುಭ ಅಶುಭ ಫಲ! ಶುಕ್ರವಾರ ರಾಶಿ ಭವಿಷ್ಯ-ಮೇ-13,2022