Connect with us

ದಿನದ ಸುದ್ದಿ

ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆಯಾಗದಂತೆ ಕ್ರಮ : ಶಾಸಕ ಪ್ರೊ. ಲಿಂಗಣ್ಣ

Published

on

ಸುದ್ದಿದಿನ,ದಾವಣಗೆರೆ:ರೈತರ ಕೃಷಿ ಚಟುವಟಿಕೆಗೆ ಹಿನ್ನಡೆಯಾಗದಂತೆ ಕ್ರಮ ಕೈಗೊಳ್ಳಲಾಗಿದ್ದು ಈಗಾಗಲೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಪ್ರಾರಂಭಿಸಲಾಗಿದೆ, ಜಿಲ್ಲೆಗೆ ಅಗತ್ಯವಿರುವ ರಸಗೊಬ್ಬರ ಸರಬರಾಜಿಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ರೈತರು ಅನಗತ್ಯವಾಗಿ ಮುಗಿಬಿದ್ದು ಗೊಬ್ಬರ ಖರೀದಿಸಲು ಮುಂದಾಗದೆ, ಅವಶ್ಯವಿರುವಷ್ಟು ಗೊಬ್ಬರ ಮಾತ್ರ ಖರೀದಿಸಬೇಕು ಎಂದು ಮಾಯಕೊಂಡ ಶಾಸಕರು ಹಾಗೂ ಲಿಡಕರ್ ಅಭಿವೃದ್ಧಿ ನಿಗವ್ಮದ ಅಧ್ಯಕ್ಷರಾದ ಪ್ರೊ. ಲಿಂಗಣ್ಣ ಅವರು ಮನವಿ ಮಾಡಿದರು.

ಆನಗೋಡು ರೈತ ಸಂಪರ್ಕ ಕೇಂದ್ರ ಕಛೇರಿಯಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಕಳೆದ ವಾರದಿಂದ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು ಎಲ್ಲಾ ಭಾಗದ ರೈತರು ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ರೈತರಿಗೆ ಬಿತ್ತನೆಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕೂಡಲೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡುವಂತೆ ಸೂಚಿಸಿದ್ದರ ಹಿನ್ನೆಲೆಯಲ್ಲಿ ಸೋಮವಾರದಿಂದ ಬೀಜ ವಿತರಣೆ ಪ್ರಾರಂಭಿಸಲಾಗಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದ ಡಿಎಪಿ ಗೊಬ್ಬರದ ಬೆಲೆ ಹೆಚ್ಚಾಗಿದ್ದರೂ, ಕೋವಿಡ್-19ರ ಸಂಕಷ್ಟ ಸಮಯದಲ್ಲಿ ರೈತರಿಗೆ ಕೃಷಿ ಪರಿಕರಗಳನ್ನು ಖರೀದಿಸಲು ಕಷ್ಟವಾಗುತ್ತಿರುವುದನ್ನು ಮನಗಂಡು ಪ್ರಧಾನಿಯವರು ಏರಿಕೆಯಾಗಿದ್ದ ಡಿಎಪಿ ಗೊಬ್ಬರದ ಬೆಲೆಯನ್ನು 1200 ರೂ.ಗಳಿಗೆ ಇಳಿಸಿದ್ದಾರೆ.

ಸಂಸದರು ಸಹ ನಮ್ಮ ಮನವಿಯಂತೆ ಜಿಲ್ಲೆಗೆ ಅಗತ್ಯವಿರುವ ರಸಗೊಬ್ಬರದ ಕುರಿತು ಕೇಂದ್ರ ರಸಗೊಬ್ಬರ ಮಂತ್ರಿಗಳೊಂದಿಗೆ ಮಾತನಾಡಿ ಜಿಲ್ಲೆಗೆ ಅವಶ್ಯವಿರುವಷ್ಟು ಸರಬರಾಜು ಮಾಡಲು ಕ್ರಮ ಕೈಗೊಂಡಿರುತ್ತಾರೆ. ಆದ್ದರಿಂದ ಯಾವುದೇ ರೈತರು ಅನಗತ್ಯವಾಗಿ ಗೊಬ್ಬರ ಖರೀದಿಗೆ ಮುಂದಾಗಬಾರದು ಹಾಗೂ ಅವಶ್ಯವಿರುವಷ್ಟು ಗೊಬ್ಬರವನ್ನು ಮಾತ್ರ ಖರೀದಿಸಬೇಕು. ಬಿತ್ತನೆ ಬೀಜ ಹಾಗೂ ಗೊಬ್ಬರದ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ದಾವಣಗೆರೆ ಉಪವಿಭಾಗದ ಉಪ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ರೈತರಿಗೆ ಸಕಾಲದಲ್ಲಿ ಉತ್ತಮ ಗುಣಮಟ್ಟದ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲು ಕ್ರಮ ವಹಿಸಲಾಗಿದೆ.

ಮೆಕ್ಕೇಜೋಳಕ್ಕೆ ಸಾಮಾನ್ಯ ವರ್ಗದ ರೈತರಿಗೆ ಕೆ.ಜಿ.ಗೆ 20ರೂ., ಪ.ಜಾತಿ/ಪ.ಪಂಗಡಗಳ ರೈತರಿಗೆ ಕೆ.ಜಿ.ಗೆ 30 ರೂ., ಶೇಂಗಾಕ್ಕೆ ಸಾಮಾನ್ಯ ವರ್ಗದ ರೈತರಿಗೆ ಕೆ.ಜಿ.ಗೆ 18 ರೂ., ಪ.ಜಾತಿ/ಪ.ಪಂಗಡಗಳ ರೈತರಿಗೆ 27 ರೂ., ತೊಗರಿಗೆ ಸಾಮಾನ್ಯ ವರ್ಗದ ರೈತರಿಗೆ 25 ರೂ. ಪ.ಜಾತಿ/ಪ.ಪಂಗಡಗಳ ರೈತರಿಗೆ 37.50 ರೂ.ಗಳ ಸಹಾಯಧನವಿದ್ದು, ರೈತರು ತಮ್ಮ ಪಹಣಿ ಮತ್ತು ಆಧಾರ್ ಕಾರ್ಡ್ ಅಥವಾ ಪ್ರೂಟ್ಸ್ ನಂಬರ್ ತಿಳಿಸಿ ಈ ಸೌಲಭ್ಯ ಪಡೆಯಲು ಮನವಿ ಮಾಡಿದರು.

ದಾವಣಗೆರೆ ತಾಲ್ಲೂಕಿನಲ್ಲಿ ಸುಮಾರು 29 ರಿಂದ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೇಜೋಳ ಬಿತ್ತನೆಯಾಗುತ್ತಿದ್ದು, ರೈತರು ಇತ್ತೀಚಿನ ದಿನಗಳಲ್ಲಿ ಕೇವಲ ಏಕಬೆಳೆ ಪದ್ಧತಿ ಅನುಸರಿಸುತ್ತಿದ್ದಾರೆ. ಈ ಪದ್ಧತಿಯಿಂದ ಲಾಭದಲ್ಲಿ ಇಳಿಕೆಯಲ್ಲದೇ ಮಣ್ಣಿನ ಗುಣಮಟ್ಟ ಹಾನಿಯಾಗುತ್ತಿರುತ್ತದೆ. ಹೀಗಾಗಿ ಬೆಳೆ ಪರಿವರ್ತನೆ ಅಥವಾ ಮೆಕ್ಕೇಜೋಳದಲ್ಲಿ ಕಡ್ಡಾಯವಾಗಿ ದ್ವಿದಳ ಧಾನ್ಯ ಬೆಳೆಗಳಾದ ತೊಗರಿ, ಅವರೆ, ಅಲಸಂದೆ ಬೆಳೆಗಳನ್ನು ಬೆಳೆಯಬೇಕು.

ಇದನ್ನೂ ಓದಿ | ತಂಬಾಕು ಸೇವನೆಯಿಂದ ಕೊರೋನಾ ಸಾಧ್ಯತೆ ಹೆಚ್ಚು : ಡಾ. ವೆಂಕಟೇಶ್

ಇದರಿಂದ ಹೆಚ್ಚುವರಿ ಆದಾಯದ ಜೊತೆಯಲ್ಲಿ ಮಣ್ಣಿನ ಫಲವತ್ತತೆಯನ್ನು ಸಹ ಹೆಚ್ಚಿಸಿಕೊಳ್ಳಬಹುದು. ಈ ಕಾರಣಕ್ಕಾಗಿ ಸಣ್ಣ ರೈತರಿಗೂ ಅನುಕೂಲವಾಗಲೆಂದು ರೈತ ಸಂಪರ್ಕ ಕೇಂದ್ರಗಳಲ್ಲಿ 2 ಕೆಜಿ ತೊಗರಿ ಪ್ಯಾಕೆಟ್‍ಗಳನ್ನು ಸಹ ವ್ಯವಸ್ಥೆ ಮಾಡಿದ್ದು ಇದರ ಲಾಭ ಪಡೆಯಲು ಮನವಿ ಮಾಡಿದರು. ಯಾವುದೇ ರೈತರು ಅನಧಿಕೃತ ಕೃಷಿ ಪರಿಕರ ಮಾರಾಟಗಾರರಿಂದ ಯಾವುದೇ ಕೃಷಿ ಪರಿಕರಗಳನ್ನು ಖರೀದಿಸಬಾರದೆಂಬ ಸೂಚನೆಯನ್ನೂ ಸಹ ನೀಡಿದರು.

ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನಮೂರ್ತಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾಂಕ್ರಾಮಿಕ ರೋಗದ ಹಿನ್ನೆಲೆ ರೈತರು ಕೋವಿಡ್-19 ನಿಯಮಗಳನ್ನು ಪಾಲಿಸಿಕೊಂಡು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ರೈತರಿಗೆ ಮನವಿ ಮಾಡಿದರು.

ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನಗೌಡ ಹೆಚ್.ಕೆ., ಕೃಷಿ ಅಧಿಕಾರಿ ರವಿಕುಮಾರ್, ಸಹಾಯಕ ಕೃಷಿ ಅಧಿಕಾರಿ ಬಿ.ಕೆ. ಚಂದ್ರಪ್ಪ, ಗ್ರಾಮದ ಮುಖಂಡರಾದ ವಸಂತಕುಮಾರ್ ಮತ್ತು ಇತರೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಿರುದ್ಯೋಗಿಗಳಿಗೆ ಉಚಿತ ವಸತಿಯುತ ತರಬೇತಿ

Published

on

ಸುದ್ದಿದಿನ, ದಾವಣಗೆರೆ : 2022-23ನೇ ಸಾಲಿನಲ್ಲಿ ಗ್ರಾಮಾಂತರ ಕೈಗಾರಿಕಾ ವಿಭಾಗ ( Rural Industrial Department ) , ದಾವಣಗೆರೆ ( Davangere ) ಕಚೇರಿಯ ಜಿಲ್ಲಾ ಉದ್ಯಮ ಕೇಂದ್ರ ಲೆಕ್ಕಶೀರ್ಷಿಕೆಯಡಿ ದಾವಣಗೆರೆ ಜಿಲ್ಲೆಯ ಗ್ರಾಮೀಣ ಪ್ರದೇಶದ ವಿದ್ಯಾವಂತ ನಿರುದ್ಯೋಗಿಗಳಿಗೆ ( unemployeds ) 1) ಮೊಬೈಲ್‌ ರಿಪೇರಿ, 2) ಮೋಟಾರ್‌ ರೀವೈಂಡಿಂಗ್‌, 3) ಗೃಹ ಎಲೆಕ್ಟ್ರಿಕಲ್‌ ವೈರಿಂಗ್‌ ತಾಂತ್ರಿಕ ವಿಷಯಗಳ ಕುರಿತು ಕೆನರಾ ಬ್ಯಾಂಕ್‌ನ ಆರ್‌-ಸೆಟಿ ತರಬೇತಿ ಸಂಸ್ಥೆ, ತೋಳಹುಣಸೆ, ದಾವಣಗೆರೆ ತಾ. ಮೂಲಕ ಸಂಪೂರ್ಣ ಉಚಿತ ಹಾಗೂ ವಸತಿಯುತ ತರಬೇತಿ ( Free Training ) ನೀಡಿ, ಪ್ರತಿ ಅಭ್ಯರ್ಥಿಗೆ ರೂ. 5,000/- ಮೊತ್ತದ ಉಚಿತ ಉಪಕರಣಗಳ ಕಿಟ್‌ನ್ನು ಸಹ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ನ ಗ್ರಾಮಾಂತರ ಕೈಗಾರಿಕಾ ವಿಭಾಗದ ಉಪ ನಿರ್ದೇಶಕರು(ಖಾಗ್ರಾ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಯುಕ್ತ ಆಸಕ್ತ ಅಭ್ಯರ್ಥಿಗಳು ತರಬೇತಿಗಾಗಿ ಆರ್‌-ಸೆಟಿ ತರಬೇತಿ ಸಂಸ್ಥೆ, ತೋಳಹುಣಸೆ, ದಾವಣಗೆರೆ ತಾ. ಅಥವಾ ಉಪ ನಿರ್ದೇಶಕರು(ಖಾಗ್ರಾ), ಗ್ರಾಮೀಣ ಕೈಗಾರಿಕಾ ವಿಭಾಗ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಡಿ.ಸಿ. ಕಚೇರಿ ಪಕ್ಕ, ದಾವಣಗೆರೆ ಇಲ್ಲಿ ಸಂಪರ್ಕಿಸಿ ಹೆಚ್ಚಿನ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ತರಬೇತಿಯು 30 ದಿನಗಳ ವಸತಿಯುತ ತರಬೇತಿಯಾಗಿದ್ದು, ದಾವಣಗೆರೆ ಜಿಲ್ಲೆಯ ಗ್ರಾಮೀಣ ಅಭ್ಯರ್ಥಿಗಳಿಗೆ ಮಾತ್ರ (18 ರಿಂದ 45 ವರ್ಷ ವಯಸ್ಸಿನವರಿಗೆ ಮಾತ್ರ) ಅನ್ವಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ದೂರವಾಣಿ ಸಂ. : 9448929717, 9845691958, 7019980484, 9964111314.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹದಡಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ( Davangere ) ತಾಲ್ಲೂಕಿನ ಹದಡಿ (Hadadi) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ “ಹರ್ ಘರ್ ತಿರಂಗಾ” ( Har Ghar Tiranga ) ಅಭಿಯಾನದಲ್ಲಿ (Campaign) ವಿದ್ಯಾರ್ಥಿಗಳು ವಿವಿಧ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳನ್ನು ಧರಿಸಿ ಭಾಗವಹಿಸಿದ್ದರು, ಇದೇ ವೇಳೆ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

Big Breaking | ಜಮ್ಮು ಮತ್ತು ಕಾಶ್ಮೀರದ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ; 3 ಯೋಧರು ಹುತಾತ್ಮ

Published

on

ಸುದ್ದಿದಿನ,ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ(Jammu-Kashmir) ರಾಜೌರಿಯಲ್ಲಿ (Rajouri) ಇಂದು ಮುಂಜಾನೆ ಇಬ್ಬರು ಉಗ್ರರು (Terrorist) ಸೇನಾ ಶಿಬಿರದೊಳಗೆ (Army Camp) ನುಸುಳಲು ಯತ್ನಿಸಿದ ಪರಿಣಾಮ ಮೂವರು ಯೋಧರು (Soldiers) ಹುತಾತ್ಮರಾಗಿದ್ದಾರೆ (Killed ). ಎನ್‌ಕೌಂಟರ್‌ನಲ್ಲಿ (Encounter) ಇಬ್ಬರೂ ಉಗ್ರರು ಹತರಾಗಿದ್ದಾರೆ. ರಾಜೌರಿಯ ದರ್ಹಾಲ್‌ನಲ್ಲಿರುವ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ನಡೆದಿದೆ.

“ಭಯೋತ್ಪಾದಕರು ಪರ್ಗಲ್‌ನಲ್ಲಿರುವ ಸೇನಾ ಶಿಬಿರದ ಬೇಲಿಯನ್ನು ದಾಟಲು ಪ್ರಯತ್ನಿಸಿದರು. ಸೆಂಟ್ರಿ ಸವಾಲು ಹಾಕಿದರು ಮತ್ತು ಗುಂಡಿನ ಚಕಮಕಿ ನಡೆಯಿತು” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ – ADGP) ಮುಖೇಶ್ ಸಿಂಗ್ ಹೇಳಿದ್ದಾರೆ.

ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಅವರು ಹೇಳಿದರು. ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರಿಗೂ ಗಾಯಗಳಾಗಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending