ದಿನದ ಸುದ್ದಿ
ದಾವಣಗೆರೆ | ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕರ ನೇಮಕ : ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕೆಲವು ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 10 ಮೇಲ್ವಿಚಾರಕರ ಸ್ಥಾನಗಳಿಗೆ ಗೌರವ ಸಂಭಾವನೆ ಆಧಾರದ ಮೇಲೆ ಹಾಗೂ ನಿಗದಿಪಡಿಸಿದ ಮೀಸಲಾತಿಗನುಸಾರ ನೇಮಕಾತಿ ಮಾಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ನೇಮಕಾತಿ ಮಾಡಿಕೊಳ್ಳಲಾಗುತ್ತಿರುವ ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ನಿಗದಿಪಡಿಸಿರುವ ಮೀಸಲಾತಿ ವಿವರ ಇಂತಿದೆ. ದಾವಣಗೆರೆ ತಾಲ್ಲೂಕಿನ ಬೇತೂರು-2ಎ (ಮಹಿಳೆ), ಗೊಲ್ಲರಹಳ್ಳಿ- 3ಬಿ (ಮಹಿಳೆ), ಕೈದಾಳೆ- ಪ.ಜಾತಿ, ಕಕ್ಕರಗೊಳ್ಳ- ಸಾಮಾನ್ಯ ಅಭ್ಯರ್ಥಿ, ಮತ್ತಿ- ಸಾಮಾನ್ಯ (ಮಹಿಳೆ). ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿ- ಸಾಮಾನ್ಯ (ಗ್ರಾಮೀಣ ಅಭ್ಯರ್ಥಿ). ಚನ್ನಗಿರಿ ತಾಲ್ಲೂಕು ಹಿರೇಮಳಲಿ-ಸಾಮಾನ್ಯ (ಮಾಜಿ ಸೈನಿಕ), ಕೋಗಲೂರು- ಪ.ಪಂಗಡ, ರಾಜಗೊಂಡನಹಳ್ಳಿ-ಪ್ರವರ್ಗ-1. ನ್ಯಾಮತಿ ತಾಲ್ಲೂಕಿನ ಒಡೆಯರಹೊತ್ತೂರು ಗ್ರಾ.ಪಂ. ಗ್ರಂಥಾಲಯ- ಸಾಮಾನ್ಯ (ಗ್ರಾಮೀಣ ಅಭ್ಯರ್ಥಿ).
ಅರ್ಜಿ ಸಲ್ಲಿಸಲು ಕನಿಷ್ಟ ಎಸ್ಎಸ್ಎಲ್ಸಿ ಉತ್ತೀರ್ಣವಾಗಿರಬೇಕು. ಅಲ್ಲದೆ ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದವರಾಗಿರಬೇಕು, ಈ ಕುರಿತು ತಹಸಿಲ್ದಾರರಿಂದ ಪಡೆದ ರಹವಾಸಿ ಪ್ರಮಾಣಪತ್ರ ಹಾಗೂ ಸ್ಥಳೀಯ ಮತದಾರರ ಪಟ್ಟಿಯ ಭಾಗದ ಪ್ರತಿ ಸಲ್ಲಿಸಬೇಕು. ನಿಗದಿಪಡಿಸಿದ ಮೀಸಲಾತಿಗೆ ಅನುಗುಣವಾಗಿ ಮಾತ್ರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
ವಯಸ್ಕರ ಶಿಕ್ಷಣದಡಿ ಮುಂದುವರಿಕಾ ಕಲಿಕಾ ಕೇಂದ್ರಗಳ ಪ್ರೇರಕ, ಉಪಪ್ರೇರಕ ಅಥವಾ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಸೇವಾ ಪ್ರಮಾಣಪತ್ರ ಸಲ್ಲಿಸಿದಲ್ಲಿ ಆದ್ಯತೆ ನೀಡಲಾಗುವುದು ಅಲ್ಲದೆ ಗ್ರಂಥಾಲಯ ವಿಜ್ಞಾನ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ಸೇವಾ ಪ್ರಮಾಣಪತ್ರ ಅಥವಾ ಗ್ರಂಥಾಲಯ ವಿಜ್ಞಾನ ತರಬೇತಿ ಪಡೆಯದ ಅಭ್ಯರ್ಥಿಗಳು ಇಲ್ಲದಿದ್ದಲ್ಲಿ ಎಸ್ಎಸ್ಎಲ್ಸಿ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ನಿಗದಿತ ಅರ್ಜಿ ನಮೂನೆಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯತಿಗಳ ಪಿಡಿಒ ಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಎಸ್ಎಸ್ಎಲ್ಸಿ ಅಂಕಪಟ್ಟಿ, ಮೀಸಲಾತಿ ಪ್ರಮಾಣ ಪತ್ರ, ರಹವಾಸಿ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆ ಲಗತ್ತಿಸಿ, ಆಯಾ ಗ್ರಾಮ ಪಂಚಾಯತಿಗಳ ಕಾರ್ಯದರ್ಶಿ ಅಥವಾ ಪಿಡಿಒ ಅವರಿಗೆ ನವೆಂಬರ್ 11 ರ ಒಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಯನ್ನು ಮುಖ್ಯ ಗ್ರಂಥಾಲಯಾಧಿಕಾರಿಗಳ ಕಚೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಎಸ್ಬಿಎಂ ಕಟ್ಟಡ, ನಿಟ್ಟುವಳ್ಳಿ ಹೊಸ ಬಡಾವಣೆ, ದಾವಣಗೆರೆ ಇವರಿಂದ ಪಡೆಯಬಹುದು ಎಂದು ಮುಖ್ಯ ಗ್ರಂಥಾಲಯ ಅಧಿಕಾರಿ ತಿಪ್ಪೇಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಈಗ ಇ-ರೈಲಿನ ಕನಸು ಸಹ ನನಸಾಗಲಿದೆ..!

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಇ-ಬೈಕ್, ಇ-ಕಾರ್ ಮತ್ತು ಇ-ಬಸ್ ನಂತರ, ಈಗ ಇ-ರೈಲಿನ ಕನಸು ಸಹ ನನಸಾಗಲಿದೆ. ಪಶ್ಚಿಮ ಮಧ್ಯ ರೈಲ್ವೆಯು ನವದೂತ್ ಎಂಬ ಬ್ಯಾಟರಿ ಚಾಲಿತ ಡ್ಯುಯಲ್ ಮೋಡ್ ಲೋಕೋಮೋಟಿವ್ ಅನ್ನು ಅಭಿವೃದ್ಧಿಪಡಿಸಿದೆ.
ಈ ಎಂಜಿನ್ ಎರಡೂ ಮೋಡ್ ಗಳಲ್ಲಿ ಅಂದರೆ ಬ್ಯಾಟರಿ ಮತ್ತು ವಿದ್ಯುಚ್ಛಕ್ತಿಯಲ್ಲಿ ಚಲಿಸುತ್ತದೆ. ಪ್ರಸ್ತುತ, ಇದನ್ನು ಪ್ರಾಯೋಗಿಕ ಆಧಾರದ ಮೇಲೆ ಜಬಲ್ಪುರ, ಮುದ್ವಾರ ಮತ್ತು ಇತರ ನಿಲ್ದಾಣಗಳಲ್ಲಿ ರೈಲುಗಳನ್ನು ಓಡಿಸುವಾಗ ಬಳಸಲಾಗುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ ; ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ : ಸಿಎಂ ಬೊಮ್ಮಾಯಿ

ಸುದ್ದಿದಿನ ಡೆಸ್ಕ್ : ವಿಧಾನ ಪರಿಷತ್ನ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ತಮ್ಮ ಹಿಂದಿನ ಎಲ್ಲಾ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಶೀಘ್ರ ಬೃಹತ್ ಕಾರ್ಯಕ್ರಮ ಆಯೋಜಿಸಿ ಅವರನ್ನು ಪಕ್ಷಕ್ಕೆ ಸ್ವಾಗತಿಸಲಾಗುವುದು. ಸಾಕಷ್ಟು ರಾಜಕೀಯ ಅನುಭವ ಹೊಂದಿರುವ ಹೊರಟ್ಟಿ ಅವರು, ಪಕ್ಷಕ್ಕೆ ಬಂದಿರುವುದರಿಂದ ಪಕ್ಷದ ಬಲ, ಮತ್ತಷ್ಟು ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಶಕ್ತಿ ತುಂಬಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಧಾರಾಕಾರ ಮಳೆ ; ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ರೆಡ್ ಅಲರ್ಟ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲು ಸೂಚನೆ

ಸುದ್ದಿದಿನ ಡೆಸ್ಕ್ : ಬೆಂಗಳೂರಿನ ಬಹುತೇಕ ಎಲ್ಲಾ ಭಾಗಗಳಲ್ಲಿ 100 ಮಿಲಿಮೀಟರ್ಗೂ ಹೆಚ್ಚು ಮಳೆಯಾಗಿದೆ. ಈ ಸಂಬಂಧ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚಿಸಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ರೆಡ್ ಅಲರ್ಟ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲು ಸೂಚಿಸಲಾಗಿದೆ. ಮುಖ್ಯಮಂತ್ರಿಗಳು ಇಂದು ಮಳೆಯಿಂದ ಹಾನಿಗೊಳಗಾದ ಕೆಲಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಘೋಷಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ ಬೆಂಗಳೂರಿನಲ್ಲಿಂದು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ನಿತ್ಯ ಭವಿಷ್ಯ6 days ago
ಈ ರಾಶಿಯವರು ಆರ್ಥಿಕ ಮುಗ್ಗಟ್ಟಿನಿಂದ ಕಂಗಾಲು ಆದರೆ ಕೊನೆಘಳಿಗೆಯಲ್ಲಿ ಆತ್ಮೀಯರಿಂದ ಬಚಾವ್! ಗುರುವಾರ- ರಾಶಿ ಭವಿಷ್ಯ ಮೇ-12,2022
-
ರಾಜಕೀಯ6 days ago
ಕರ್ನಾಟಕದ ನಾಲ್ಕು ಸ್ಥಾನ ಸೇರಿದಂತೆ ರಾಜ್ಯಸಭೆಯ 57ಸ್ಥಾನಗಳಿಗೆ ಜೂನ್ 10 ರಂದು ಚುನಾವಣೆ ; ಆಯೋಗದಿಂದ ವೇಳಾಪಟ್ಟಿ ಪ್ರಕಟ
-
ರಾಜಕೀಯ6 days ago
ಹಿಂದುಳಿದ ವರ್ಗಗಳಿಗೆ ಮೀಸಲು ಸೌಲಭ್ಯ ; ಕಾನೂನು ಕ್ರಮ : ಸಿಎಂ ಬೊಮ್ಮಾಯಿ
-
ದಿನದ ಸುದ್ದಿ6 days ago
ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸರ್ಕಾರದ ತೀರ್ಮಾನ : ಸಚಿವ ಜೆ.ಸಿ. ಮಾದುಸ್ವಾಮಿ
-
ದಿನದ ಸುದ್ದಿ5 days ago
ಮಧ್ಯಾಹ್ನದ ಪ್ರಮುಖ ಸುದ್ದಿಗಳು
-
ನಿತ್ಯ ಭವಿಷ್ಯ4 days ago
ಇಂದಿನಿಂದಲೇ ಈ ರಾಶಿಗಳಿಗೆ ಧನ ಲಾಭ, ಸುಖ ಸಂಪತ್ತು ಪ್ರಾಪ್ತಿ! ಶನಿವಾರ ರಾಶಿ ಭವಿಷ್ಯ-ಮೇ-14,2022
-
ನಿತ್ಯ ಭವಿಷ್ಯ5 days ago
ಬುಧ ಗ್ರಹ ವಕ್ರಿಯ ಚಾಲನೆ ಯಾವ ರಾಶಿಗೆ ಶುಭ ಅಶುಭ ಫಲ! ಶುಕ್ರವಾರ ರಾಶಿ ಭವಿಷ್ಯ-ಮೇ-13,2022
-
ದಿನದ ಸುದ್ದಿ5 days ago
ಮೇ 19 ರಂದು ಎಸ್.ಎಸ್.ಎಲ್.ಸಿ ಫಲಿತಾಂಶ : ಸಚಿವ ಬಿ.ಸಿ.ನಾಗೇಶ್