Connect with us

ಭಾವ ಭೈರಾಗಿ

ಕವಿತೆ | ದೇಶ‌ಭಕ್ತ ಸೂಳೇಮಗನ ಭಾವಗೀತೆ

Published

on

  • ಪ್ರೊ.ಎಚ್. ಪಟ್ಟಾಭಿರಾಮ ಸೋಮಯಾಜಿ, ಮಂಗಳೂರು

ಗಾಂಧಿ ಬಿಡಿ ಸರ್
ಭಾಳ ದೊಡ್ಮನ್ಷ ಸರ್
ನಂಗೊತ್ತು
ತತ್ತ್ವನೇ ದೊಡ್ದು
ಜೀವ ಅಲ್ಲ ಸರ್
ಈಶ್ವರ ಅಲ್ಲಾ
ಅಂತ ಏನೇನೋ
ಮುದ್ಕ ಬಡ್ಕೋತಿದ್ನಲ್ಲ ಸರ್
ಅಂವ ಸರಿ ಇಲ್ಲ ಸರ್
ಸಾವಾಸ ಅಲ್ಲ ಸರ್
ಶುದ್ಧ ಅಂಡೆ ಪಿರ್ಕಿ ಸರ್
ಅವಂದು ಸಾಬ್ರ ಸಾವಾಸ ಸರ್
ಎಲ್ಲ ಎಕ್ಕುಡ್ಸಿಬುಟ್ಟ ಸರ್

ನಾಥೂರಾಮ ಇದಾನಲ್ಲ ಸರ್
ತತ್ತ್ವ ಅಂದ್ರೆ ಅವನ್ನ ನೋಡಿ
ಮರೀಬೇಕು ಸರ್
ಅವ್ನು ಮೆರೀಬೇಕು ಸರ್
ಬೊಚ್ಚು ಬಾಯ್ನಲ್ಲು
ಹೇ ರಾಮ್
ಹೇಳ್ಸಿದ್ನಲ್ಲ ಸರ್
ರಾಮರಾಜ್ಯ
ಆಗ್ಲೇ ಇನ್ನೇನು ಬರ್ತಿತ್ತು ಸರ್
ಹೇತ್ಲಾಂಡಿ ಹಿಂದುಗ್ಳಿಗೆ
ಹೇಳಿ ಹೇಳಿ ಸಾಕಾಯ್ತು ಸರ್
ಸಿಕ್ಕಿದ್ದೇ ಸೀರುಂಡೆ
ಅಂತ ನೆಹ್ರು ಸಂತಾನ
ಮೂಳೆ ಚಕ್ಳಾನೂ ನಮ್ಗೆ ಬಿಡ್ದಂಗೆ
ಎಲ್ಲಾನು ಹರ್ಕೊಂಡು ತಿಂತಲ್ಲ ಸರ್

ಏನೇ ಹೇಳಿ ಸರ್
ನೀವೇ ಸರಿ ಸರ್
ಚಕ್ರಬಡ್ಡಿ ಸಮೇತ
ಬಡ್ಡಿಮಗಂದು
ಈಗ ಇಸ್ಕೋತೀರಲ್ಲ ಸರ್
ಅವ್ರೇನ್ ಕಿಸ್ಕೋತಾರೆ ಸರ್
ಫಾರ್ಟಿಪರ್ಸೆಂಟ್ ನೀವೇ
ಕೈಯಾರ ಕೊಟ್ರಲ್ಲ ಸರ್
ಅದೇನ್ ಕಮ್ಮಿನ ಸರ್
ತೀರ್ಥ ಪ್ರಸಾದ ಎಲ್ಲಾ ಈಗ
ನಿಮ್ದೇ ಡಿಪಾರ್ಟ್ಮೆಂಟಲ್ವ ಸರ್

ಬಲಿರಾಮನ್ನೇ ತಂದು
ಎಲ್ಲಾರ್ನೂ ಬಲಿ ಹಾಕ್ತಿದ್ದೀರಲ್ಲ ಸರ್
ಪ್ರತಿ ಹಿಂದು ಬಾಯಲ್ಲು
ಹೇ ರಾಮ್
ಹೇಳ್ಸ್ಬೇಕು ಸರ್
ಸತ್ರೆ ಸಾಯ್ಲಿ ಬಿಡಿ ಸರ್
ಗುಂಡಿ ರೆಡಿ ಇದೆ ಸರ್
ಜನ ಏನ್ ಸರ್
ಕುರಿ ತರ
ಇವತ್ತ್ ಇರ್ತಾರೆ
ನಾಳೆ ಸಾಯ್ತಾರೆ
ತತ್ತ್ವ ಮುಖ್ಯ ಸರ್
ಕರೆಕ್ಟಾಗಿ ಐವತ್ತಾರಿಂಚು ಇರ್ಬೇಕ್ಸರ್
ಆ ಮೇಲೆ ನೀವ್ಹೇಳಿದ್ದು ಸರಿ ಸರ್
ಧ್ವಜ ಸರ್
ಅದೇ ಭಗವಾ ಧ್ವಜ ಸರ್
ಅದೇ ಸರ್

ನಿಮ್ದು ತಲೆ ಅಂದ್ರೆ ತಲೆ ಸರ್
ರಾವಣ್ನಿಗೂ ಇಷ್ಟ್ಟಿರ್ಲಿಲ್ಲ ಸರ್
ಶಾರ್ಟಾಗಿ ಸ್ಮಾರ್ಟಾಗಿ
ಧ್ವಜಕ್ಕೇ ಕೈ ಹಾಕಿದ್ರಲ್ಲ ಸರ್
ಮಕ್ಳಿಗೆ ಹೇಳ್ಳಿಕ್ಕೆ ಸುಲ್ಬ ಸರ್
ನಿಮ್ಗೆ ಹ್ಯಾಟ್ಸಾಫ್ ಸರ್
ಯಾರ್ ಕೇರ್
ಮಾಡ್ದಿದ್ರೇನ್ ಸರ್
ಕೇರೆ ಹಾವಿಗು ಹುತ್ತ
ನಾಗ್ಪುರ್ದಲ್ಲಿದೆ ಸರ್
ಅದೇನ್ ಸರ್ ಅಲ್ಲಿ ಅಬ್ಬಬ್ಬ
ನಾಲ್ಗೆ ಎರ್ಡೆರ್ಡು ಸರ್
ತಲೆ ತುಂಬ ಶುದ್ಧ ದೇಸಿ ಸಗ್ಣಿ ಸರ್
ಅವ್ರ್ ಕೈಲಿ ಮಚ್ಚೇ ಇದೆ ಸರ್
ಅಚ್ಛೇ ದಿನ್ ಬಂದೇ ಬರುತ್ತೆ
ನೋಡ್ತಾ ಇರಿ ಸರ್
ಬಡ್ಕೊಳ್ಲಿ ಬಿಡಿ ಸರ್
ಜ್ಞಾನ ಅಂತೆ ಜ್ಞಾನ
ಅದ್ರ್ ಮುಂಡಾ ಮುಚ್ತು ಸರ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ

ಆಗಾಗ ನೆನ್ಪಾಗ್ತವೆ ಆ ದಿನಗಳು

Published

on

ಕವಯಿತ್ರಿ : ಭೂಮಿಕಾ ಮಾದಾಪುರ
  • ಭೂಮಿಕಾ ಮಾದಾಪುರ

ರೆತರೂ ಮತ್ತೆ ಮತ್ತೆ ನೆನಪಾಗುವ
ಆ ದಿನಗಳು
ನೆನೆದಾಗಾಲೆಲ್ಲಾ ಅದೇನೋ ಫುಳಕ
ಮನಸ್ಸಲ್ಲೊಂಥರಾ ರೋಮಾಂಚನ..
ಮತ್ತೆಂದಿಗೂ ಮರಳಿ ಬಾರದ ಆ ದಿನಗಳನ್ನು ನೆನೆದರೆ ಕಣ್ತುಂಬಿಕೊಳ್ಳುತ್ತೆ..

ನಿಶ್ಕಲ್ಮಷವಾದ ನಡತೆ, ಮುದ್ದಾದ ಮಾತುಗಳು,
ಮನೆ ಮುಂದೆ , ಸಾಲಿ ಮುಗ್ದ್ಮೇಲ್ ಆಡಿದಾಟ
ಹೊತ್ತೋತ್ತಿಗೆ ಕೈತ್ತುತ್ತು , ಅತಿಯಾದ ಪ್ರೀತಿ..

ಬೆಳಿಗ್ಗೆ ಎದ್ದೇಳ್ಬೆಕಾದ್ರೆ ಇರೋ ಸೋಂಬೆರಿತನ
ಸಾಲಿಗೋದ್ ಕೂಡ್ಲೆ ಮಂಗ್ಮಾಯ..
ತೊಡಿ ಮ್ಯಾಲ್ ಒಂದ್ ಸಣ್ ಟವಲ್ ಹಾಕೋಂಡ್
ಸಾಲ್ಯಾಗ್ line ಹಚ್ ಕುಂತು ಸಹನಾವವತು ಹೇಳ್ತಾ
ಆಹಾ! ಅದೆಷ್ಟ್ ಮುದ್ದಾಗಿದ್ವಲ್ಲಾ ನಾವೆಲ್ಲಾ..

ಬಿಡಪ್ಪ ದೃಷ್ಠಿ ಆಗ್ತತಿ..

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಕವಿತೆ | ಮತ್ತೊಮ್ಮೆ ಗಾಂಧಿ

Published

on

  • ದಿವಾಕರ್. ಡಿ ಮಂಡ್ಯ

ತ್ತೊಮ್ಮೆ ಗಾಂಧಿ
ನೆನಪಿಗೆ ಬಂದ
ಅಹಿಂಸೆಯೇ ಗೆಲುವೆಂದ;
ಬೆತ್ತಲಿನ ಮಡಿಯ ಅಚ್ಚ
ಬಿಳುಪಿನ ವಸ್ತ್ರದ ನೊಡೋಕೆ ಚಂದ;

ದಟ್ಟ ದರಿದ್ರರ ಬಾಳಿಗೆ
ಹೊಸ ಆಶಾಕಿರಣ ತಂದ
ನಾವೆಲ್ಲರೂ ಸಮಾನರೆಂದ;
ಸಕಲರನ್ನು ಗೌರವಿಸಿ ಶತೃಗಳನ್ನು
ಕ್ಷಮಿಸಿ ಸಹೃದತೆಯ ಮೆರೆಯಿರೆಂದ;

ದೀನ ದಲಿತರ ಅಸೂಯಗೆ
ಕೊನೆಯೇ ಇಲ್ಲವೆಂದು
ಅಸ್ಪೃಶ್ಯತೆ ಶಾಪವೆಂದ;
ನಾವೆಲ್ಲರೂ ಭಾರತೀಯರು
ಧರ್ಮ ಜಾತಿ ಮೇಲು ಕೀಳು
ಕೊನೆಗಾಣಿಸಬೇಕೆಂದ:

ಬುದ್ಧ- ಬಸವಣ್ಣ, ಗಾಂಧಿ- ಅಂಬೇಡ್ಕರ್ ಸಮಾನತೆಯ
ಹರಿಕಾರರೆಂದ, ಹರಿದು ಹಂಚಿ
ಹೋದ ಮನುಜರೆದೆಯಲಿ
ಮಾನವೀಯತೆ ಬೆಳೆಯಲಿ ಎಂದ;

ದೇಶದಲ್ಲಿ ಅಬಲೆಯರ ಕಗ್ಗೊಲೆ
ಸಹಿಸದಿರಿ ಎಂದ ಸರ್ಕಾರವೇ ಕಣ್ಮುಚ್ಚಿ ಕುಳಿತರೇ ಬಾಯಿ
ಮುಚ್ಚಿಕೊಂಡಿರದಿರಿ ಎಂದ
ಹಿಂಸೆಗೆ ಪ್ರತಿಹಿಂಸೆ ಔಷದವಲ್ಲವೆಂದ;

ಮತ್ತೊಮ್ಮೆ ಗಾಂಧಿ ನೆನಪಿಗೆ
ಬಂದ ಹಿಂಸೆಯ ಆರಾಧಕರ
ಶುಭಾಶಯ ಕೇಳೋದೆ ಚಂದ;
ಹಾರ ತುರಾಯಿ ಸಮಾಧಿ ಮೇಲೆ
ಕಪಟಿ ದ್ಯಾನಸಕ್ತನಂತೆ ಕೈ ಮುಗಿಯೋದು ನೋಡೋಕೆ ಚಂದ;

ಮತ್ತೊಮ್ಮೆ ಗಾಂಧಿ
ನೆನಪಿಗೆ ಬಂದ;
ಮುಂದಿನ ಹುಟ್ಟು ಹಬ್ಬಕ್ಕಾದರೂ
ಭಾರತೀಯರ ಬದುಕನ್ನು ಸಿಹಿ ಮಾಡಿರೆಂದು ಹೋದ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಕವಿತೆ | ಹಾರುವ ಹೂವು

Published

on

ಕವಯಿತ್ರಿ | ಪಲ್ಲವಿ ಶೆಟ್ಟಿ
  • ಪಲ್ಲವಿ ಶೆಟ್ಟಿ

ಚಂದಾಗಿ ಮೊಳೆತು
ನವಿರಾದ ಚಿಗುರಾಗಿದ್ದೆ
ಪಲ್ಲವಿಸಿ ಅರಳಿ ಘಮ ಚೆಲ್ಲುವ ಹೂವೂ ಆದೆ
ಒಲವಿನ ಹೆಚ್ಚಾಸೆಯಿಂದ ಬಾಗಿದೆ
ನೀನೂ ನನ್ನಂತೆ ಕೋಮಲವೆಂದನಿಸಿ…!

ನೀನೇಕೋ ನನ್ನ ಬಂಧನವನು ಜರೂರು ಮಾಡಿಬಿಟ್ಟೆ
ಬಂಧಿಯಾದರೂ ಸುಖಿಸುತ್ತಿರುವ ಭಾಸದಿಂದ ನಿನ್ನ ನವಿರಿಗೆ ನಾ ಬೇಡಿಕೆಯಿಡಲಿಲ್ಲ
ಹೇಗೋ ಗಡುಸುತನಕ್ಕೆ ಒಗ್ಗಿ ನಿಲ್ಲಲು ಶುರು ಮಾಡಿದೆ!
ನೀ ನೂಕಿದೆ…!

ಸಂಪೂರ್ಣವಾಗಲ್ಲದಿದ್ದರೂ ಕೊಂಚವಾದರೂ ನಾ ಬಳಲಿದ್ದೆ
ಹೂವು ನಾನಾಗಿರಲಿಲ್ಲ
ಇನ್ನೊಮ್ಮೆ ನಗಬೇಕೆನಿಸಿ ಹಾರುವ ಚಿಟ್ಟೆಯಾಗಿದ್ದೇನೆ
ಆಗಾಗ ನೀ ಕಂಡರೂ ಒಮ್ಮೆ ಜೇನು ಹೀರಿ ಆನಂದಿಸುವ ದುರಾಸೆ
ಬೇಗ ಬಳಲಿ ಬಾಡಿಬಿಡು

ಇದ್ದೂ ಇದ್ದು ನನ್ನ ರೆಕ್ಕೆಯ ಕಟ್ಟಿಬಿಡಬೇಡ
ಮತ್ತೆ ನಿನ್ನೆಡೆಗೆ ಸೆಳೆಯುವ ದುರಾಸೆಯೇಕೆ
ಹಾರುವುದ ಕಲಿತಿದ್ದೇನೆ
ಮತ್ತೊಂದು ಹೂವಿಗಾಗಿ ಅಲ್ಲ
ಮತ್ತೆ ಹೂವಿಗೆ ಬಲಿಯಾಗದಿರಲೆಂದು

ಹಾರಲು ಬಿಟ್ಟು ಬಿಡು…

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending