Connect with us

ದಿನದ ಸುದ್ದಿ

ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಕೇಂದ್ರ ಸಶಸ್ತ್ರ ಪೊಲೀಸ್(CRPF)ವಿಶೇಷ ಭದ್ರತಾ ಪಡೆ(SSF) ಹಾಗೂ ಅಸ್ಸಾಂ ರೈಫಲ್‍ನಲ್ಲಿ ರೈಫಲ್ ಮ್ಯಾನ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(NBC)ನಲ್ಲಿ ಸಿಪಾಯಿ ಹುದ್ದೆಗಳ ಭರ್ತಿಗಾಗಿ ಸಿಬ್ಬಂದಿ ನೇಮಕಾತಿ ಆಯೋಗದ (SSC) ವತಿಯಿಂದ 10ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‍ಸೈಟ್ https://ssc.nic.in ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನವಂಬರ್ 30 ಕೊನೆಯದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ

080-25502520/9483862020 ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದಾವಣಗೆರೆ. ದೂರವಾಣಿ ಸಂಖ್ಯೆ: 08192-259446 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ಗೆ ’ವರ್ಷದ ಬ್ಯಾಂಕರ್‌ಗಳ ಬ್ಯಾಂಕ್’ ಪ್ರಶಸ್ತಿ

Published

on

ಸುದ್ದಿದಿನ ಡೆಸ್ಕ್ : ಲಂಡನ್‌ನಲ್ಲಿ ಕಳೆದ ತಿಂಗಳ 29ರಿಂದ ಈ ತಿಂಗಳ 1 ರವರೆಗೆ ನಡೆದ ಜಾಗತಿಕ ಬ್ಯಾಂಕಿಂಗ್ ಸಮಾವೇಶದಲ್ಲಿ ಭಾರತೀಯ ವಿಭಾಗದಡಿ ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ಗೆ ’ವರ್ಷದ ಬ್ಯಾಂಕರ್‌ಗಳ ಬ್ಯಾಂಕ್’ ಪ್ರಶಸ್ತಿ ಲಭಿಸಿದೆ.

ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಲ್.ವಿ. ಪ್ರಭಾಕರ್ ಸಮಾವೇಶ ಆಯೋಜಕರಿಂದ ಪ್ರಶಸ್ತಿ ಸ್ವೀಕರಿಸಿದರು. ಕಳೆದ 12 ತಿಂಗಳಲ್ಲಿ ಕಾರ್ಯತಂತ್ರ, ಲಾಭ, ಆವಿಷ್ಕಾರ, ತಂತ್ರಜ್ಞಾನ ಮತ್ತು ಗ್ರಾಹಕರಿಗೆ ಒದಗಿಸಲಾದ ವಿವಿಧ ಸೇವೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಕ್ವಿಜೇಬಲ್ಡ್‌ – ವಿಶೇಷ ಕ್ವಿಜ಼್ ಕಾರ್ಯಕ್ರಮ

Published

on

ಸುದ್ದಿದಿನ, ಬೆಂಗಳೂರು : ವಿಶ್ವ ಅಂಗವಿಕಲರ ದಿನಾಚರಣೆಯ ಅಂಗವಾಗಿ ಕ್ವಿಜೇಬಲ್ಡ್‌ – ವಿಶೇಷ ಕ್ವಿಜ಼್ ಕಾರ್ಯಕ್ರಮವನ್ನು ಸೇವಾ-ಇನ್‌-ಆಕ್ಷನ್‌(SiA) ಸಂಸ್ಥೆಯು ನಾಳೆ (ಡಿಸೆಂಬರ್.3ರಂದು) ಬೆಂಗಳೂರಿನ ಬಿ ಎಂ ಎಸ್‌ ಇಂಜಿನಿಯರಿಂಗ್‌ ಕಾಲೇಜ್‌, ಬುಲ್‌ ಟೆಂಪಲ್‌ ರೋಡ್‌, ಬಸವನಗುಡಿಯ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೇವಾ-ಇನ್-ಆಕ್ಷನ್ ನ ನಿರ್ದೇಶಕರಾದ ಮಂಜುಳ ನಂಜುಂಡಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರದ ಸಚಿವರಾದ ಶ್ರೀ ನಾರಾಯಣಸ್ವಾಮಿಯವರು ಕಾರ್ಯಕ್ರಮವನ್ನು ಉದ್ಗಾಟಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಂಗವಿಕಲ ಮಕ್ಕಳು ಮತ್ತು ವಯಸ್ಕರಿಗಾಗಿ ನಡೆಸುತ್ತಿರುವ ಈ ಕಾರ್ಯಕ್ರಮಕ್ಕೆ ಎಲ್‌ಟಿಐಮೈಂಡ್‌ಟ್ರೀ (LTIMindtree) ಸಂಸ್ಥೆಯ ಸಹಕಾರ ಮತ್ತು ಬೆಂಬಲವಿದೆ. ಅಂಗವಿಕಲರ ಸಾಧನಾ-ಸಾಧ್ಯತೆಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡುವಂತಹ ಜ್ಞಾನ-ವೇದಿಕೆಯನ್ನು ಅವರಿಗೆ ನೀಡುವ ಅನನ್ಯ ಕಾರ್ಯಕ್ರಮವಿದು. ಸೇವಾ-ಇನ್‌-ಆಕ್ಷನ್‌ ಸ್ವಯಂ ಸೇವಾ ಸಂಸ್ಥೆಯು ಮೂರು ದಶಕಗಳಿಗಿಂತಲೂ ಹೆಚ್ಚು ಸಮಯ (1985 ರಿಂದ) ಅಂಗವಿಕಲತೆಯ ಕ್ಷೇತ್ರದಲ್ಲಿ ಬಹಳಷ್ಟು ಕೆಲಸಗಳನ್ನು ಮಾಡುತ್ತಿದೆ.

ಒಳಗೊಳ್ಳುವ ಶಿಕ್ಷಣ, ಕೌಶಲ ಅಭಿವೃದ್ಧಿ ಮತ್ತು ಜೀವನೋಪಾಯ ಕಲ್ಪಿಸುವ ಮೂಲಕ ಅಂಗವಿಕಲ ವ್ಯಕ್ತಿಗಳನ್ನು ಸಬಲಗೊಳಿಸುವ ಗುರಿಯನ್ನು ಸೇವಾ-ಇನ್‌-ಆಕ್ಷನ್‌ ಹೊಂದಿದೆ ಹಾಗೂ ಅಂಗವಿಕಲ ಮಕ್ಕಳು ಮತ್ತು ವಯಸ್ಕರ ಸಮಗ್ರ ಅಭಿವೃದ್ಧಿಯ ಸಲುವಾಗಿ ಅವರು ತಮ್ಮ ಸಾಮರ್ಥ್ಯ ಮತ್ತು ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ಅನೇಕ ವೇದಿಕೆಗಳನ್ನು ಸೃಷ್ಟಿಸುತ್ತಿದೆ. ಈ ದಿಕ್ಕಿನಲ್ಲಿ ಇಟ್ಟಿರುವ ಹೆಜ್ಜೆಗಳಲ್ಲಿ 2016 ರಿಂದ ನಡೆಸಿಕೊಂಡು ಬರುತ್ತಿರುವ ಕ್ವಿಜೇ಼ಬಲ್ಡ್‌ ಕಾರ್ಯಕ್ರಮವೂ ಒಂದಾಗಿದೆ.
ಕ್ವಿಜೇ಼ಬಲ್ಡ್‌ 2022-23 ಕಾರ್ಯಕ್ರಮವನ್ನು ಮಿಶ್ರ ವಿಧಾನದಲ್ಲಿ ಆಯೋಜಿಸಲಾಗಿದೆ.

ಕರ್ನಾಟಕದ ಶಾಲೆಗಳ ವಿಶೇಷ ಮತ್ತು ಸಾಮಾನ್ಯ ಶಾಲೆಗಳ ಎಲ್ಲ ಅಂಗವಿಕಲ ಮಕ್ಕಳ ಮೊದಲ ಸುತ್ತು ಮತ್ತು ಸೆಮಿ-ಫೈನಲ್‌ ಹಂತವು ಆನಲೈನ್‌ ನಲ್ಲಿ ನಡೆಯುವುದು ಹಾಗೂ ಫೈನಲ್‌ ಹಂತವು ಮುಖಾಮುಖಿ ನಡೆಯುವುದು. ಐದು ವಿಭಿನ್ನ ಪ್ರಕಾರದ ಅಂಗವಿಕಲತೆಯುಳ್ಳವರನ್ನು ಒಳಗೊಳ್ಳುವಂತೆ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಅವುಗಳು: ಬೌದ್ಧಿಕ ವಿಕಲತೆ (ID), ಸೆರಿಬ್ರಲ್‌ ಪಾಲ್ಸಿ (CP), ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ (ASD), ದೃಷ್ಟಿದೋಷ (VI) ಮತ್ತು ಶ್ರವಣ ದೋಷ (HI). ಈ ಕ್ವಿಜ಼್ ಕಾರ್ಯಕ್ರಮದ ಎಲ್ಲ ಹಂತಗಳನ್ನೂ, 4 ಎಡ್ಜ್‌ ಕ್ವಿಜ್ಜಿಂಗ್‌ ಸಲ್ಯೂಷನ್ಸ್‌ ಸಂಸ್ಥೆಯ ವೃತ್ತಿಪರ ಕ್ವಿಜ಼್ ಮಾಸ್ಟರ್‌ಗಳು ನಡೆಸಿಕೊಡುತ್ತಾರೆ. ಕರ್ನಾಟಕದಲ್ಲಿ ಈ ಕ್ವಿಜ಼್ ಕಾರ್ಯಕ್ರಮವು ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮದಲ್ಲಿ ನಡೆಯುತ್ತದೆ.

ಭಾಗವಹಿಸುವ ಎಲ್ಲ ಮಕ್ಕಳಿಗೂ ಭಾಗವಹಿಸುವಿಕೆಯ ಪ್ರಮಾಣ ಪತ್ರವನ್ನು ನೀಡಲಾಗುವುದು. ವಿಜೇತರು ಮತ್ತು ಎರಡನೇ ಸ್ಥಾನ ಪಡೆದವರಿಗೆ ನಗದು ಬಹುಮಾನ ನೀಡಲಾಗುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜಾಗೃತಿಯಿಂದ ಮಾತ್ರ ಎಚ್.ಐ.ವಿ ಹಾಗೂ ಏಡ್ಸ್ ನಿಯಂತ್ರಣ ಸಾಧ್ಯ: ಡಾ.ಕೆ.ಎಚ್.ಗಂಗಾಧರ್

Published

on

ಸುದ್ದಿದಿನ, ದಾವಣಗೆರೆ : ಯುವಜನತೆ ಎಚ್.ಐ.ವಿ ( HIV ) ಹಾಗೂ ಏಡ್ಸ್ ( AIDS ) ರೋಗಕ್ಕೆ ಬಲಿಯಾಗುತ್ತಿದ್ದು, ಜಾಗೃತಿಯಿಂದ ಮಾತ್ರ ಈ ಮಾರಕ ಖಾಯಿಲೆಯನ್ನು ನಿಯಂತ್ರಿಸಬಹುಸು ಎಂದು ದಾವಣಗೆರೆ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಡಾ||ಕೆ.ಎಚ್.ಗಂಗಾಧರ್ ಅವರು ತಿಳಿಸಿದರು.

ನಗರದ ಎ.ವಿ.ಕಮಲಮ್ಮ ಪದವಿಪೂರ್ವ ಕಾಲೇಜಿನಲ್ಲಿ ವಿ.ಬಿ.ಪಿ.ಫೌಂಡೇಶನ್, ಏಕಾಂತಗಿರಿ ಟ್ರಸ್ಟ್ ಹಾಗೂ ಮಹಿಳಾ ಮತ್ತು‌ ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಏಡ್ಸ್ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ||ಕೆ.ಎಚ್.ಗಂಗಾಧರ್ ಅವರು ಏಡ್ಸ್ ಹರಡುವ ವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಪ್ರಸ್ತಾವಿಕ ಮಾತುಗಳನ್ನಾಡಿದ ಏಕಾಂತಗಿರಿ ಟ್ರಸ್ಟ್ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಎಚ್.ಐ.ವಿ ಬಗ್ಗೆ ಅರಿವಿನ ಕೊರತೆಯ ಕಾರಣದಿಂದ ಹೆಚ್ಚು ಯುವಜನತೆ ಏಡ್ಸ್ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಆದ ಕಾರಣ ವಿ.ಬಿ.ಪಿ ಫೌಂಡೇಶನ್ ಹಾಗೂ ಏಕಾಂತಗಿರಿ ಟ್ರಸ್ಟ್ ಸಹಯೋಗದಲ್ಲಿ ಹಲವಾರು ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರಾಮನಾಯ್ಕ್ ಅವರು ಮಾತನಾಡಿ, ಬಾಲ್ಯ ವಿವಾಹದಿಂದ ಹೆಣ್ಣುಮಕ್ಕಳು ಎದುರಿಸುತ್ತಿರುವ ಬಿಕ್ಕಟ್ಟುಗಳು ಹಾಗೂ ಕಾನೂನು ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಶ್ರೀಮತಿ ಪ್ರಿಯದರ್ಶಿನಿ ಇವರು ಮಾತನಾಡಿ, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಸಂವಿಧಾನಿಕ ಅವಕಾಶಗಳ ಬಗ್ಗೆ ಮಾಹಿತಿಯನ್ನು ವ್ಯಕ್ತಪಡಿಸಿದರು.
ವಿ.ಬಿ.ಪಿ.ಫೌಂಡೇಶನ್ ಸಂಸ್ಥಾಪಕರಾದ ಶಿವಕುಮಾರ್ ಮೇಗಳಮನೆಯವರು ಮಾತನಾಡಿ ಸಾಮಾಜಿಕವಾಗಿ ಎಚ್.ಐ.ವಿ‌ ಹಾಗೂ ಏಡ್ಸ್ ಪೀಡಿತರು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಶಂಭು ಹೊಸಮನಿಯವರು ವಿಶ್ವ ಏಡ್ಸ್ ದಿನದ ಭಾಗವಾಗಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ‌ ಪ್ರಾಂಶುಪಾಲರಾದ ಶ್ರೀ ಎ.ಬಿ.ಶಿವನಗೌಡ ಅವರು ಮಾತನಾಡಿ ಎಚ್.ಐ.ವಿ ಅತ್ಯಂತ ಮಾರಕ ಖಾಯಿಲೆಯಾಗಿದ್ದು, ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಇಂತಹ ಜಾಗೃತಿ ಕಾರ್ಯಕ್ರಮಗಳು ಶಾಲಾ ಕಾಲೇಜುಗಳಿಗೆ ಮಾತ್ರ ಸೀಮಿತವಾಗದೆ ಸಮಾಜದ ಪ್ರತಿಯೊಬ್ಬ ಪ್ರಜೆಗಳಿಗೂ ತಲುಪುವಂತೆ ಕಾರ್ಯಪ್ರವೃತ್ತವಾಗಲಿ ಎಂಬುದಾಗಿ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕರಾದ ಡಾ.ಗೀತಾ ಎಂ.ಸಿ, ಮಂಜುಳಾ ಟಿ, ರವಿ ಬಣಕಾರ್ ಭಾಗಿಯಾಗಿದ್ದರು. ಕಾಲೇಜಿನ ವಿದ್ಯಾರ್ಥಿನಿಯರಾದ ಚಂಪಕ ಕೆ.ವಿ ಸ್ವಾಗತಿಸಿದರು, ಪೂಜಾ ಕೆ.ಎನ್ ವಂದಿಸಿದರು, ಆರತಿ ಕೆ.ಎಸ್. ಹಾಗೂ ಮಾಲಾ ಎಂ. ಎಸ್. ನಿರೂಪಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending