ದಿನದ ಸುದ್ದಿ
ಆಂಧ್ರ, ತೆಲಂಗಾಣದಲ್ಲಿ ಮರಣ ಮೃದಂಗ
ಸುದ್ದಿದಿನ ಡೆಸ್ಕ್: ಜವರಾಯನ ಅಟ್ಟಹಾಸಕ್ಕೆ 15 ಕೃಷಿ ಕಾರ್ಮಿಕರು ಸೇರಿ 24 ಜನ ಮೃತಪಟ್ಟು, 19ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮರಣ ಮೃದಂಗ ಬಾರಿಸಿದೆ.
ಟ್ರ್ಯಾಕ್ಟರ್ ಪಲ್ಟಿ; 15 ಕೃಷಿ ಕಾರ್ಮಿಕರ ಸಾವು
ತೆಲಂಗಾಣ ರಾಜ್ಯದ ಯಾದಾದ್ರಿ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಕ್ಯಾನಲ್ ಗೆ ಬಿದ್ದಿದ್ದರಿಂದ 15 ಕೃಷಿ ಕಾರ್ಮಿಕರು ಸ್ಥಳದಲ್ಲೇ ಮೃತಟ್ಟರೆ, 15ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಜಮೀನಿನಲ್ಲಿ ಬೀಜ ಬಿತ್ತನೆ ಕಾರ್ಯಕ್ಕೆಂದು ಟ್ರ್ಯಾಕ್ಟರ್.ನಲ್ಲಿ ಹೋಗುತ್ತಿದ್ದಾಗ ವೆಲಿಗೊಂಡ ಹತ್ತಿರ ಇರುವ ಮುಸಿ ಕ್ಯಾನಲ್.ಗೆ ಪಲ್ಟಿ ಹೊಡೆದಿದೆ. ಆಗ ಅದರಲ್ಲಿದ್ದ 14 ಮಹಿಳೆಯರು, ಒಬ್ಬ ಬಾಲಕ ಸಾವನ್ನಪ್ಪಿದ್ದಾರೆ.
ಮೃತರ ದೇಹವನ್ನು ಪೊಲೀಸ್, ಅಧಿಕಾರಿಗಳು ಜನರ ನೆರವಿನ ಮೇಲೆ ತೆಗೆದಿದ್ದಾರೆ. ಮುಖ್ಯಮಂತ್ರಿ ಚಂದ್ರಶೇಖರ ರಾವ್ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ಬಳಿ ಆಟೋಗೆ ಡಿಕ್ಕಿ ಹೊಡೆದ ಎಪಿಆರ್ಟಿಸಿ ಬಸ್
ಕರ್ನೂಲಿನಿಂದ ಮಹಾನಂದಿಗೆ ಹೋಗುತ್ತಿದ್ದ ಪ್ರಯಾಣಿಕರ ಆಟೋಗೆ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಬಸ್ ಡಿಕ್ಕಿ ಹೊಡೆದಿದ್ದರಿಂದ 9 ಮೃತಪಟ್ಟು, 4ಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡಿದ್ದಾರೆ. ಅಪಘಾತಕ್ಕೆ ಓವರ್ ಲೋಡ್ ಕಾರಣ ಎನ್ನಲಾಗಿದೆ.