ದಿನದ ಸುದ್ದಿ
ಒಂದು ಸುಳ್ಳು ಸುದ್ದಿಗೆ 29 ಪ್ರಾಣ ಬಲಿ..!
ಸುದ್ದಿದಿನ ಡೆಸ್ಕ್ : ಕಳೆದ ಒಂದು ವರ್ಷದಿಂದ ವ್ಯಾಟ್ಸಪ್ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದ್ದ ಒಂದೇ ಒಂದು ಸುಳ್ಳು ಸುದ್ದಿಗೆ 29 ಜೀವಗಳನ್ನು ಬಲಿಯಾಗಿವೆ. ಈ ಬಗ್ಗೆ ಯಾರೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಪ್ರಾಣ ಹಾನಿಯಾಗಿದ್ದರ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಸಾವುಗಳ ಪ್ರಕರಣದಲ್ಲಿ ರಾಜಕೀಯ ಕೈವಾಡವಿಲ್ಲ, ಹಿಂದು- ಮುಸ್ಲಿಂ ಡಿಸ್ಪ್ಯುಟ್ ಅಲ್ಲ, ಜಾತಿ ವೈಷಮ್ಯ ಇಲ್ಲ, ಇಂಡಿಯಾ- ಪಾಕಿಸ್ತಾನ, ಬಿಜೆಪಿ- ಕಾಂಗ್ರೆಸ್, ಜಿಹಾದ್, ನಕ್ಸಲ್ ಚಟುವಟಿಕೆ, ಆರೆಸ್ಸೆಸ್, ಕಾಶ್ಮೀರ, ಇದ್ಯಾವುದೇ ವಿಷಯಗಳಿಗೆ ಜೀವಗಳು ಬಲಿಯಾಗಿಲ್ಲ. ಹಾಗಾದ್ರೆ ಯಾವ ವಿಷಯಕ್ಕೆ ಪ್ರಾಣ ಬಲಿಯಾದವು ? ಎಂದರೆ
ದೇಶಾದ್ಯಂತ 29 ಜನರ ಪ್ರಾಣ ಹಾನಿಯಾಗಿದ್ದದರೂ ಏಕೆ ಪ್ರಶ್ನೆ ಕಾಡುತ್ತಿರ ಬಹುದು. ವ್ಯಾಟ್ಸಪ್ ನಲ್ಲಿ ಹರಿಬಿಟ್ಟ ಒಂದೇ ಒಂದು ಸುಳ್ಳು ಸುದ್ದಿ ಎಂದರೆ “ಮಕ್ಕಳ ಕಳ್ಳರು” ಬಂದಿದ್ದಾರೆ ಎಂಬುದು.
ಸದ್ಯ 29 ಜೀವಗಳು ಪ್ರಾಣ ಕಳೆದುಕೊಂಡಿವೆ. ಇನ್ನು ಎರಡ್ಮೂರು ತಿಂಗಳಲ್ಲಿ 100ಕ್ಕೆ ತಲುಪ ಬಹುದಾದ ಆತಂಕವಿದೆ.
ಕಾರಣ ಏನಿರಬಹುದು?
ದೇಶದ ತಮಿಳುನಾಡಿನಿಂದ ತ್ರಿಪುರ ರಾಜ್ಯದ ವರೆಗೆ “ಮಕ್ಕಳ ಕಳ್ಳರ ಗ್ಯಾಂಗ್ ಬಂದಿದೆ, ಕದ್ದೊಯ್ಯಲಿದ್ದಾರೆ”. ಎಂಬ ವದಂತಿ ಕಾಳ್ಗಿಚ್ಚಿನಂತೆ ಹಬ್ಬಿದ್ದಕ್ಕೆ ಮುಖ್ಯ ಕಾರಣ ಕಡಿಮೆ ದರದಲ್ಲಿ ಇಂಟರ್ನೆಟ್, ಸ್ಮಾರ್ಟ್ ಫೋನ್ ಗಳು ಪರಿಚರಿಯಿಸಿದ್ದೇ ಆಗಿದೆ. ಸ್ಮಾರ್ಟ್ ಫೋನ್, ಇಂಟರ್ನೆಟ್ ಬಳಸಿಕೊಂಡು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದು ಕೋಟ್ಯಂತರ ಜನರಿಗೆ ತಲುಪಿ ಭಯದ ವಾತಾವರಣ ನಿರ್ಮಿಸಿತ್ತು.
ಪ್ರಮುಖಾಂಶಗಳು
• ಅಪರಿಚಿತರು, ಅನಾಮಿಕರು, ಹೊರಗಿನವರ ಊರಿಗೆ ಬಂದಾಗ ಅವರನ್ನು ಅನುಮಾನದಿಂದ ನೋಡುವಂತೆ ಮಾಡಿತು.
•ಮಕ್ಕಳ ಕಿಡ್ನಾಪ್ ತಡೆಯುವ ಕುರಿತ ಪಾಕಿಸ್ತಾನದ ಕರಾಚಿಯಲ್ಲಿ ನಿರ್ಮಿಸಿದ ವಿಡಿಯೋ ವೈರಲ್ ಆಗಿತ್ತು.
• ವ್ಯಕ್ತಿಯೊಬ್ಬ ಮಗುವನ್ನು ಬೈಕ್ ನಲ್ಲಿ ಕಿಡ್ನಾಪ್ ಮಾಡುತ್ತಿರುವಂತಹ ದೃಶ್ಯ ವಿಡಿಯೋ ನಲ್ಲಿತ್ತು.
• ಈ ವಿಡಿಯೋವನ್ನು ಎಡಿಟ್ ಮಾಡಿ ದೇಶಾದ್ಯಂತ ಸಾಮಾಜಿಕ ಜಾಲತಾಣದ ಮೂಲಕ ಹಬ್ಬಿಸಲಾಗಿತ್ತು.
• ಈ ವಿಡಿಯೋ ಹರಿದಾಡುತ್ತಿರುವ ಬಗ್ಗೆ ತಕ್ಷಣ ಯಾರೂ ಕ್ರಮ ಕೈಗೊಳ್ಳದೇ ಇರುವುದೇ ಜನರ ಪ್ರಾಣಕ್ಕೆ ಕುತ್ತು ತಂದಿತು.
ಈ ಕುರಿತಾಗಿ 2017-18ರ ಘಟನಾವಳಿಗಳು
2017ರ ಘಟನಾವಳಿಗಳು
• ಮೇ: 7 ಜಾರ್ಖಂಡ್ನಲ್ಲಿ ಸಾವನ್ನಪ್ಪಿದ್ದರು.
• ಮೇ 10: ತಮಿಳುನಾಡಿನಲ್ಲಿ 2 ಮಂದಿ ಕೊಲ್ಲಲ್ಪಟ್ಟರು.
• ಮೇ 23: ಈ ಸಂಬಂಧ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಬಂಧಿಸಲಾಗಿದೆ.
2018 ರ ಘಟನೆಗಳು
• ಮೇ: ಪ್ರತ್ಯೇಕ ಘಟನೆಗಳಲ್ಲಿ ಆಂಧ್ರ ಮತ್ತು ತೆಲಂಗಾಣದಲ್ಲಿ 6 ಮಂದಿ ಮೃತಪಟ್ಟಿದ್ದಾರೆ.
• 8 ಜೂನ್: 2 ಅಸ್ಸಾಂನಲ್ಲಿ ಮೃತಪಟ್ಟಿದ್ದಾರೆ.
• 8 ಜೂನ್: 2 ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಹತ್ಯೆಗೈಯ್ಯಲಾಗಿದೆ.
• ಜೂನ್ 13: ಪಶ್ಚಿಮ ಬಂಗಾಳದ ಮಾಲ್ಟಾದಲ್ಲಿ ವ್ಯಕ್ತಿ ಹತ್ಯೆ ಮಾಡಿದರು.
• ಜೂನ್ 23: ಪಶ್ಚಿಮ ಬಂಗಾಳದ ಈಸ್ಟ್ ಮಿಡ್ನಾಪೋರ್ನಲ್ಲಿ ವ್ಯಕ್ತಿಯನ್ನು ಹತ್ಯೆಗೈಯಲಾಯಿತು.
• ಜೂನ್ 26: ಗುಜರಾತ್ನ ಅಹಮದಾಬಾದ್ನಲ್ಲಿ 45 ವರ್ಷ ವಯಸ್ಸಿನ ಭಿಕ್ಷುಕ ಮಹಿಳೆಯ ಕೊಲೆ.
• 28 ಜೂನ್: ಒಂದೇ ದಿನದಲ್ಲಿ ತ್ರಿಪುರದಲ್ಲಿ ಮೂವರು ಸಾವನ್ನಪ್ಪಿದರು, ವದಂತಿಗಳನ್ನು ವಜಾಗೊಳಿಸಲು ಸರ್ಕಾರದಿಂದ ನೇಮಕಗೊಂಡ ವ್ಯಕ್ತಿ ಸೇರಿದಂತೆ.
• ಜುಲೈ 1: ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ 5 ಮಂದಿಯನ್ನು ಈ ಸಂಬಂಧ ಬಂಧಿಸಲಾಗಿದೆ.