ದಿನದ ಸುದ್ದಿ

2ನೇ ಹಂತದ ಮತದಾನ ; ಮತದಾರರೆಷ್ಟು ಗೊತ್ತಾ..?

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಇದೇ 7 ರಂದು 2ನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಸಂಜೆ ತೆರೆ ಬದ್ದಿದೆ.

ಎರಡನೇ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಒಟ್ಟು 14 ಕ್ಷೇತ್ರಗಳಲ್ಲಿ ಒಟ್ಟು 227 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು ಒಂದು ಕೋಟಿ 96ಲಕ್ಷ 48 ಸಾವಿರದ 978ಪುರುಷ ಮತದಾರರು ಹಾಗೂ ಒಂದು ಕೋಟಿ 29 ಲಕ್ಷ 66ಸಾವಿರದ 570 ಮಹಿಳಾ ಮತದಾರರು ಸೇರಿದಂತೆ ಒಟ್ಟು 2 ಕೋಟಿ 59 ಲಕ್ಷ 17 ಸಾವಿರದ 493 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಟ್ಟಾರೆಯಾಗಿ 2ನೇ ಹಂತದಲ್ಲಿ ಮಹಿಳಾ ಮತದಾರರೇ ಪ್ರಾಬಲ್ಯ ಮೆರೆದಿದ್ದಾರೆ.

ಕಲಬುರಗಿಯಲ್ಲಿ ಅತಿ ಹೆಚ್ಚು ಅಂದರೆ 10 ಲಕ್ಷ 47 ಸಾವಿರದ 961ಮಂದಿ ಮಹಿಳಾ ಮತದಾರರಿದ್ದಾರೆ. ಚಿಕ್ಕೋಡಿಯಲ್ಲಿ ಅತಿ ಹೆಚ್ಚು ಅಂದರೆ 58 ಸಾವಿರದ 176ಮಂದಿ ಯುವ ಮತದಾರರಿದ್ದಾರೆ.

ಉಪ ಚುನಾವಣೆ ನಡೆಯುವ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷ 42 ಸಾವಿರದ 532 ಪುರುಷ ಮತದಾರರಿದ್ದು, ಒಂದು ಲಕ್ಷ 40 ಸಾವಿರದ 523ಮಹಿಳಾ ಮತದಾರರಿದ್ದು, ಒಟ್ಟು 2ಲಕ್ಷ 83 ಸಾವಿರದ 83 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಮತದಾರರು ಮತದಾನದ ವೇಳೆ ಆಧಾರ್ ಕಾರ್ಡ್, ಮನ್ರೇಗಾ ಉದ್ಯೋಗ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ತೋರಿಸಬಹುದು. ಮತದಾನ ದಿನದಂದು 14 ಕ್ಷೇತ್ರಗಳಲ್ಲಿ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version