/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

3.5 ಲಕ್ಷ ವೋಕ್ಸ್ ವ್ಯಾಗನ್ ಕಾರುಗಳು ವೇಸ್ಟ್ ಆಗಿವೆ ಯಾಕೆ ಗೊತ್ತಾ?

ಡೀಸೆಲ್ ಗೇಟ್ ಹಗರಣದಲ್ಲಿ ಸಿಲುಕಿರುವ ಅಮೆರಿಕದ ಪ್ರಖ್ಯಾತ ವೋಕ್ಸ್ ವ್ಯಾಗನ್ ಕಂಪನಿಯ 3.5 ಲಕ್ಷ ಡೀಸೆಲ್ ಕಾರುಗಳನ್ನು ಏನುಮಾಡಬೇಕೆಂದು ಕಂಪನಿಗೆ ದೊಡ್ಡ ತಲೆನೋವಾಗಿದೆ.

Published

on

ಸುದ್ದಿದಿನ ಡೆಸ್ಕ್: ಡೀಸೆಲ್ ಗೇಟ್ ಹಗರಣದಲ್ಲಿ ಸಿಲುಕಿರುವ ಅಮೆರಿಕದ ಪ್ರಖ್ಯಾತ ವೋಕ್ಸ್ ವ್ಯಾಗನ್ ಕಂಪನಿಯ 3.5 ಲಕ್ಷ ಡೀಸೆಲ್ ಕಾರುಗಳನ್ನು ಏನುಮಾಡಬೇಕೆಂದು ಕಂಪನಿಗೆ ದೊಡ್ಡ ತಲೆನೋವಾಗಿದೆ.
ಅಮೆರಿಕದ ವಾಯುಮಾಲಿನ್ಯ ಕಾನೂನುಗಳ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ 2015ರಲ್ಲಿ ದಂಡ ವಿಧಿಸಿದ್ದ ಮಾಲಿನ್ಯ ನಿಯಂತ್ರಣ ಇಲಾಖೆಯು ಮಾರಾಟ ಮಾಡಲಾಗಿರುವ ಅಷ್ಟೂ ಡೀಸೆಲ್ ಕಾರುಗಳನ್ನು ವಾಪಸ್ ಪಡೆಯುವಂತೆ ಸೂಚಿಸಿತ್ತು.
ಸರಕಾರಕ್ಕೆ ದಂಡವನ್ನೂ ಕಟ್ಟಿದ್ದ ಕಂಪನಿಯು 7.5 ಶತಕೋಟಿ ಮಿಲಿಯನ್ ಡಾಲರ್ ಖರ್ಚು ಮಾಡಿ ತಾನು ಮಾರಾಟ ಮಾಡಿರುವ ಡೀಸೆಲ್ ಕಾರುಗಳನ್ನು ಖರೀದಿಸಿದೆ. ಆದರೆ, ಮೂರುವರೆ ಲಕ್ಷ ಡೀಸೆಲ್ ಕಾರುಗಳನ್ನು ಎಲ್ಲಿ ಪಾರ್ಕ್ ಮಾಡುವುದು ಎಂಬುದು ಕಂಪನಿಗೆ ತಲೆನೋವಾಗಿ ಪರಿಣಮಿಸಿದೆ. ನ್ಯಾಯಾಲಯದಿಂದ ಅಧಿಕೃತ ಆದೇಶ ಹೊರ ಬೀಳುವವರೆಗೆ ಈ ಕಾರುಗಳನ್ನು ಮಾರಾಟ ಇಲ್ಲವೇ ಗುಜರಿಗೆ ಹಾಕುವ ಅವಕಾಶವೂ ಇಲ್ಲ.
ಅಮೆರಿಕದಲ್ಲಿ ವಾಯು ಮಾಲಿನ್ಯ ಕುರಿತ ಕಾನೂನುಗಳು ಬಹಳ ಕಟ್ಟುನಿಟ್ಟಾಗಿವೆ. ಅಮೆರಿಕ ವಿಧಿಸಿದ್ದ ವಾಯು ಮಾಲಿನ್ಯ ನಿಯಂತ್ರಣ ಕಾನೂನುಗಳನ್ನು ಮೀರಿ ಲಕ್ಷಾಂತರ ಕಾರುಗಳನ್ನು ತಯಾರಿಸಿತ್ತು. ಪೊಲೀಸರ ಕೈಗೆ ಸಿಕ್ಕಿಬಿದ್ದ ನಂತರ ಗ್ರಾಹಕರು ಕಂಪನಿಯನ್ನು ತರಾಟೆಗೆ ತೆಗೆದುಕೊಂಡರು. ಪರಿಣಾಮವಾಗಿ ಕಂಪನಿಯು ಎಲ್ಲ ಕಾರುಗಳನ್ನು ಮರು ಖರೀದಿ ಮಾಡುವ ನಿರ್ಧಾರಕ್ಕೆ ಬಂದಿದೆ.
ಸ್ಕೋಡ, ಪೋರ್ಶ್ ಮೊದಲಾದ ಕಾರುಗಳನ್ನು ವೋಕ್ಸ್‍ವ್ಯಾಗನ್ ಉತ್ಪಾದಿಸುತ್ತಿದೆ.

Leave a Reply

Your email address will not be published. Required fields are marked *

Trending

Exit mobile version