ದಿನದ ಸುದ್ದಿ
Big Breaking | ಜಮ್ಮು ಮತ್ತು ಕಾಶ್ಮೀರದ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ; 3 ಯೋಧರು ಹುತಾತ್ಮ
ಸುದ್ದಿದಿನ,ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ(Jammu-Kashmir) ರಾಜೌರಿಯಲ್ಲಿ (Rajouri) ಇಂದು ಮುಂಜಾನೆ ಇಬ್ಬರು ಉಗ್ರರು (Terrorist) ಸೇನಾ ಶಿಬಿರದೊಳಗೆ (Army Camp) ನುಸುಳಲು ಯತ್ನಿಸಿದ ಪರಿಣಾಮ ಮೂವರು ಯೋಧರು (Soldiers) ಹುತಾತ್ಮರಾಗಿದ್ದಾರೆ (Killed ). ಎನ್‌ಕೌಂಟರ್‌ನಲ್ಲಿ (Encounter) ಇಬ್ಬರೂ ಉಗ್ರರು ಹತರಾಗಿದ್ದಾರೆ. ರಾಜೌರಿಯ ದರ್ಹಾಲ್‌ನಲ್ಲಿರುವ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ನಡೆದಿದೆ.
“ಭಯೋತ್ಪಾದಕರು ಪರ್ಗಲ್‌ನಲ್ಲಿರುವ ಸೇನಾ ಶಿಬಿರದ ಬೇಲಿಯನ್ನು ದಾಟಲು ಪ್ರಯತ್ನಿಸಿದರು. ಸೆಂಟ್ರಿ ಸವಾಲು ಹಾಕಿದರು ಮತ್ತು ಗುಂಡಿನ ಚಕಮಕಿ ನಡೆಯಿತು” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ – ADGP) ಮುಖೇಶ್ ಸಿಂಗ್ ಹೇಳಿದ್ದಾರೆ.
ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಅವರು ಹೇಳಿದರು. ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರಿಗೂ ಗಾಯಗಳಾಗಿವೆ.
One Officer is also among the injured Army personnel in the terrorist attack and has been rushed for medical treatment. 16 Corps Commander Lt Gen Manjinder Singh is constantly monitoring the situation on the ground. The area is being sanitised: Indian Army officials https://t.co/pXJONGqwm2
— ANI (@ANI) August 11, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243