ದಿನದ ಸುದ್ದಿ

ಪತಿ ಸತ್ತು ಮೂರು ವರ್ಷದ ನಂತರ ಮಗು ಜನನ

Published

on

ಸುದ್ದಿದಿನ ಡೆಸ್ಕ್: ಇದು ಸಿನಿಮೀಯ ಎನಿಸಿದರೂ ನಿಜ ಜೀವನದಲ್ಲಿ ನಡೆದ ಕತೆ. ಬೆಂಗಳೂರಿನ ಮಾರುಕಟ್ಟೆ ಸಹಾಯಕರೊಬ್ಬರ (ಮಾರ್ಕೆಟಿಂಗ್ ಕನ್ಸಲ್ಟಂಟ್) ಬದುಕಿನ ಕತೆ.
ಗೌರವ್ ಜೈನ್ ಎಂಬುವವರು ನಿಧನಹೊಂದಿದ ಮೂರು ವರ್ಷಗಳ ನಂತರ ಅವರ ಮಗು ಜನನವಾಗಿದ್ದು, ಗೌರವ್ ಅವರ ಮರುಜನ್ಮವೇ ಈ ಮಗು ಎಂದು ಕುಟುಂಬದವರು ಖುಷಿಯಾಗಿದ್ದಾರೆ.
ಗೌರವ್ ಜೈನ್ ಮತ್ತು ಸುಪ್ರಿಯಾ ಜೈನ್ ದಂಪತಿ 30ರ ಆಸುಪಾಸಿನಲ್ಲಿ ಮದುವೆಯಾದರು. ಮಗು ಪಡೆಯಬೇಕೆಂಬ ಅವರ ಪ್ರಯತ್ನ ವಿಫಲವಾಗಿ ಕೊನೆಗೆ ಐವಿಎಫ್ ಚಿಕಿತ್ಸೆ ಮೊರೆ ಹೋದರು. ಈ ಮಧ್ಯೆ ಹುಬ್ಬಳ್ಳಿಯಲ್ಲಿ ನಡೆದ ಅಪಘಾತವೊಂದರಲ್ಲಿ ಗೌರವ್ ಮೃತಪಟ್ಟರು. ಸಾವಿಗೀಡಾಗುವ ಒಂದು ದಿನದ ಮುನ್ನ ಅಪ್ಪ ಅಮ್ಮನನ್ನು ಭೇಟಿಯಾಗಿದ್ದ ಗೌರವ್ ಒಂದು ಶುಭ ಸುದ್ದಿ ಜತೆ ಮತ್ತ ಬರುವುದಾಗಿ ಹೇಳಿ ಹೋಗಿದ್ದರು. ಆದರೆ, ವಿಧಿಯಾಟವೇ ಬೇರೆಯದಾಗಿತ್ತು.
ಪತಿಯನ್ನು ಕಳೆದುಕೊಂಡ ಸುಪ್ರಿಯಾ ಅವರು ಮಗು ಪಡೆಯಬೇಕೆಂಬ ಕನಸು ಮಾತ್ರ ಹಾಗೇ ಇತ್ತು. ಈ ಮುಂಚೆಯೇ ಗೌರವ್ ಅವರ ವೀರ್ಯವನ್ನು ವೈದ್ಯರು ಪಡೆದಿದ್ದರಿಂದ ಮೂರ್ನಾಲ್ಕು ಬಾರಿ ಪ್ರಯತ್ನ ಮಾಡಿದರೂ, ಸುಪ್ರಿಯಾರಿಗೆ ಮಕ್ಕಳಾಗಲಿಲ್ಲ.
ಕೊನೆಯ ಪ್ರಯತ್ನವಾಗಿ ಬಾಡಿಗೆ ತಾಯಿಯೊಬ್ಬರನ್ನು ಸಂಪರ್ಕಿಸಿ ಅವರ ಮೂಲಕ ಸುಪ್ರಿಯಾ ಅವರು ಗಂಡು ಮಗುವನ್ನು ಪಡೆದಿದ್ದಾರೆ. ಗೌರವ್ ಅವರ ಮೂರನೇ ವರ್ಷದ ಕಾರ್ಯ ನಡೆಯುತ್ತಿರುವಾಗ ಸುಪ್ರಿಯಾ ಅವರಿಗೆ ಶುಭ ಸುದ್ದಿ ಬಂತು. ಜಸ್ಲೋಕ್ ಆಸ್ಪತ್ರೆಯಲ್ಲಿ ಬಾಡಿಗೆ ತಾಯಿಗೆ ಗಂಡು ಮಗು ಹುಟ್ಟಿರುವುದಾಗಿ ವೈದ್ಯರು ಹೇಳಿದರು. ಇದನ್ನು ಕೇಳಿದ ಕುಟುಂಬದವರಿಗೆ ಖುಷಿಯೋ ಖುಷಿ. ತಮ್ಮ ಮಗನೇ ಮಗುವಿನ ರೂಪದಲ್ಲಿ ಹುಟ್ಟಿದ್ದಾನೆಂದು ತಂದೆ ತಾಯಿ ಖುಷಿಪಟ್ಟರೆ. ಇದು ತನ್ನ ಮಗುವಲ್ಲ ಗೌರವ್‍ನ ಮಗು. ಥೇಟ್ ಅವರಂತೇ ಇದೆ ಎಂದು ಸುಪ್ರಿಯಾ ಭಾವಪರವಶರಾಗಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version