ದಿನದ ಸುದ್ದಿ
ವಿಡಿಯೋ | ವಿಮಾನ ಅಗ್ನಿ ದುರಂತದಲ್ಲಿ 41 ಮಂದಿ ಸಾವು
ಸುದ್ದಿದಿನ, ಮಾಸ್ಕೋ : ರಷ್ಯಾ ನಿರ್ಮಿತ ಜೆಟ್ – 100 ವಿಮಾನವು ಭಾನುವಾರ ಬೆಂಕಿಗಾಹುತಿಯಾಗಿ 41 ಪ್ರಯಾಣಿಕರು ಮೃತ ಪಟ್ಟಿರುವ ದುರ್ಘಟನೆ ಮಾಸ್ಕೋದ ಷೆರೆಮೆಟ್ಯೆವೋ ನಿಲ್ದಾಣದಲ್ಲಿ ಸಂಭವಿಸಿದೆ.
ಸುಮಾರು 73 ಮಂದಿ ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಈ ವಿಮಾನವು ಮುರ್ಮನ್ಸ್ಕ್ ಎಂಬ ನಗರಕ್ಕೆ ಹೊರಟಿದ್ದು ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಈ ಅಪಾಯದ ಮುಂಸೂಚನೆ ಸಿಕ್ಕಿದೆ. ನಂತರ ಮಾಸ್ಕೋದ ಬಿಸಿಸ್ಟ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಷರ್ಶ ಮಾಡಲು ಯತ್ನಿಸಿದ ಸಂದರ್ಭದಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ ಎಂದು CNN ಮಾಡಿರುವ ವರದಿಯಲ್ಲಿ ತಿಳಿಸಿದೆ.
A Russian Aeroflot plane lands in flames at one of the main airports. Investigators confirm at least 41 people died. pic.twitter.com/NtyTkRPbIq
— CGTN America (@cgtnamerica) May 5, 2019
ಸುದ್ದಿದಿನ.ಕಾಂ|ವಾಟ್ಸಾಪ್|9980346243