ಕ್ರೀಡೆ
4ನೇ ಏಕದಿನ ಪಂದ್ಯ: ಟಾಸ್ ಗೆದ್ದ ಭಾರತ; ಬ್ಯಾಟಿಂಗ್ ಆಯ್ಕೆ..!
ಸುದ್ದಿದಿನ,ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಕಳೆದ ಪಂದ್ಯದಲ್ಲಿ ಕಾಂಗರೂಗಳಿಗೆ ಶರಣಾಗಿ ಹಿನ್ನೆಡೆ ಅನುಭವಿಸಿದ್ದ ವಿರಾಟ್ ಕೊಹ್ಲಿ ಪಡೆ, ಇಂದಿನ ಪಂದ್ಯದಲ್ಲಿ ಕಾಂಗರೂಗಳಿಗೆ ತಿರುಗೇಟು ನೀಡಿ ಸರಣಿ ಗೆಲುವಿನ ಬಗೆ ಬೀರುವ ವಿಶ್ವಾಸದಲ್ಲಿದೆ.
ಇನ್ನು ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಕೆಲ ಬದಲಾವಣೆಯಾಗಿದೆ. ಕನ್ನಡಿಗ ಕೆ.ಎಲ್ ರಾಹುಲ್, ಯಜುವೇಂದರ್ ಚಹಾಲ್, ರಿಷಬ್ ಪಂತ್, ಭುವನೇಶ್ವರ್ ಕುಮಾರ್ಗೆ ಚಾನ್ಸ್ ನೀಡಲಾಗಿದೆ. ಧೋನಿ, ಅಂಬಟಿ ರಾಯುಡು, ಮಹಮ್ಮದ್ ಶಮಿ, ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401