ಸಿನಿ ಸುದ್ದಿ

ಸಲ್ಲುಗೆ ಥಳಿಸಿದರೆ ಐದು ಲಕ್ಷ ರೂ. ಕೊಡ್ತಾರಂತೆ

Published

on


ಸುದ್ದಿ ದಿನ ಡೆಸ್ಕ್: ನಟ ಸಲ್ಮಾನ್ ಖಾನ್ ಅವರನ್ನು ಥಳಿಸಿದವರಿಗೆ ಐದು ಲಕ್ಷ ರೂ. ಇನಾಮು ಸಿಗುತ್ತಂತೆ.
ಹೀಗೆಂದು ಘೋಷಿಸಿರುವವರು ಹಿಂದೂ ಹೀ ಆಗೇ’ ಸಂಘಟನೆಯ ಆಗ್ರಾ ಘಟಕದ ಅಧ್ಯಕ್ಷ ಗೋವಿಂದ್ ಪರಶಾರ್.

ಸಲ್ಮಾನ್ ಖಾನ್ ಚಿತ್ರ ನಿರ್ಮಾಣ ಸಂಸ್ಥೆಯ
‘ಲವ್ ರಾತ್ರಿ’ ಸಿನಿಮಾವೇ ಈ ವಿವಾದದ ಕೇಂದ್ರಬಿಂದು.
ಲವ್ ರಾತ್ರಿ ಸಿನಿಮಾವು ನವರಾತ್ರಿ ಹಬ್ಬದಂದು ಬಿಡುಗಡೆಯಾಗುತ್ತಿರುವುದಾಗಿ ಘೋಷಣೆಯಾಗಿದ್ದೇ ತಡ ಸಿನಿಮಾ ಟೈಟಲ್ಗೂ ನವರಾತ್ರಿಗೂ ಸಂಬಂಧವಿದೆ ಎಂದು ಆರೋಪಿಸಿ, ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಪರಶಾರ್ ಅವರು ಕೆಂಡಾಮಂಡಲವಾಗಿದ್ದಾರೆ.
ಇದರಿಂದ ಕುದ್ದುಹೋಗಿರುವ ಅವರು ಸಲ್ಮಾನ್ ಖಾನ್ ಗೆ ಹೊಡೆದರೆ ಐದು ಲಕ್ಷ ಹಾಗೂ ಸಿನಿಮಾ ಸೆಟ್ ಹಾಳು ಮಾಡಿದರೆ ಎರಡು ಲಕ್ಷ ಕೊಡುವುದಾಗಿ ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version