ದಿನದ ಸುದ್ದಿ
ನೋಟ್ ಬ್ಯಾನ್ ನಿಂದ ಉದ್ಯೋಗ ಕಳೆದುಕೊಂಡವರು 50ಲಕ್ಷ ಮಂದಿ..!
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆ 2014ರಲ್ಲಿ ಬಿಜೆಪಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವ ಭರವಸೆಯನ್ನು ಕೊಟ್ಟಿತ್ತು. ನಂತರ ಅಧಿಕಾರಕ್ಕೆ ಮೋದಿ ಅವರು 500/1000 ರೂಪಾಯಿಗಳ ಮುಖ ಬೆಲೆಯ ನೋಟುಗಳನ್ನು ರಾತ್ರೋರಾತ್ರಿ ಬ್ಯಾನ್ ಮಾಡಿದ ಪರಿಣಾಮ ದೇಶದಲ್ಲಿ 50ಲಕ್ಷ ಮಂದಿ ಉದ್ಯೂಗ ಕಳೆದುಕೊಂಡಿದ್ದಾರೆಂದು ಅಧ್ಯಯನ ವರದಿಯೊಂದರಿಂದ ತಿಳಿದು ಬಂದಿದೆ.
ಸೆಂಟರ್ ಫಾರ್ ಸಸ್ಟೈನೇಬಲ್ ಎಂಪ್ಲಾಯ್ಮೆಂಟ್ ಅಜೀಮ್ ಪ್ರೇಮ್ಜೀ ಯೂನಿವರ್ಸಿಟಿಯ ಸಂಶೋಧಕರ ‘ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ’ ವರದಿ ಮಂಗಳವಾರ (ಏಪ್ರಿಲ್ 16) ರಂದು ಬಿಡುಗಡೆ ಮಾಡಿ್ದದ ಅಧ್ಯಯನ ವರದಿಯಲ್ಲಿ ಈ ಅಂಶಗಳಿವೆ.
ಈ ಅಧ್ಯಯನವು ಖಾಸಗಿ ಸಂಸ್ಥೆ ಸಿಎಂಐಇ ನೀಡಿದ ಅಂಶಗಳನ್ನೊಳಗೊಂಡಿದ್ದು, ಅಜೀಮ್ ಪ್ರೇಮ್ಜೀ ಯೂನಿವರ್ಸಿಟಿ ಸಂಶೋಧಕರು ಈ ವರದಿ ಬಿಡುಗಡೆ ಮಾಡಿದ್ದಾರೆ. ಈ ವರದಿಯು ಉದ್ಯೋಗವನ್ನು ಕಳೆದು ಕೊಂಡಿರುವವರಲ್ಲಿ ಹೆಚ್ಚು ಜನ ಅನೌಪಚಾರಿಕ ಕ್ಷೇತ್ರದಲ್ಲಿ ದುಡಿಯುವ ಶೋಷಿತ ಸಮುದಾಯಗಳಿಗೆ ಸೇರಿದವರಾಗಿದ್ದಾರೆಂದು ತಿಳಿಸುತ್ತದೆ.