ದಿನದ ಸುದ್ದಿ
5ಜಿ ತರಂಗಾಂತರ ಹಂಚಿಕೆಯ ಹರಾಜಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ಸುದ್ದಿದಿನ ಡೆಸ್ಕ್ : ದೂರಸಂಪರ್ಕ ಇಲಾಖೆ ಮೂಲಕ 5ಜಿ ತರಂಗಾಂತರ ಗುಚ್ಚದ ಹರಾಜು ಪ್ರಕ್ರಿಯೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಸಾರ್ವಜನಿಕ ಸಾಮ್ಯದ ದೂರಸಂಪರ್ಕ ಇಲಾಖೆ ೫ಜಿ ತರಂಗಾಂತರವನ್ನು ಮುಂದಿನ 20 ವರ್ಷಗಳವರೆಗೆ 72 ಸಾವಿರ ಮೇಘಾ ಹರ್ಟ್ಸ್ ಸ್ಪೆಕ್ಟ್ರಾಮ್‌ನ್ನು ಕಾನೂನು ಅಡಿ ಹರಾಜು ಮಾಡಲು ಸಲ್ಲಸಿದ್ದ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.
ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಇಂಡಿಯಾ ಮಾದರಿ ಅಡಿ ಸಂಪರ್ಕ ಕಲ್ಪಿಸುವುದರ ಜತೆಗೆ ಸ್ಟಾರ್ಟ್‌ಅಪ್ ಯೋಜನೆ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಯಡಿ 5ಜಿ ತರಂಗಾಂತರ ಗುಚ್ಚವನ್ನು ಹರಾಜು ಮಾಡಲು ಸಚಿವ ಸಂಪುಟ ತೀರ್ಮಾನಿಸಿದ್ದು, ಮುಂದಿನ 20 ವರ್ಷಗಳವರೆಗೆ ನಿಯಮದಡಿ ಖಾಸಗಿಯವರು ಬಳಕೆಯನ್ನು ಸಾರ್ವಜನಿಕರಿಗೆ ತ್ವರಿತವಾಗಿ ಕಲ್ಪಿಸಲು ಅನುಕೂಲ ಮಾಡಿಕೊಡುವ
ಯೋಜನೆಗೆ ಸಮ್ಮತಿ ನೀಡಿತು ಎಂದು ಮೂಲಗಳು ತಿಳಿಸಿವೆ.
5ಜಿ ತರಂಗಾಂತರ ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿ ಪಡಿಸಲಿದ್ದು, ದೇಶದ ಅತ್ಯುನ್ನತ ತಂತ್ರಜ್ಞಾನ ಸಂಸ್ಥೆಗಳು ಇದನ್ನು ಅವಿಷ್ಕಾರಗೊಳಿಸಿದೆ ಎಂದು ವರದಿಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243