ದಿನದ ಸುದ್ದಿ

5ಜಿ ತಂತ್ರಜ್ಞಾನ, ಭಾರತೀಯ ಆರ್ಥಿಕತೆಗೆ 450 ಶತಕೋಟಿ ಡಾಲರ್ ಕೊಡುಗೆ ನೀಡುವ ಅಂದಾಜು : ಪ್ರಧಾನಿ ಮೋದಿ

Published

on

ಸುದ್ದಿದಿನ ಡೆಸ್ಕ್ : ಪಂಚಸೂತ್ರಗಳ ಅಡಿಯಲ್ಲಿ ದೇಶದ ದೂರ ಸಂಪರ್ಕ ವಲಯಕ್ಕೆ ಕಳೆದ 8 ವರ್ಷಗಳಲ್ಲಿ ಬಲ ತುಂಬಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತೀಯ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ – ಟ್ರಾಯ್‌ನ ರಜತ ಮಹೋತ್ಸವ ಸಮಾರಂಭದಲ್ಲಿ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದ ಪ್ರಧಾನಮಂತ್ರಿ, ಮುಂದಿನ ದಿನಗಳಲ್ಲಿ 5ಜಿ ತಂತ್ರಜ್ಞಾನ, ಭಾರತೀಯ ಆರ್ಥಿಕತೆಗೆ 450 ಶತಕೋಟಿ ಡಾಲರ್ ಕೊಡುಗೆ ನೀಡುವ ಅಂದಾಜು ಮಾಡಲಾಗಿದೆ. ಈ ದಶಕದ ಅಂತ್ಯಕ್ಕೆ ೬ಜಿ ಸೇವೆಗಳನ್ನು ಭಾರತ ಆರಂಭಿಸಲು ಶಕ್ತವಾಗಿದೆ ಎಂದರು.

5-ಜಿ ತಂತ್ರಜ್ಞಾನ ನವೋದ್ಯಮ ಬೆಳವಣಿಗೆಗೆ ಅಪಾರ ಅವಕಾಶವನ್ನು ಒದಗಿಸುತ್ತಿದೆ. 21ನೇ ಶತಮಾನದಲ್ಲಿ ದೂರಸಂಪರ್ಕವು ದೇಶದ ಪ್ರಗತಿ ವೇಗವನ್ನು ನಿರ್ಧರಿಸಲಿದೆ. 5-ಜಿ ಸೇವೆಯೂ ಆಡಳಿತ ಸುಧಾರಣೆ ಸುಗಮ ಜೀವನ ಮತ್ತು ವಾಣಿಜ್ಯ ವಹಿವಾಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ದೇಶೀಯ 5-ಜಿ ತಂತ್ರಜ್ಞಾನ, ಆತ್ಮನಿರ್ಭರ ಪರಿಕಲ್ಪನೆ ಸಾಕಾರಕ್ಕೆ ಮಹತ್ವದ ಹೆಜ್ಜೆಯಾಗಿದೆ. ಕಳೆದ 8 ವರ್ಷಗಳಲ್ಲಿ ದೂರ ಸಂಪರ್ಕ ಕ್ಷೇತ್ರಕ್ಕೆ ಸರ್ಕಾರ ಹೊಸ ಶಕ್ತಿ ತುಂಬಿದೆ. ಭಾರತೀಯ ದೂರ ಸಂಪರ್ಕ ವಲಯವು ಸ್ವಾವಲಂಬಿ ಮತ್ತು ಆರೋಗ್ಯಕರ ಸ್ಪರ್ಧೆ ವಾತಾವರಣ ನಿರ್ಮಾಣಕ್ಕೆ ಪೂರಕವಾಗಿದೆ ಎಂದರು.

ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್, ದೂರ ಸಂಪರ್ಕ ಮತ್ತು ಪ್ರಸಾರ ವಲಯದಲ್ಲಿ ಸೇವಾ ಕಂಪನಿಗಳು ಮತ್ತು ಗ್ರಾಹಕರ ಹಿತ ರಕ್ಷಣೆಗೆ ಟ್ರಾಯ್ ನಿರಂತರ ಕೆಲಸ ಮಾಡುತ್ತಿದೆ. ಕೋವಿಡ್ ಸಂಕಷ್ಟದ ವೇಳೆ ಶಾಲೆಗಳು ಮುಚ್ಚಿದ್ದ ಸಂದರ್ಭಗಳಲ್ಲಿ ಡಿಡಿ ಉಚಿತ ಡಿಶ್ ವಾಹಿನಿಗಳು ಲಕ್ಷಾಂತರ ವಿದ್ಯಾರ್ಥಿಗಳಿಗೆ ನೆರವಾಗಿವೆ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version