ದಿನದ ಸುದ್ದಿ

ಬೆಂಗಳೂರು-ಮೈಸೂರು ನಡುವಿನ 6 ಪಥದ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿ : ಸಚಿವ ನಿತಿನ್ ಗಡ್ಕರಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಬೆಂಗಳೂರು-ಮೈಸೂರು ನಡುವಿನ 6 ಪಥದ ಹೆದ್ದಾರಿ ಕಾಮಗಾರಿ ಸಾಕಷ್ಟು ಭರವಸೆಗಳೊಂದಿಗೆ ಪ್ರಗತಿಯಲ್ಲಿದೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಬೆಂಗಳೂರು-ಮೈಸೂರು ನಡುವಿನ 275ರ ರಾಷ್ಟ್ರೀಯ ಹೆದ್ದಾರಿಯಡಿ ಬೆಂಗಳೂರಿನ ದಕ್ಷಿಣ ವಲಯದ ಪಂಚಮುಖಿ ದೇವಸ್ಥಾನದಿಂದ ಪ್ರಾರಂಭವಾಗಿ ಈ ಮಾರ್ಗ ನಿಡಘಟ್ಟಕ್ಕೂ ಮುನ್ನ ಕೊನೆಗೊಳ್ಳಲಿದೆ. 21ನೇ ಶತಮಾನದ ನವಭಾರತದ ಅತ್ಯುತ್ತಮ ಮೂಲಸೌಕರ್ಯಗಳನ್ನು ನಿರ್ಮಿಸಲು ಗಮನ ಹರಿಸಿದೆ. ಭಾರತವನ್ನು ಸಮೃದ್ಧಿಯೊಂದಿಗೆ ಸಂಪರ್ಕಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಮಾರ್ಗ ಪ್ರವಾಸೋದ್ಯಮ ಮತ್ತು ಆರ್ಥಿಕ ಬೆಳವಣಿಗೆಗೆ ಅತ್ಯಂತ ಮಹತ್ವದ್ದಾಗಿದ್ದು, ಈ ಉದ್ದೇಶದಿಂದ ಈ ಹೆದ್ದಾರಿ ಬಿಡದಿ, ಚನ್ನಪಟ್ಟಣ, ರಾಮನಗರವನ್ನು ಹಾದುಹೋಗಲಿದೆ. ಏಷ್ಯಾದ ಅತಿದೊಡ್ಡ ಮತ್ತು ದೇಶದ ಏಕೈಕ ಅತಿದೊಡ್ಡ ರೇಷ್ಮೆ ಮಾರುಕಟ್ಟೆಯನ್ನು ಈ ಪ್ರದೇಶ ಹೊಂದಿದೆ ಎಂದಿದ್ದಾರೆ.

ಬಳಿಕ ಈ ಮಾರ್ಗ ಶ್ರೀರಂಗಪಟ್ಟಣ, ಮೈಸೂರು, ಊಟಿ, ಕೇರಳ ಮತ್ತು ಕೊಡಗು ನಡುವೆ ಸಂಪರ್ಕ ಕಲ್ಪಿಸಲಿದೆ. ಈ ಮಾರ್ಗ ಪೂರ್ಣಗೊಂಡರೆ, ಪ್ರಯಾಣದ ಅವಧಿ 90 ನಿಮಿಷಗಳಷ್ಟು ಕಡಿಮೆಯಾಗಲಿದ್ದು, ಇಂಧನ ಮಿತವ್ಯಯದ ಜೊತೆಗೆ ಇಂಗಾಲ ಹೊರಸೂಸುವಿಕೆ ಪ್ರಮಾಣವೂ ತಗ್ಗಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version