ದಿನದ ಸುದ್ದಿ

ಶಾಲೆಯಲ್ಲಿ 60 ಹಾವುಗಳ ಹಾವಳಿ..!

Published

on

ಸುದ್ದಿದಿನ ಡೆಸ್ಕ್ | ಶಾಲೆಯೊಂದರ ಅಡುಗೆ ಕೋಣೆಯೊಳಗೆ 60 ಹಾವುಗಳು ಇದ್ದಕ್ಕಿದ್ದಂತೆ ಬಂದು ಗಾಬರಿಗೊಳಿಸಿರುವ ಘಟನೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಪಾಂಗ್ರಾ ಬೋಖರೆ ಗ್ರಾಮದಲ್ಲಿ ನಡೆದಿದೆ.

ಮರಾಠವಾಡ ಪ್ರಾಂತ್ಯದಿಂದ 225 ಕಿ.ಮೀ ದೂರದಲ್ಲಿರುವ ಈ ಜಿಲ್ಲಾ ಪರಿಷತ್ ಶಾಲೆಯಲ್ಲಿ ಇಷ್ಟೊಂದು ಹಾವುಗಳು ಏಕಾಏಕಿ ಅಡುಗೆ ಕೋಣೆಗೆ ಬಂದಿವೆ. ಕೋಣೆಯಲ್ಲಿ ಕಟ್ಟಿಗೆಯನ್ನು ಸಂಗ್ರಹಿಸಿಟ್ಟಿದ್ದ ಮೂಲೆಯೊಂದರಲ್ಲಿ ‘ರಸೆಲ್ಸ್ ವೈಪರ್’ ಎಂಬ ಎರಡು ವಿಷಯುಕ್ತ ಹಾವುಗಳನ್ನು ಅಡುಗೆ ಸಹಾಯಕಿ ನೋಡಿದ್ದು, ನಂತರ ಆಕೆ ಇನ್ನಿತರ ಕಟ್ಟಿಗೆಗಳನ್ನು ಸರಿಸಿ ನೋಡಿದಾಗ ಇನ್ನುಳಿದ 58 ಹಾವುಗಳು ಕಂಡುಬಂದಿವೆ.

“ನಮ್ಮ ಶಾಲೆಯ ಅಡುಗೆ ಕೋಣೆಯಲ್ಲಿ ಈ ಹಾವುಗಳನ್ನು ನೋಡಿ ನಾವು ಭಯಭೀತರಾದೆವು. ನಂತರ ವಿಷಯ ತಿಳಿದು ಗ್ರಾಮಸ್ಥರು ದೊಣ್ಣೆಗಳೊಂದಿಗೆ ಹಾವುಗಳನ್ನು ಕೊಲ್ಲಲು ಬಂದರು. ಆದರೆ ನಾವು ಅವರನ್ನು ಹಾವುಗಳನ್ನು ಕೊಲ್ಲದಂತೆ ತಡೆದು, ಕೂಡಲೇ ಹಾವು ಹಿಡಿಯುವ ಪರಿಣತ ವಿಕ್ಕಿ ದಲಾಲ್ ಎಂಬಾತನನ್ನು ಕರೆಸಿ, ಅವುಗಳನ್ನು ಜೋಪಾನವಾಗಿ ಬಾಟಲಿಯೊಳಗೆ ಬಂಧಿಸಿಟ್ಟರು.” ಎಂದು ಶಾಲೆಯ ಮುಖ್ಯೋಪಾಧ್ಯಾಯ ತ್ರ್ಯಂಬಕ ಬೋಸ್ಲೆ ತಿಳಿಸಿದ್ದಾರೆ.

“ಹಾವು ಪರಿಣಿತ ವಿಕ್ಕಿದಲಾಲ್ ಹಿಡಿದ 60ಹಾವುಗಳನ್ನು ಅರಣ್ಯಾಧಿಕಾರಿ ಜೆ.ಡಿ. ಕಚ್ ವೆ ಅವರಿಗೆ ಕೊಟ್ಟೆವು.” ಎಂದು ಶಾಲೆಯ ಆಡಳಿರಗಾರ ಭೀಮ್ ರಾವ್ ಬೋಖರೆ ಹೇಳಿದ್ದಾರೆ.

ಆದರೆ ಈ 60 ವಿಷಯುಕ್ತ ಹಾವುಗಳು ಬಂದದ್ದಾದರೂ ಎಲ್ಲಿಂದ ಎಂಬುದು ಈಗಲೂ ನಿಗೂಢವಾಗಿದೆ ಎಂದು ಶಾಲೆಯವು ಸೋಜಿಗ ವ್ಯಕ್ತ ಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version