ದಿನದ ಸುದ್ದಿ
ರೇಪಿಸ್ಟ್ ಬಾಬಾ ಆಶ್ರಮದಿಂದ 600 ಹುಡುಗಿಯರು ನಾಪತ್ತೆ
ಸುದ್ದಿದಿನ ಡೆಸ್ಕ್: ಬಾಬಾ ರಾಮ್ ರಹೀಮ್ ಸಿಂಗ್‍ನ ಡೇರಾ ಸಚ್ಚಾ ಆಶ್ರಮದ ಕರ್ಮಕಾಂಡ ಬೆಳಕಿಗೆ ಬಂದ ಬೆನ್ನ ಹಿಂದೆಯೇ ರಾಜಸ್ಥನದ ಆಳ್ವಾಸ್ ಆಶ್ರಮದ ರೇಪಿಸ್ಟ್ ದಾತಿ ಮಹರಾಜ್ ಸ್ವಾಮೀಜಿಯ ಮುಖವಾಡ ಕಳಚಿಬಿದ್ದಿದೆ.
25 ವರ್ಷದ ಯುವತಿಯೊಬ್ಬರು ದಾತಿ ಸ್ವಾಮೀಜಿ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದು, ಈ ಘಟನೆ ನಡೆದ ಎರಡೇ ದಿನಗಳಲ್ಲಿ ಬಾಬಾ ಆಶ್ರಮದದಲ್ಲಿದ್ದ 600 ಹುಡುಗಿಯರು ನಾಪತ್ತೆಯಾಗಿದ್ದಾರೆ.
ಈ ಎಲ್ಲ ಹುಡುಗಿಯರು ತಲೆ ಮರೆಸಿಕೊಂಡಿದ್ದಾರೆಯೋ ಅಥವಾ ಅವರು ರಜೆ ಮಲೆ ತಮ್ಮ ಮನೆಗಳಿಗೆ ತೆರಳಿದ್ದಾರೆಯೇ ಎಂಬುದು ಇನ್ನು ತಿಳಿದುಬರಬೇಕಿದೆ. ವಿಶೇಷ ಎಂದರೆ ರೇಪ್ ಆರೋಪಕ್ಕೆ ಒಳಗಾಗಿರುವ ದಾತಿ ಸ್ವಾಮೀಜಿಯೂ ಕೂಡ ತಲೆಮರೆಸಿಕೊಂಡಿದ್ದಾನೆ.
ದಾತಿ ಸ್ವಾಮೀಜಿ ಹಾಗೂ ಆತನ ಇಬ್ಬರು ಶಿಷ್ಯಂದಿರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅತ್ಯಾಚಾರ ಸಂತ್ರಸ್ತೆ ತನ್ನ ದೂರಿನಲ್ಲಿತಿಳಿಸಿದ್ದಾಳೆ.
“ನಾನು ಸ್ವಮೀಜಿಯ ಶಿಷ್ಯೆಯಾಗಿದ್ದೆ. ಬಾಬಾ ಬಳಿ ಕರೆದುಕೊಂಡು ಹೋಗುವುದಾಗಿ ಹೇಳಿದ ಆತನ ಶಿಷ್ಯಂದಿರು ಸ್ವಾಮೀಜಿ ಇದ್ದ ಕೋಣೆಗೆ ನನ್ನನ್ನು ಬಲವಂತವಾಗಿ ತಳ್ಳಿದರು. ಅಲ್ಲಿ ಸ್ವಾಮೀಜಿ ಜತೆ ಬಹಳಷ್ಟು ಮಹಿಳೆಯರಿದ್ದರು. ಮೊದಲಿಗೆ ನನ್ನ ಮೈ ಸ್ಪರ್ಶಿಸಿ ಕಾಮ ಪ್ರಚೋದನೆಗೆ ಸ್ವಾಮೀಜಿ ಮುಂದಾದ ನಾನು ಒಲ್ಲೆ ಎಂದಾಗ ನನ್ನ ಮೇಲೆ ಅತ್ಯಾಚಾರ ಎಸಗಿದ. ಸ್ವಾಮೀಜಿ ನಂತರ ಆತನ ಇಬ್ಬರು ಶಿಷ್ಯಂದಿರೂ ಕೂಡ ರೇಪ್ ಮಾಡಿದರು,’ ಎಂದು ಯುವತಿಯು ವಿವರಿಸಿದ್ದಾಳೆ.
ದಿಲ್ಲಿ ಮತ್ತು ರಾಜಸ್ಥಾನದ ಆಶ್ರಮಗಳಲ್ಲಿ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ ಬಾಬಾ ಆಶ್ರಮದಲ್ಲಿ ಎರಡು ವರ್ಷಗಳ ಹಿಂದೆ ಈ ಯುವತಿ ತಪ್ಪಿಸಿಕೊಂಡಿದ್ದಳು. ಆ ನಂತರ ಖಿನ್ನತೆಗೆ ಒಳಗಾಗಿದ್ದಳು. ತನ್ನ ಮೇಲೆ ಅತ್ಯಾಚಾರ ನಡೆದಿರುವ ವಿಷಯವನ್ನು ಪೋಷಕರಿಗೆ ತಿಳಿಸದಾಗ ಅವರು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಷಯ ಕುರಿತು ಪ್ರತಿಕ್ರಿಯಿಸಿರುವ ದಾತಿ ಸ್ವಾಮೀಜಿ ಆರೋಪ ಎಸಗಿರುವ ಯುವತಿಯು ತನ್ನ ಮಗಳಂತೆ ಎಂದು ಸ್ಪಷ್ಟನೆ ನೀಡಿದ್ದಾನೆ. ತಾನು ಯಾವುದೇ ಅಪರಾಧ ಎಸಗಿಲ್ಲ. ಪೊಲೀಸರು ನಡೆಸುವ ಎಲ್ಲ ತನಿಖೆಗಳಿಗೂ ಸಹಕರಿಸುತ್ತೇನೆ. ಈ ಆರೋಪಕ್ಕಾಗಿ ತನ್ನನ್ನು ಗಲ್ಲಿಗೇರಿಸಿದರೂ ದೂರು ನೀಡಿದವರನ್ನು ದೂಶಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದ್ದಾನೆ.