ದಿನದ ಸುದ್ದಿ
ದಾವಣಗೆರೆ ಜಿಲ್ಲೆಯಲ್ಲಿಂದು 672 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ..!
ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿಂದು 672 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, 273 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ.
ದಾವಣಗೆರೆಯಲ್ಲಿ365, ಹರಿಹರ 133, ಜಗಳೂರು 24, ಚನ್ನಗಿರಿ 71, ಹೊನ್ನಾಳಿ 63, ಹೊರ ಜಿಲ್ಲೆಯಿಂದ ಬಂದ 63 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 28, 394 ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ | ದಾವಣಗೆರೆ | ಆಕ್ಸಿಜನ್ ಉಸ್ತುವಾರಿ ತಂಡಗಳ ರಚನೆ ;ಖಾಸಗಿ ಆರೋಗ್ಯ ಸೇವೆ ಪ್ಯಾಕೇಜ್ ದರ ಪರಿಷ್ಕರಣೆ : ಜಿಲ್ಲಾಧಿಕಾರಿ
ಇದುವರೆಗೆ 25, 171 ಮಂದಿ ಡಿಸ್ಟಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 293 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2930 ಸಕ್ರಿಯ ಕೇಸ್ ಗಳಿವೆ. ಜಗಳೂರಿನ 44 ವರ್ಷದ ಮಹಿಳೆ, ಹೊಳೆ ಸಿರಿಗೆರೆಯ 60 ವರ್ಷದ ಮಹಿಳೆ, ಪಿಜೆ ಬಡಾವಣೆಯ 64 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243