ದಿನದ ಸುದ್ದಿ
ಲೋಕಸಭೆ ಚುನಾವಣೆ | ಆರನೇ ಹಂತ ; ಕಣದಲ್ಲಿರುವ ಅಭ್ಯರ್ಥಿಗಳೆಷ್ಟು ಗೊತ್ತಾ..?
ಸುದ್ದಿದಿನ ಡೆಸ್ಕ್ : ಲೋಕಸಭೆ ಚುನಾವಣೆಯ ಆರನೇ ಹಂತಕ್ಕಾಗಿ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 889 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ಇವರಲ್ಲಿ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದಲ್ಲಿ ಮುಂದೂಡಲ್ಪಟ್ಟ ಚುನಾವಣೆಗೆ ಸ್ಪರ್ಧಿಸುತ್ತಿರುವ 20 ಅಭ್ಯರ್ಥಿಗಳು ಒಳಗೊಂಡಿದ್ದಾರೆ. ಈ ಹಂತದಲ್ಲಿ ಚುನಾವಣೆ ನಡೆಯಲಿರುವ 58 ಕ್ಷೇತ್ರಗಳಿಗೆ ಒಟ್ಟು 1 ಸಾವಿರದ 978 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಂತಕ್ಕೆ ನಾಮಪತ್ರ ಸಲ್ಲಿಸಲು ಮೇ 6 ಕೊನೆಯ ದಿನವಾಗಿತ್ತು. ಸಲ್ಲಿಕೆಯಾದ ಎಲ್ಲಾ ನಾಮಪತ್ರಗಳ ಪರಿಶೀಲನೆಯ ನಂತರ 900 ನಾಮಪತ್ರಗಳು ಕ್ರಮಬದ್ಧವಾಗಿವೆ. ಆರನೇ ಹಂತಕ್ಕೆ, ಉತ್ತರ ಪ್ರದೇಶದ 14 ಲೋಕಸಭಾ ಕ್ಷೇತ್ರಗಳಿಂದ ಗರಿಷ್ಠ 470 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಹರಿಯಾಣದ 10 ಸ್ಥಾನಗಳಿಂದ 370 ನಾಮಪತ್ರ ಸಲ್ಲಿಕೆಯಾಗಿದ್ದವು. ಜಾರ್ಖಂಡ್‌ನ ರಾಂಚಿ ಸಂಸದೀಯ ಕ್ಷೇತ್ರದಿಂದ ಗರಿಷ್ಠ 70 ನಾಮಪತ್ರಗಳನ್ನು ಸ್ವೀಕರಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243