ದಿನದ ಸುದ್ದಿ

75ನೇ ವರ್ಷದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ಪರ್ಧೆ | ಗಮನ ಸೆಳೆದ ‘ಭಾರತ ಮಾತಾಕಿ ಜೈ ಬೀದಿನಾಟಕ’- ರಂಗೋಲಿಯಲ್ಲಿ ಜೀವತಳೆದ ಮೈಲಾರ ಮಹಾದೇವಪ್ಪ

Published

on

ಸುದ್ದಿದಿನ,ಹಾವೇರಿ: 75ನೇ ವರ್ಷದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ ಆಯೋಜಿಸಿದ ‘ಭಾರತ ಮಾತಾಕಿ ಜೈ’ ಬೀದಿನಾಟಕ ಹಾಗೂ ರಂಗೋಲಿ ಸ್ಪರ್ಧೆ, ದೇಶ ಭಕ್ತಿ ಗೀತೆಗಳ ನೃತ್ಯ ಕಾರ್ಯಕ್ರಮ ಎಲ್ಲರ ಗಮನ ಸೆಳೆದವು.

ನಗರದ ಹುತಾತ್ಮ ಮೈಲಾರ ಮಹಾದೇವಪ್ಪನವರ ಸಾಂಸ್ಕøತಿಕ ಭವನದಲ್ಲಿ ಮಂಗಳವಾರ ಜರುಗಿದ 75ನೇ ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸೈಕಲ್ ರ್ಯಾಲಿ, ಬೀದಿನಾಟಕ, ರಂಗೋಲಿ ಸ್ಪರ್ಧೆ, ದೇಶಭಕ್ತಿ ಗೀತೆ ನೃತ್ಯ, ದೇಶಭಕ್ತಿಗೀತೆಗಳ ಗಾಯನ, ಚಿತ್ರಕಲಾ ಸ್ಪರ್ಧೆ, ಸಾವಯವ ಕೃಷಿ ಪ್ರದರ್ಶನ ಹಾಗೂ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ ಹಾಗೂ ಯೋಗ ಪ್ರದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಸಾಹಿತಿ ಸತೀಶ ಕುಲಕರ್ಣಿ ಅವರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ಪ್ರದರ್ಶಿಸಲ್ಪಟ್ಟ ‘ಭಾರತ ಮಾತಾಕಿ ಜೈ’ ಬೀದಿ ನಾಟಕ ಜನಸಾಮಾನ್ಯರಲ್ಲಿ ದೇಶಪ್ರೇಮದ ಕಿಚ್ಚನ್ನು ಬಿಂಬಿಸುವಲ್ಲಿ ಯಶಸ್ವಿಯಾಯಿತು. ಸಾಹಿತಿ ಕಲಾವಿದರ ಬಳಗದ ತಂಡದ ಕಲಾವಿದರ ಅಭಿನಯ ನೋಡುಗರನ್ನು ಸ್ವಾತಂತ್ರ್ಯ ಹೋರಾಟದ ಸಂದರ್ಭದ ಕಾಲಘಟ್ಟಕ್ಕೆ ಕರೆದೊಯ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಇದನ್ನೂ ಓದಿ | ಹೋಳಿ ಸೀಮಿತ ಆಚರಣೆಗೆ ನಿರ್ಧಾರ : ಬಣ್ಣದ ಬಂಡಿ ಮೆರವಣಿಗೆ, ರೇನ್‍ಡ್ಯಾನ್ಸ್ ನಿಷೇಧ

ಸಾಂಸ್ಕøತಿಕ ಭವನದ ಮಹಡಿಯ ಸಭಾಂಗಣದಲ್ಲಿ ಆಯೋಜಿಸಲಾದ ರಂಗೋಲಿ ಸ್ಪರ್ಧೆಯಲ್ಲಿ ಬಿಡಿಸಿದ ವಿವಿಧ ಚಿತ್ತಾರದ ರಂಗೋಲಿಗಳು ಎಲ್ಲರ ಗಮನ ಸೆಳೆದವು. ವರ್ಣಮಯ ರಂಗೋಲಿಯ ಕೈಚಳಕದಲ್ಲಿ ಹುತಾತ್ಮ ಮೈಲಾರ ಮಹಾದೇವಪ್ಪ ಚಿತ್ರ ಮರುಜೀವ ಪಡೆದಂತೆ ಎಲ್ಲರ ಗಮನ ಸೆಳೆಯಿತು. ಇದರೊಂದಿಗೆ ತ್ರಿವರ್ಣಧ್ವಜ, ಒಂದೇ ಮಾತರಂ, ಜೈಹಿಂದ ಸಂದೇಶಗಳನ್ನು ಹೊತ್ತ ವಿವಿಧ ವರ್ಣಮಯ ರಂಗೋಲಿಗಳು ಗಮನ ಸೆಳೆದವು.

ಮೈಲಾರ ಮಹದೇವಪ್ಪ

ಚಿತ್ರಕಲಾವಿದ ಜೆ.ಜೆ.ಮೆಹಂದಳೆ ಅವರ ಕೈಚಳಕದಿಂದ ಮೂಡಿಬಂದ ಸ್ವಾತಂತ್ರ್ಯ ಹೋರಾಟಗಾರರ ಛಾಯಾಚಿತ್ರ ಪ್ರದರ್ಶನ ಹಾಗೂ ದೇಶಭಕ್ತಿಗೀತೆ ಗಾಯನ, ನೃತ್ಯ ಹಾಗೂ ಯೋಗ ಪ್ರದರ್ಶನ ಎಲ್ಲ ಮನಸೂರೆಗೊಂಡಿತು.
ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿದ ಹಣ್ಣುಹಂಪಲು,ತರಕಾರಿ ಹಾಗೂ ಕೃಷಿ ಇಲಾಖೆಯಿಂದ ಸಾವಯವ ಉತ್ಪನ್ನಗಳ ಪ್ರದರ್ಶನ ಆಯೋಜಿಸಲಾಗಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version