ದಿನದ ಸುದ್ದಿ
ಕೇರಳಕ್ಕೆ ನೆರವು ನೀಡಿದ್ದ ಬಾಲಕಿಗೆ ಸಿಕ್ತು ರಿವಾರ್ಡ್
ಸುದ್ದಿದಿನ ಡೆಸ್ಕ್: ಮಹಾಮಳೆಗೆ ತತ್ತರಿಸಿ ಹೋಗುರುವ ಕೇರಳಕ್ಕೆ ತನ್ನ ಪಾಕೆಟ್ ಮನಿಯನ್ನು ನೀಡಿದ್ದ ಎಂಟು ವರ್ಷದ ಬಾಲಕಿಯೊಬ್ಬಳಿಗೆ ಅನಿರೀಕ್ಷಿತ ಬಹುಮಾನವೊಂದು ಸಿಕ್ಕಿದೆ. ತಮುಳುನಾಡಿನ ಕೆಕೆ ರೋಡ್.ನ ವಿಲ್ಲುಪುರದ ಷಣ್ಮುಖನಾಥನ್ ಮತ್ತು ಲಲಿತಾ ದಂಪತಿ ಪುತ್ರಿ, ಎರಡನೇ ತರಗತಿ ಓದುತ್ತಿರುವ ಬಾಲಕಿ ಎಸ್. ಅನುಪ್ರಿಯಾ ಕಳೆದ ನಾಲ್ಕು ವರ್ಷಗಳಿಂದ ಪಾಕೆಟ್ ಮನಿಯನ್ನು ಸೈಕಲ್ ಖರೀದಿಸಲು ಕೊಡಿಟ್ಟಿದ್ದಳು.
ಇದನ್ನು ಕೇರಳದ ಪ್ರವಾಹದಿಂದ ಮನೆ ಮಠ ಕಳೆದುಕೊಂಡಿರುವ ಜನರಿಗೆ ಅನುಕೂಲವಾಗಲೆಂದು ಆರ್ಥಿಕ ಸಹಾಯವಾಗಿ ನೀಡಿದ್ದನ್ನು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಳು. ಇದನ್ನು ಗಮನಿಸಿದ ಹಿರೋ ಸೈಕಲ್ ಕಂಪನಿಯವರು ಬಾಲಕಿಯ ಕಾರ್ಯವನ್ನು ಶ್ಲಾಘಿಸಿ ರಿಟ್ವಿಟ್ ಮಾಡಿದ್ದರು. ಅನುಪ್ರಿಯಾ, ನಿನಗೆ ಪ್ರತಿ ವರ್ಷವೂ ಒಂದು ಸೈಕಲ್ ನೀಡುತ್ತೇವೆ. ನಿನ್ನ ದೂರವಾಣಿ ಸಂಖ್ಯೆ ನೀಡುವಂತೆ ಹಿರೋ ಸೈಕಲ್ ಕಂಪನಿಯ ಚೇರ್ಮನ್, ಎಂಡಿ ಪಂಕಜ್ ಎಂ. ಮುಂಜಾಲ್ ತಿಳಿಸಿದ್ದಾರೆ. ವಿಲ್ಲುಪುರದ ಹಿರೋ ಸೈಕಲ್ ಅಂಗಡಿಯಲ್ಲಿ ಪೋಷಕರೊಂದಿಗೆ ತೆರಳಿ ನೀಲಿ ಬಣ್ಣದ ಹಿರೋ ಸ್ಪ್ರಂಟ್ 20ಟಿ ಸೈಕಲ್ ಉಡುಗೊರೆಯಾಗಿ ಪಡೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401