ದಿನದ ಸುದ್ದಿ
ಅವಧಿ ಮೀರಿದ 9 ಲಕ್ಷ ಮೌಲ್ಯದ ಬಿಯರ್ ದಾಸ್ತಾನು ನಿಯಾನುಸಾರ ನಾಶ
ಸುದ್ದಿದಿನ,ದಾವಣಗೆರೆ : ದಾವಣಗೆರೆಯ ಕೆಎಸ್‍ಬಿಸಿಎಲ್ ಲಿಕ್ಕರ್ ಡಿಪೋ ಇಲ್ಲಿ ಮಾರಟವಾಗದೇ ಬಾಕಿ ಉಳಿದಿರುವ ಅವಧಿ ಮೀರಿದ, ಮಾನವ ಸೇವನೆಗೆ ಯೋಗ್ಯವಲ್ಲದ ವಿವಿಧ ಮಾದರಿ ಹಾಗೂ ವಿವಿಧ ಪ್ರಮಾಣದ ಒಟ್ಟು 4,564.390 ಲೀಟರ್ ಬಿಯರ್ ದಾಸ್ತಾನನ್ನು ಮಾ.9 ರಂದು ಅಬಕಾರಿ ಅಧಿಕಾರಿಗಳು ನಿಯಮಾನುಸಾರ ನಾಶಪಡಿಸಿದರು.
ಯು.ಬಿ.ಎಕ್ಸ್‍ಪೊರ್ಟ್ ಪ್ರೀಮಿಯಮ್ ಲಾರ್ಜರ್ ಬಿಯರ್ 650ಎಂಲ್*284 ಪೆಟ್ಟಿಗೆ 08 ಬಾಟಲ್(2,220.400 ಲೀ), ಕಿಂಗ್‍ಫಿಷರ್ ಲಾರ್ಜರ್ ಬಿಯರ್-ಕ್ಯಾನ್ 330ಎಂ*295 ಪೆಟ್ಟಿಗೆ 23 ಬಾಟಲ್ (2.343.990 ಲೀ) ಸೇರಿ ಒಟ್ಟು 579 ಪೆಟ್ಟಿಗೆ 31 ಬಾಟಲ್(4,564.390 ಲೀ) ಬಿಯರ್ ದಾಸ್ತಾನನ್ನು ಮಾ.9 ರ ಮಧ್ಯಾಹ್ನ ನಾಶಮಾಡಲಾಯಿತು.
ಇದನ್ನೂ ಓದಿ | ದಾವಣಗೆರೆ | ಪಾಲಿಕೆ ಉಪಚುನಾವಣೆ ವೇಳಾಪಟ್ಟಿ ಪ್ರಕಟ : 20 ಮತ್ತು 22 ನೇ ವಾರ್ಡಿಗೆ ಉಪ ಚುನಾವಣೆ
ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಬಿ.ಶಿವಪ್ರಸಾದ್, ದಾವಣಗೆರೆ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಕೆ.ಎಲ್.ನಾಗರಾಜ್, ಅಬಕಾರಿ ನಿರೀಕ್ಷಕ ಕಲ್ಲೇಶಪ್ಪ, ಕೆಎಸ್‍ಬಿಸಿಎಲ್ ಡಿಪೋದ ವ್ಯವಸ್ಥಾಪಕರು ಹಾಗೂ ಪಂಚರ ಸಮಕ್ಷಮದಲ್ಲಿ ಡಿಪೋ ಆವರಣದಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ, ವಿಡಿಯೋ ಚಿತ್ರೀಕರಣ ಮಾಡುವ ಮೂಲಕ ನಾಶಪಡಿಸಿದರು. ಈ ಬಿಯರ್ ದಾಸ್ತಾನಿನ ಅಂದಾಜು ಮೌಲ್ಯ ರೂ.9,30,699 ಆಗಿರುತ್ತದೆ ಎಂದು ಅಬಕಾರಿ ಉಪ ಆಯುಕ್ತರಾದ ಬಿ.ಶಿವಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243