ದಿನದ ಸುದ್ದಿ

ಅಚ್ಚರಿ: 96 ವರ್ಷದ ಅಜ್ಜಿಯೊಬ್ಬರು 4ನೇ ತರಗತಿ ಪರೀಕ್ಷೆ ಬರೆದ್ರು !

Published

on

ಸುದ್ದಿದಿನ ಡೆಸ್ಕ್: ಕೇರಳದಲ್ಲಿ 96 ವರ್ಷದ ಅಜ್ಜಿಯೊಬ್ಬರು 4ನೇ ತರಗತಿ ಪರೀಕ್ಷೆ ಬರೆದು ಅಚ್ಚರಿ ಮೂಡಿಸಿದ್ದಾರೆ.

ಇಂದಿನ ಯುವ ಸಮುದಾಯದಲ್ಲಿ ಓದಿ ಕುರಿತು ತಾತ್ಸಾರ ಹೊಂದಿರುವುದನ್ನು ನಾವು ಕಂಡಿದ್ದೇವೆ. ಆದರೆ ಕೇರಳದ ಈ ಅಜ್ಜಿಯ ಉತ್ಸಾಹ ಬೆರಗು ಮೂಡಿಸಿದೆ.
ಕೇರಳದ ವಾಸಿಯಾಗಿರುವ 96 ವರ್ಷದ ಕಾರ್ತಿಯಾಯಿನಿ ಅಮ್ಮಾ ಎಂಬವರು 4ನೇ ತರಗತಿಯ ಪರೀಕ್ಷೆ ಬರೆದಿದ್ದಾರೆ. ತಮ್ಮ ಹಿರಿಯ ವಯಸ್ಸಿನಲ್ಲಿ ಪರೀಕ್ಷೆಗೆ ಕೂತಿರುವುದು ಇದೇ ಮೊದಲಾಗಿದೆ. ಇವರ ಈ ಉತ್ಸಾಹವನ್ನು ನೋಡಿ ಮಹಿಂದ್ರಾ ಸಂಸ್ಥೆಯ ಮುಖ್ಯಸ್ಥರಾದ ಆನಂದ್ ಮಹಿಂದ್ರಾ ಅವರು ಟ್ವೀಟ್ ಮಾಡಿ, ಇವರು ನನ್ನ ರೋಲ್ ಮಾಡೆಲ್. ಏನಾದರೂ ಮಾಡಬೇಕೆಂದು ಉತ್ಸಾಹವಿದ್ದರೆ ಸಾಕು ವಯಸ್ಸು ಯಾವುದೇ ಲೆಕ್ಕಕ್ಕಿಲ್ಲ ಎಂದು ಅಮ್ಮಾ ತೋರಿಸಿಕೊಟ್ಟಿದ್ದಾರೆ ಎಂದು ಪ್ರಶಂಸಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version