ದಿನದ ಸುದ್ದಿ

ಹಾಸ್ಟೆಲ್ ಒಂದರಲ್ಲಿ ‌ಕ್ವಾರಂಟೈನ್ ಮಾಡಲಾಗಿದ್ದ ಯುವಕ ನೇಣಿಗೆ ಶರಣು

Published

on

ಸುದ್ದಿದಿನ,ಬೀದರ್: ಕ್ವಾರಂಟೈನ್‍ನಲ್ಲಿದ್ದ ಯುವಕನೊಬ್ಬ ಇಂದು ಬೆಳಗ್ಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪ್ಪಳ್ಳಿ ಗ್ರಾಮದಲ್ಲಿ ನಡೆದಿದೆ.

ಸಚಿನ್ ಜಾದವ್ (21) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಈಗಾಗಲೇ ಯುವಕ ಜಾದವ್‍ಗೆ ಮದುವೆಯಾಗಿದ್ದು, ಎಂಟು ದಿನಗಳ ಹಿಂದೆ ಮುಂಬೈನಿಂದ ಪತ್ನಿಯ ಜೊತೆ ಜಿಲ್ಲೆಗೆ ಬಂದಿದ್ದನು.

ಮುಂಬೈನಿಂದ ಬಂದ ಕಾರಣ ದಂಪತಿಯನ್ನು ಔರಾದ್ ತಾಲೂಕಿನ ವನಮಾರಪ್ಪಳ್ಳಿ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ರಾತ್ರಿ ಪತ್ನಿಯ ಜೊತೆಗಿದ್ದ ಜಾದವ್ ಇಂದು ಬೆಳಗಿನ ಜಾವ ನೇಣು ಬಿಗಿದುಕೊಂಡು ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಾಹಿತಿ ತಿಳಿದು ಸ್ಥಳಕ್ಕೆ ಔರಾದ್ ಪೊಲೀಸರು ಭೇಟಿ ಪರಿಶೀಲನೆ ಮಾಡುತ್ತಿದ್ದಾರೆ. ಆದರೆ ಜಾದವ್ ಆತ್ಮಹತ್ಯೆಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version