ಸಿನಿ ಸುದ್ದಿ

ಬಿಲ್ಡಿಂಗ್ ನಿಂದ ಹಾರಿ ಸಿನಿಮಾ ಸಾಹಿತಿ ಆತ್ಮಹತ್ಯೆ

Published

on

ಸುದ್ದಿದಿನ ಡೆಸ್ಕ್: ನಾನಾ ಪಾಟೇಕರ್ ಅಭಿನಯದ ಅಬ್ ತಕ್ ಚಪ್ಪನ್ ಸಿನಿಮಾಗೆ ಸಾಹಿತ್ಯ ಬರೆದು ಸೆಲಬ್ರಿಟಿಯಾಗಿ ಮಿಂಚಿದ್ದ ರವಿಶಂಕರ್ ಅಲೋಕ್ ಬಿಲ್ಡಿಂಗ್ ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಂಬಯಿನ ಅಂಧೇರಿಯ ಸೆವೆನ್ ಬಂಗ್ಲೋಸ್ ನಲ್ಲಿ ವಾಸವಿದ್ದ ಅವರು ಬುಧವಾರ ರಾತ್ರಿ 2 ಗಂಟೆಗೆ ತಮ್ಮ ಬಿಲ್ಡಿಂಗ್ ಮೇಲಿಂದ ಬಿದ್ದು ಸಾವಿಗೀಡಾಗಿದ್ದಾರೆ.

ಸಿನಿಮಾ ಸಾಹಿತಿಯಾಗಬೇಕೆಂಬ ಉದ್ದೇಶದಿಂದ ಸಿನಿಮಾ ಲೋಕಕ್ಕೆ ಕಾಲಿಟ್ಟ ಅಲೋಕ್ ತಾವು ಒಂದು ಸಿನಿಮಾ ನಿರ್ದೇಶಿಸುವ ಕನಸನ್ನೂ ಕಂಡಿದ್ದರು. ಕಳೆದ ಒಂದು ವರ್ಷಗಳಿಂದ ಯಾವುದೇ ಅವಕಾಶಗಳು ಸಿಗದ ಹಿನ್ನೆಲೆಯಲ್ಲಿ ಖಿನ್ನತೆಗೆ ಒಳಗಾಗಿದ್ದ ಅವರು ಬಿಲ್ಡಿಂಗ್ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿನಿಮಾ ಲೋಕದ ಕ್ರೂರತೆ

ಅಲೋಕ್ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದು, ಘಟನೆ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ. ನಿಧಾನವಾಗಿ ಈ ಚರ್ಚೆಯು ಮುಂಬಯಿ ಸಿನಿಮಾ ಲೋಕದ ಕ್ರೂರತೆಯ ಬಗ್ಗೆಯೂ ತಿರುಗುತ್ತಿದೆ.

ಅಲೋಕ್ ಒಬ್ಬ ಪ್ರತಿಭಾನ್ವಿತ ಬರಹಗಾರ ಹೊಸ ಪ್ರತಿಭೆಗಳು ಬೆಳಕಿಗೆ ಬರಬೇಕು. ಆದರೆ, ಹೀಗೆ ಅರ್ಧದಲ್ಲೇ ಗುಡ್ ಬೈ ಹೇಳುವುದನ್ನು ನೋಡಿದರೆ ಮುಂಬಯಿ ಸಿನಿಮಾ ಲೋಕ ಎಷ್ಟು ಕ್ರೂರವಾಗಿದೆ ಎಂಬ ಒಂದು ಅಂದಾಜು ಸಿಗುತ್ತದೆ ಎಂದು ಕೆಲವು ಫೇಸ್‌ಬುಕ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಅಲೋಕ್‌ನ ಸಾವು ಭವಿಷ್ಯದಲ್ಲಿ ಸಿನಿಮಾ ತಾರೆಗಳಾಗಿ ಮಿಂಚಬೇಕೆನ್ನುವವರಿಗೆ ಒಂದು ಉತ್ತಮ ಉದಾಹರಣೆ ಎಂದೂ ಕೆಲವರು ಕಮೆಂಟ್ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9985715401

Leave a Reply

Your email address will not be published. Required fields are marked *

Trending

Exit mobile version