ಕ್ರೀಡೆ
ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದ ಹುಡುಗಿಗೆ ಸಿಗಲಿವೆ ವಿಶೇಷ ಶೂ !
ಸುದ್ದಿದಿನ ಡೆಸ್ಕ್: ಇಂಡೋನೇಷಿಯಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಓಟಗಾರ್ತಿ ಸ್ವಪ್ನ ಬರ್ಮನ್ ಅವರಿಗೆ ವಿಶೇಷ ಶೂಗಳು ಸಿಗಲಿವೆ !
ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟ ಓಟಗಾರ್ತಿ ಸ್ವಪ್ನ ಬರ್ಮನ್ ಅವರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಅಡಿಡಾಸ್ ಶೂ ನೀಡಲು ಭಾರತೀಯ ಕ್ರೀಡಾ ಪ್ರಾಧಿಕಾರ ಒಪ್ಪಿಕೊಂಡಿದೆ.
ಸ್ವಪ್ನ ತಮ್ಮ ಎರಡೂ ಕಾಲುಗಳಲ್ಲಿ ಆರು ಬೆರಳುಗಳನ್ನು ಹೊಂದಿದ್ದು, ಅವರಿಗಾಗಿಯೇ ವಿಶೇಷ ಶೂ ನಿರ್ಮಿಸಲು ಅಡಿಡಾಸ್ ಒಪ್ಪಿಕೊಂಡಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಧಾನ ನಿರ್ದೇಶಕಿ ನೀಲಮ್ ಕಪೂರ್ ಹೇಳಿದ್ದಾರೆ.