ದಿನದ ಸುದ್ದಿ

ಕುಡಿದು ವಾಹನದ ಕೆಳಗೆ ಮಲಗಿದ್ದ ವ್ಯಕ್ತಿ : ವಾಹನ ಹರಿದು ಸಾವು

Published

on

ಸುದ್ದಿದಿನ, ಬೆಂಗಳೂರು : ಕುಡಿದು ವಾಹನ ಕೆಳಗೆ ನಿದ್ರೆಗೆ ಜಾರಿದ್ದ ವ್ಯಕ್ತಿ ಮೇಲೆ ಹರಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ಕಳೆದ ರಾತ್ರಿ ಮೀನಾಕ್ಷಿ ಲೇಔಟ್ ಬಿಜಿ ರಸ್ತೆಯಲ್ಲಿ ನಡೆದಿದೆ.

ಸುಬ್ರಮಣಿ ಎಂಬಾತ ಬೊಲೆರೋ ವಾಹನದ ಕೆಳಗೆ ಮಲಗಿದ್ದ , ಇದನ್ನು ಗಮನಿಸದೆ ವಾಹನ ತೆಗೆದಾಗ ಹಿಂಬದಿ ಚಕ್ರ ಹರಿದು ಸುಬ್ರಮಣಿ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಅಂಧ್ರ ಮೂಲದ ಈ ವ್ಯಕ್ತಿ ಕೇಬಲ್ ಎಳೆಯುವ ಕೆಲಸ ಮಾಡುತ್ತಿದ್ದ. ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version