ದಿನದ ಸುದ್ದಿ

ಸೆಕ್ಸಿಗೆ ಸಹಕರಿಸದಿದ್ದಕ್ಕೆ ಮಹಿಳೆಗೆ ಚಾಕು ಇರಿದ ಕಾಮಾಂಧ..!

Published

on

ಸುದ್ದಿದಿನ, ಬೆಂಗಳೂರು : ಸೆಕ್ಸಿಗೆ ಸಹಕರಿಸಿಲ್ಲ ಅಂತ ಮಹಿಳೆಯೊಬ್ಬಳಿಗೆ ರಾಘವೇಂದ್ರ ಶಾಸ್ತ್ರಿ ಎಂಬುವ ವ್ಯಕ್ತಿ ಆಕೆಯ ಮೈ ತುಂಬಾ ಚಾಕು ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಆರ್.ಆರ್. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಿರಿಷಾ ಎಂಬಾಕರ ಚಾಕು ಇರಿತಕ್ಕೆ ಒಳಗಾದ ಮಹಿಳೆಯು ಈತನೊಂದಿಗೆ ಇಬ್ಬರೂ ಹಲವು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು.ಇತ್ತೀಚೀಗೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಸಿಟ್ಟಿಗೆದ್ದ ರಾಘವೇಂದ್ರ ಶಾಸ್ತ್ರೀ ಸಿರಿಷಾ ಮೈ ತುಂಬಾ ಚಾಕು ಹಾಕಿದ್ದ.ಇಬ್ಬರು ಮುತ್ಯಾಲನಗರದಲ್ಲಿ ಅಕ್ಕ ಪಕ್ಕ ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡ್ತಿದ್ರು.

ಸಿರಿಷಾ ಮತ್ತು ರಾಘವೇಂದ್ರ ಶಾಸ್ತ್ರೀ ಮೂಲತಹ ಆಂಧ್ರ ಕಡೆಯವರು. ಆರೋಪಿ ರಾಘವೇಂದ್ರ ಶಾಸ್ತ್ರೀಯನ್ನ ರಾಜರಾಜೇಶ್ವರಿ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಸಿರಿಷಾ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version