ದಿನದ ಸುದ್ದಿ
ಬೆಂಗಳೂರು – ಮಂಗಳೂರು ನಡುವೆ ಇಂದಿನಿಂದ ನೂತನ ರೈಲು ಸಂಚಾರ ಆರಂಭ
ಸುದ್ದಿದಿನ ಡೆಸ್ಕ್ : ಬೆಂಗಳೂರು- ಮಂಗಳೂರು ನಡುವೆ ಇಂದಿನಿಂದ ನೂತನ ರೈಲು ಸಂಚಾರ ಆರಂಭವಾಗಲಿದೆ. ಜುಲೈ 26 ರಿಂದ ಆಗಸ್ಟ್ 30 ರ ವರೆಗೆ ಮೈಸೂರು ಮಾರ್ಗದ ಮೂಲಕ ವಾರದಲ್ಲಿ ಮೂರು ದಿನ ಈ ರೈಲು ಸಂಚರಿಸಲಿದೆ.
ಬೆಂಗಳೂರಿನಿಂದ ಪ್ರತಿ ಮಂಗಳವಾರ, ಗುರುವಾರ ಹಾಗೂ ಭಾನುವಾರ ರಾತ್ರಿ 8.30ಗಂಟೆಗೆ ಹೊರಡುವ ರೈಲು ಮರುದಿನ ಬೆಳಿಗ್ಗೆ 9.05ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ. ಮಂಗಳೂರು ಸೆಂಟ್ರಲ್ ನಿಂದ ಜುಲೈ 27 ರಿಂದ ಪ್ರತಿ ಬುಧವಾರ, ಶುಕ್ರವಾರ ಮತ್ತು ಸೋಮವಾರ ಸಂಜೆ 6-35 ಕ್ಕೆ ಬಿಡುವ ರೈಲು ಮರುದಿನ ಬೆಳಿಗ್ಗೆ 6-15ಕ್ಕೆ ಬೆಂಗಳೂರು ತಲುಪಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243