ದಿನದ ಸುದ್ದಿ

ಚಲಿಸುತ್ತಿದ್ದ ರೈಲಿಗೆ ನವಿಲು ಢಿಕ್ಕಿ; ರೈಲಿ’ನ ಗಾಜು ಒಡೆದು ಚಾಲಕನಿಗೆ ಗಾಯ

Published

on

ಸುದ್ದಿದಿನ,ಮಂಗಳೂರು: ಚಲಿಸುತ್ತಿದ್ದ ರೈಲಿಗೆ ನವಿಲು ಢಿಕ್ಕಿಯಾಗಿ ಇಂಜಿನ್‌ನ ಗಾಜು ಒಡೆದು ಚಾಲಕ ಶಾಜಿ ಎಂಬವರಿಗೆ ಸಣ್ಣ-ಪುಟ್ಟ ಗಾಯವಾಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಇಂದು ಮಂಗಳೂರಿನಿಂದ ಕೊಯಂಬತೂರು ಕಡೆ ಹೋಗುತ್ತಿದ್ದ ಕೊಯಂಬತೂರ್ ಎಕ್ಸ್ ಪ್ರೆಸ್ ಸ್ಪೆಷಲ್ ಟ್ರೈನ್‌ ಸಂಚರಿಸುವ ವೇಳೆಯಲ್ಲಿ ಕುಂಬ್ಳೆ ಕಾಸರಗೋಡು ನಡುವೆ ಈ ಘಟನೆ ನಡೆದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version