ದಿನದ ಸುದ್ದಿ
ಕೋಲಾರದಲ್ಲಿ ಎಚ್ 1 ಎನ್1 ಗೆ ವ್ಯಕ್ತಿ ಬಲಿ
ಸುದ್ದಿದಿನ, ಕೋಲಾರ : ಜಿಲ್ಲೆಯ ಮುಳಬಾಗಿಲು ತಾಲೂಕಿನ ನಿಚ್ಚನಗುಂಟೆ ಗ್ರಾಮದ ಗಂಗಾಧರ್(32) ಎಂಬ ವ್ಯಕ್ತಿ ಎಚ್ 1 ಎನ್1 ಗೆ ಬಲಿಯಾಗಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಜ್ವರ ದಿಂದ ಬಳಲುತ್ತಿದ್ದ ಮೃತ ವ್ಯಕ್ತಿಯು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಎಚ್1 ಎನ್1 ಸೋಂಕು 13 ರೋಗಿಗಳಲ್ಲಿ ಪತ್ತೆಯಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ದೊರೆತಿದ್ದು, ಆತಂಕದಲ್ಲಿ ಜಿಲ್ಲೆಯ ಜನರು ಬದುಕುವಂತಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401