ದಿನದ ಸುದ್ದಿ

ಪ್ರತ್ಯೇಕ ಹಾಲು ಒಕ್ಕೂಟಕ್ಕೇ ಶೀಘ್ರ ಚಾಲನೆ : ಈಚಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘ ಸಿಇಒ ದೇವರಾಜ್

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ಪ್ರತ್ಯೇಕ ಹಾಲು ಒಕ್ಕೂಟ ನಿರ್ಮಾಣಕ್ಕೆ ಈಗಾಗಲೇ 14 ಎಕರೆ ಜಾಗ ಮತ್ತು ರಸ್ತೆ ಕೂಡ ಮಂಜೂರಾಗಿದ್ದು ಸ್ವಲ್ಪ ದಿನದಲ್ಲಿಯೇ ಗುದ್ದಲಿಪೂಜೆ ನೆರವೇರಲಿದೆ ಎಂದು ಈಚಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಸಿಇಒ ದೇವರಾಜ್ ಹೇಳಿದ್ದಾರೆ.

ಈ ಹಿಂದೆ ಮೂರು ಒಕ್ಕೂಟಗಳ ಲಾಭವೆಲ್ಲ ಒಂದೇ ಒಕ್ಕೂಟಕ್ಕೆ ಹೋಗುತ್ತದೆ. ಆದರೆ ದಾವಣಗೆರೆ ಪ್ರತ್ಯೇಕ ಒಕ್ಕೂಟವಾದರೆ ಲಾಭ ನಮ್ಮಲ್ಲಿಯೇ ಇರುತ್ತದೆ. ಮತ್ತು ಈ ಭಾಗಕ್ಕೆ ಅಧ್ಯಕ್ಷ ಸ್ಥಾನ ಸಿಗುವುದು ಕಷ್ಟ .ಈ ಹಿನ್ನೆಲೆಯಲ್ಲಿ ದಾವಣಗೆರೆ-ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಇದಕ್ಕಾಗಿಯೇ ಪ್ರತ್ಯೇಕ ಅನುದಾನ ಮೀಸಲಿರಿಸಿದ್ದಾರೆ.ಈಗಾಗಲೇ 230 ಕೋಟಿ ರೂ ಸಿದ್ದವಿದ್ದು, ಇನ್ನು ಕೆಲ ದಿನಗಳಲಿಯೇ ಪ್ರತ್ಯೇಕ ಒಕ್ಕೂಟ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಲಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version