ಸಿನಿ ಸುದ್ದಿ

ನೆರೆ ಸಂತ್ರಸ್ತರಿಗೆ ಹಾಡಿನ ಮೂಲಕ ಧೈರ್ಯ ತುಂಬಿದ ರೆಹಮಾನ್ !

Published

on

ಸುದ್ದಿದಿನ ಡೆಸ್ಕ್: ಮಹಾಮಳೆಗೆ ಸಂತ್ರಸ್ತರಾದ ಕೇರಳದ ಜನರಿಗೆ ಸಾಂತ್ವನದ ಮಾತುಗಳು ಜಗತ್ತಿನ ವಿವಿಧ ಭಾಗಗಳಿಂದ ಕೇಳಿ ಬರುತ್ತಿವೆ. ಕೆಲವರು ಧನ ಸಹಾಯ ಮಾಡುತ್ತಿದ್ದರೆ ಮತ್ತೆ ಕೆಲವರು ವಸ್ತುಗಳನ್ನು ನೀಡಿ ಸಹಕಾರ ತೋರುತ್ತಿದ್ದಾರೆ. ಇನ್ನು ಏರ್ ವೇಸ್ ವಿಮಾನ ಕಂಪನಿ ಉಚಿತ ಟಿಕೆಟ್ ನೀಡಿತ್ತು.

ಸದ್ಯ ನೆರೆ ಸಂತ್ರಸ್ತರಿಗೆ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಕೂಡ ಮಿಡಿದಿದ್ದು, ವಿಶಿಷ್ಟ ಸಹಾಯ ನೀಡಿದ್ದಾರೆ‌. ಹೌದು, ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ತಮ್ಮದೇ ಶೈಲಿಯಲ್ಲಿ ಕೇರಳಿಗರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಒಂದು ಸಂಗೀತ ಕಾರ್ಯಕ್ರಮದಲ್ಲಿ ‘ಮುಸ್ತಫಾ-ಮುಸ್ತಫಾ’ ಹಾಡು ಹಾಡುವಾಗ ಮಧ್ಯದಲ್ಲಿ ರೆಹಮಾನ್ ‘ಡೋಂಟ್ ವರಿ ಕೇರಳ’ ಎಂದು ಹಾಡಿದರು. ಇದಕ್ಕೆ ನೆರೆದ ಪ್ರೇಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

web title: A R Rahman dedicates one of his iconic songs to Kerala flood victims

Leave a Reply

Your email address will not be published. Required fields are marked *

Trending

Exit mobile version