ದಿನದ ಸುದ್ದಿ
ಒಡಹುಟ್ಟಿದ ಅಕ್ಕನನ್ನೇ ಬೆಂಕಿಹಚ್ಚಿ ಸುಟ್ಟು ಕೊಂದ ತಂಗಿ..!
ಸುದ್ದಿದಿನ, ತೆಲಂಗಾಣ : ಸಣ್ಣ ಜಗಳಕ್ಕೆ ತನ್ನ ಒಡಹುಟ್ಟಿದ ಅಕ್ಕನನ್ನೇ ಬೆಂಕಿಹಚ್ಚಿ ಸುಟ್ಟು ಕೊಂದ ಘಟನೆ ವರದಿಯಾಗಿದೆ. ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆ ಇದು. ಅಕ್ಕ ಸುಟ್ಟು ಕರಕಲಾಗುತ್ತಿದ್ದರೂ ಸಹಾಯಕ್ಕೆ ಬಾರದೆ ವಿಕೃತ ಮೆರೆದ ತಂಗಿ.
ವರಲಕ್ಷ್ಮಿ ಎಂಬಾಕೆಯನ್ನೇ ಆಕೆಯ ತಂಗಿ ರಾಜೇಶ್ವರಿ ಸುಟ್ಟು ಕೊಂದು ಹಾಕಿದ್ದಾಳೆ. ಮನೆಯಲ್ಲಿದ್ದ ವೇಳೆ ಇಬ್ಬರ ನಡುವೆ ಸಣ್ಣ ವಿಚಾರಕ್ಕೆ ಮಾತುಕತೆ ನಡೆದಿದೆ. ಇದಕ್ಕೆ ಸಿಟ್ಟಿಗೆದ್ದ ರಾಜೇಶ್ವರಿ , ಅಕ್ಕ ವರಲಕ್ಷ್ಮಿ ಮೇಲೆ ಅಲ್ಲೇ ಇದ್ದ ಪೆಟ್ರೋಲ್ ಕ್ಯಾನ್ ನಲ್ಲಿದ್ದ ಪೆಟ್ರೋಲ್ ಸುರಿದು ಹಿಂದೆ ಮುಂದೇ ಯೋಚಿಸದೆ ಬೆಂಕಿ ಗೀರಿಬಿಟ್ಟಿದ್ದಳು.
ಇದನ್ನೂ ಓದಿ |ಆಯುಷ್ಮಾನ್ ಭಾರತ್ : ಆರೋಗ್ಯ ಕರ್ನಾಟಕ ಯೋಜನೆಯ ಮಾಹಿತಿ
ಅಕ್ಕ ಸಹಾಯಕ್ಕೆ ಗೋಗರಿದರೂ ಸಹಾಯಕ್ಕೆ ಬಾರದೆ ವಿಕೃತವಾಗಿ ನಡೆದುಕೊಂಡಿದ್ದಾಳೆ. ನಂತರ ಭಯಗೊಂಡ ರಾಜೇಶ್ವರಿ ಕೂಡ ತನಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾಳೆ. ಸ್ಥಳೀಯರು ಪೊಲೀಸರಿಗೆ ವಿಚಾರ ಮುಟ್ಟಿಸಿದಾಗ ಸ್ಥಳಕ್ಕೆ ಧಾವಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243