ದಿನದ ಸುದ್ದಿ
ಬಿಜೆಪಿ ವಿರುದ್ಧ ಕೂಗಿದ ವಿದ್ಯಾರ್ಥಿನಿ ನ್ಯಾಯಾಂಗ ವಶಕ್ಕೆ
ಸುದ್ದಿದಿನ ಡೆಸ್ಕ್: ಬಿಜೆಪಿ ವಿರುದ್ಧ ಕೂಗಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳನ್ನು ಬಂಧಿಸಿರುವ ಪೊಲೀಸರು 15 ದಿನ ನ್ಯಾಯಾಂಗ ಬಂಧನ ಒಪ್ಪಿಸಿದ್ದಾರೆ. ಕೆನಡಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಚೆನ್ನೈನ ಏರ್ಪೋರ್ಟ್ ನಲ್ಲಿ ಕೆನಡಾದಿಂದ ಬಂದಿಳಿದ ಕೂಡಲೇ ಫಾಸಿಸ್ಟ್ ಬಿಜೆಪಿ ಗವರ್ನಮೆಂಟ್ ಡೌನ್ ಡೌನ್ ಎಂದು ಕೂಗಿದ್ದಾರೆ. ಇದೇ ಸ್ಥಳದಲ್ಲಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷರಾದ ತಮಿಳೈಸಾಯಿ ಸೌಂದರ್ರಾಜನ್ ವಿದ್ಯಾರ್ಥಿನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿದ್ಯಾರ್ಥಿನಿಯನ್ನು ಬಂಧಿಸಿ 15 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಲೂಯಿಸ್ ಸೋಫಿಯಾ ಬಂಧಿತ ವಿದ್ಯಾರ್ಥಿನಿ. ಕೆನಡಾದಿಂದ ಚೆನ್ನೈನ ಟ್ಯುಟಿಕೋರಿನ್ ಏರ್ಪೋರ್ಟ್ ಗೆ ಬಂದಿಳಿದ ವಿದ್ಯಾರ್ಥಿನಿ ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ದಾಳೆ. ಇದೇ ಸ್ಥಳದಲ್ಲಿದ್ದ ತಮಿಳುನಾಡು ಬಿಜೆಪಿಯ ಅಧ್ಯಕ್ಷರಾದ ತಮಿಳಿಸಾಯಿ ಇದನ್ನು ಖಂಡಿಸಿ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಮೀಸ್ಚೇಫ್, ಗೊಂದಲ ಸೃಷ್ಟಿ ಪ್ರಕರಣದಡಿ ವಿದ್ಯಾರ್ಥಿನಿಯನ್ನು ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401